ಪುಣೆ: ನಟಿ ಮತ್ತು ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು 1919ರ ರೌಲಟ್ ಕಾಯ್ದೆಗೆ ಹೋಲಿಸಿದ್ದಾರೆ.
ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದಲ್ಲಿ ಅಶಾಂತಿ ಮತ್ತು ಭೀತಿ ಎದುರಾಗುತ್ತದೆ ಎಂದು ಬ್ರಿಟಿಷರಿಗೆ ತಿಳಿದಿತ್ತು. ಹೀಗಾಗಿ ಅವರು 1919 ರಲ್ಲಿ ರೌಲಟ್ ಆಕ್ಟ್ ಎಂದು ಕರೆಯಲ್ಪಡುವ ಕಾನೂನನ್ನು ತಂದು ತಮ್ಮ ಹಿಡಿತವನ್ನ ಬಿಗಿಗೊಳಿಸಿದ್ದರು. ಇದೇ ಮಾದರಿಯಲ್ಲಿ ಸಿಎಎ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ನಟಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಮಾತೋಂಡ್ಕರ್, ತಿದ್ದುಪಡಿ ಮಾಡಿದ ಪೌರತ್ವ ಕಾನೂನು ಮತ್ತು ರೌಲಟ್ ಕಾಯ್ದೆಯನ್ನು 'ಇತಿಹಾಸದಲ್ಲಿಯೇ ಕಪ್ಪು ಕಾನೂನುಗಳು ಎಂದಿದ್ದಾರೆ.
ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅಂಗೀಕರಿಸಿದ ರೌಲಟ್ ಆಕ್ಟ್ ಪ್ರಕಾರ, ಬ್ರಿಟಿಷರ ವಿರುದ್ಧ ಯಾರಾದರೂ ಸಂಚು ರೂಪಿಸುತ್ತಿದ್ದಾರೆ ಎಂದು ಭಾವಿಸಿದ್ರೆ ಸಾಕು, ಅವರನ್ನು ಯಾವುದೇ ಸಮಯದಲ್ಲಾದ್ರೂ ಯಾವುದೇ ವಿಚಾರಣೆ ಮಾಡದೇ ಬಂಧಿಸಬಹುದಾಗಿತ್ತು.