ETV Bharat / bharat

ಮಹಿಳಾ ಕಮಾಂಡರ್​ ನೇತೃತ್ವದಲ್ಲಿ ಈ ಬಾರಿ ರಾಜ್​ಪಥ್​ನಲ್ಲಿ ಶಿಲ್ಕಾ ಶಸ್ತ್ರಾಸ್ತ್ರ ಪ್ರದರ್ಶನ - ಶಿಲ್ಕಾ ಶಸ್ತ್ರಾಸ್ತ್ರದ ಪ್ರದರ್ಶನ

ಈ ಬಾರಿ ಗಣರಾಜ್ಯೋತ್ಸ ಸಂದರ್ಭದಲ್ಲಿ ಮೊದಲ ಬಾರಿಗೆ ರಾಜ್‌ಪಥ್​​ನಲ್ಲಿ ನವೀಕರಿಸಿದ ಶಿಲ್ಕಾ ಶಸ್ತ್ರಾಸ್ತ್ರದ ಪ್ರದರ್ಶನ ನಡೆಯಲಿದೆ. ಇದು ನೆಲದ ಮೇಲೆ 2 ಕಿಲೋಮೀಟರ್ ಮತ್ತು ಗಾಳಿಯಲ್ಲಿ ಸುಮಾರು 2.5 ಕಿಲೋಮೀಟರ್​​ವರೆಗೆ ಶತ್ರುಗಳನ್ನು ಗುರಿಯಾಗಿಸಿ ಪತ್ತೆಹಚ್ಚಿ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಪ್ಟನ್ ಪ್ರೀತಿ ಚೌಧರಿ
ಕ್ಯಾಪ್ಟನ್ ಪ್ರೀತಿ ಚೌಧರಿ
author img

By

Published : Jan 24, 2021, 7:59 AM IST

ನವದೆಹಲಿ: ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವದ ರಾಜ್​​ಪಥ್​​​​ನಲ್ಲಿ ಮೊದಲ ಬಾರಿಗೆ ಸುಧಾರಿತ ಶಿಲ್ಕಾ ಶಸ್ತ್ರಾಸ್ತ್ರದ ಪ್ರದರ್ಶನ ನಡೆಯಲಿದೆ. ಇದರ ಪ್ರದರ್ಶನ ಭಾರತೀಯ ಸೇನೆಯ ಮಹಿಳಾ ಕಮಾಂಡರ್​​ ಪ್ರೀತಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿರುವುದು ವಿಶೇಷ.

ಕ್ಯಾಪ್ಟನ್ ಪ್ರೀತಿ ಚೌಧರಿ

"ಮೊದಲ ಬಾರಿಗೆ ರಾಜಪಥ್​ನಲ್ಲಿ ನವೀಕರಿಸಿದ ಶಿಲ್ಕಾ ಪ್ರದರ್ಶನ ನಡೆಯಲಿದೆ. ಇದು ನೆಲದ ಮೇಲೆ ಎರಡು ಕಿಲೋಮೀಟರ್​ ದೂರದಲ್ಲೇ ಶತ್ರುಗಳನ್ನು ಗುರಿಯಾಗಿಸಿ ಅವರನ್ನು ಸದೆಬಡಿಯಲಿದೆ. ಗಾಳಿಯಲ್ಲಿ ಸುಮಾರು 2.5 ಕಿಲೋಮೀಟರ್​ವರೆಗೆ ಶತ್ರುಗಳನ್ನು ಪತ್ತೆಹಚ್ಚಿ ಶೂಟ್ ಮಾಡಲಿದೆ" ಎಂದು ಕ್ಯಾಪ್ಟನ್ ಪ್ರೀತಿ ಚೌಧರಿ ಹೇಳಿದ್ದಾರೆ.

ಓದಿ:ಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಗುವಿನ ಸ್ಥಿತಿ ಗಂಭೀರ

ಆಧುನಿಕ ರೇಡಾರ್ ಮತ್ತು ಡಿಜಿಟಲ್ ಫೈರ್ ಕಂಟ್ರೋಲ್ ಕಂಪ್ಯೂಟರ್‌ಗಳನ್ನು ಹೊಂದಿದ ನವೀಕರಿಸಿದ ಶಿಲ್ಕಾ ಶಸ್ತ್ರಾಸ್ತ್ರವೂ, ಎಲ್ಲಾ ಸಮಯದಲ್ಲೂ ಶತ್ರುಗಳನ್ನು ಗುರಿಯಾಗಿಸಿ ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಗುರಿಗಳ ಮೇಲೆ ಇದು ನಿಖರವಾದ ಕಣ್ಣಿಟ್ಟಿರುತ್ತದೆ ಎಂದು ಕ್ಯಾಪ್ಟನ್​ ಚೌಧರಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.