ETV Bharat / bharat

ಉ.ಪ್ರದೇಶದಲ್ಲಿ ಮೂರು ವರ್ಷ ಪೂರೈಸಿದ ಬಿಜೆಪಿ: ಸಿಎಂ ಯೋಗಿ ದಾಖಲೆ - ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿ

2017ರ ಮಾರ್ಚ್​ 19 ರಂದು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯೋಗಿ ಆದಿತ್ಯನಾಥ್​, ರಾಜ್ಯದಲ್ಲಿ ಮೂರು ವರ್ಷ ಅಧಿಕಾರ ಪೂರೈಸಿದ ಮೊದಲ ಬಿಜೆಪಿ ಪಕ್ಷದ ಸಿಎಂ ಆಗಿದ್ದಾರೆ.

UP CM Yogi Aditynath
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
author img

By

Published : Mar 15, 2020, 4:34 PM IST

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ರಾಜ್ಯದಲ್ಲಿ ಮೂರು ವರ್ಷ ಅಧಿಕಾರ ಪೂರೈಸಿದ ಮೊದಲ ಬಿಜೆಪಿ ಸಿಎಂ ಆಗಿ ದಾಖಲೆ ನಿರ್ಮಿಸಿದ್ದಾರೆ.

2017ರ ಮಾರ್ಚ್​ 19 ರಂದು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ (47) ಅಧಿಕಾರ ಸ್ವೀಕರಿಸಿದ್ದರು. ಯೋಗಿ, ಬಿಜೆಪಿಯಿಂದ ಸ್ಪರ್ಧಿಸಿ ಸಿಎಂ ಗದ್ದುಗೆಗೇರಿದ ನಾಲ್ಕನೇ ವ್ಯಕ್ತಿಯಾಗಿದ್ದು, ಇವರಿಗೂ ಮುನ್ನ ಬಿಜೆಪಿ ನಾಯಕರಾದ ಕಲ್ಯಾಣ್​ ಸಿಂಗ್​, ರಾಮ್​ ಪ್ರಕಾಶ್​ ಗುಪ್ತಾ ಹಾಗೂ ರಾಜನಾಥ್ ಸಿಂಗ್​ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.

ಕಲ್ಯಾಣ್​ ಸಿಂಗ್, ಎರಡು ಬಾರಿ ಉತ್ತರ ಪ್ರದೇಶದ ಸಿಎಂ ಆಗಿದ್ದರಾದರೂ ಒಂದು ಬಾರಿ ಕೂಡ ಮೂರು ವರ್ಷ ಪೂರೈಸಿಲ್ಲ. 1991ರ ಜೂನ್ 24 ರಿಂದ 1992ರ ಡಿ.6 ರ ವರೆಗೆ ಒಂದು ಬಾರಿ, ಎರಡನೇ ಬಾರಿ 1997ರ ಸೆ.21 ರಿಂದ 1999ರ ನ.12ರ ವರೆಗೆ ಆಡಳಿತ ನಡೆಸಿದ್ದರು. ಇವರ ಬಳಿಕ ಅಧಿಕಾರಕ್ಕೆ ಬಂದ ​ರಾಮ್​ ಪ್ರಕಾಶ್​ ಗುಪ್ತಾ 1999ರ ನ.12 ರಿಂದ 2000, ಅ.28ರ ವರೆಗೆ ಮಾತ್ರ ಸಿಎಂ ಕುರ್ಚಿ ಮೇಲೆ ಕುಳಿತಿದ್ದರು. ನಂತರ ಇವರ ಸ್ಥಾನವನ್ನು ಪಡೆದ ರಾಜನಾಥ್ ಸಿಂಗ್ 2002ರ ಮಾ.8 ರ ವರೆಗೆ ಸೇವೆ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.