ETV Bharat / bharat

ಲವ್ ಜಿಹಾದ್ ನಿಲ್ಲಿಸದಿದ್ದರೇ 'ರಾಮ್ ನಾಮ್ ಸತ್ಯ ಹೈ' ಹಾದಿ ತೋರಿಸುತ್ತೇವೆ: ಯೋಗಿ ಖಡಕ್​ ಎಚ್ಚರಿಕೆ - ಭಾರತದಲ್ಲಿ ಲವ್ ಜಿಹಾದ್​

ಲವ್​ ಜಿಹಾದ್ ತಡೆಗೆ ನಾವು ಪರಿಣಾಮಕಾರಿ ಕಾನೂನು ತರುತ್ತೇವೆ. ಘನತೆಯಿಂದ ಇರುವ ಸಹೋದರಿಯರ ಮತ್ತು ಹೆಣ್ಣುಮಕ್ಕಳ ಗೌರವದ ನೈಜ ಹೆಸರು ಮತ್ತು ಗುರುತುಗಳನ್ನು ಮರೆ ಮಾಚುವ ಆಟ ಆಡುವವರಿಗೆ ಇದು ನನ್ನ ಕಠಿಣ ಎಚ್ಚರಿಕೆ. ಅವರು ತಮ್ಮ ಮಾರ್ಗಗಳನ್ನು ಸರಿಪಡಿಸದಿದ್ದರೆ, ರಾಮ್ ನಾಮ್ ಸತ್ಯ ಹೈ ಹಾದಿ ಆರಂಭವಾಗುತ್ತದೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

Yogi Adityanath
ಸಿಎಂ ಯೋಗಿ
author img

By

Published : Oct 31, 2020, 8:53 PM IST

ಲಖನೌ: ವಿವಾಹದ ಉದ್ದೇಶಕ್ಕಾಗಿ ಮತಾಂತರ ಹೊಂದುವುದು ಸ್ವೀಕಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ಸ್ವಾಗತಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತಮ್ಮ ಸರ್ಕಾರ ಲವ್ ಜಿಹಾದ್" ಅನ್ನು ಶಕ್ತಿಯುತವಾದ ಕೈಯಿಂದ ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಣ್ಣುಮಕ್ಕಳ ಮತ್ತು ಸಹೋದರಿಯರ ಗೌರವಗಳೊಂದಿಗೆ ಆಟವಾಡಿ ಅವರ ಗುರುತುಗಳನ್ನು ಮರೆ ಮಾಚುವುದನ್ನು ಜನರು ನಿಲ್ಲಿಸದಿದ್ದರೇ ರಾಮ್ ನಾಮ್ ಸತ್ಯ ಹೈ ಹಾದಿ ಪ್ರಾರಂಭವಾಗಲಿದೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಮತಾಂತರವನ್ನು ಕೇವಲ ಮದುವೆಗೆ ಮಾತ್ರ ಆಶ್ರಯಿಸಬಾರದು. ಅದಕ್ಕೆ ಮಾನ್ಯತೆ ನೀಡಬಾರದು ಎಂದು ಅಲಹಾಬಾದ್ ಹೈಕೋರ್ಟ್ ನಿನ್ನೆ ಹೇಳಿದೆ. ನಮ್ಮ ಸರ್ಕಾರವು ಲವ್​ ಜಿಹಾದ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ನವೆಂಬರ್​ 3ರಂದು ನಡೆಯಲ್ಲಿರುವ ಜೌನ್‌ಪುರದ ಮಲ್ಹಾನಿ ಮತ್ತು ಡಿಯೋರಿಯಾ ವಿಧಾನಸಭಾ ಉಪಚುನಾವಣೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನಾವು ಇದಕ್ಕಾಗಿ ಪರಿಣಾಮಕಾರಿ ಕಾನೂನನ್ನು ತರುತ್ತೇವೆ. ಘನತೆಯಿಂದ ಇರುವ ಸಹೋದರಿಯರ ಮತ್ತು ಹೆಣ್ಣುಮಕ್ಕಳ ಗೌರವದ ನೈಜ ಹೆಸರು ಮತ್ತು ಗುರುತುಗಳನ್ನು ಮರೆ ಮಾಚುವ ಆಟವಾಡುವವರಿಗೆ ಇದು ನನ್ನ ಕಠಿಣ ಎಚ್ಚರಿಕೆ. ಅವರು ತಮ್ಮ ಮಾರ್ಗಗಳನ್ನು ಸರಿಪಡಿಸದಿದ್ದರೆ, ರಾಮ್ ನಾಮ್ ಸತ್ಯ ಹೈ ಹಾದಿ ಆರಂಭವಾಗುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.