ಫಿರೋಜಬಾದ್: ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆಗೆಂದು ದಾಖಲಾದ ರೋಗಿ ಪರದಾಡುವಂತಾಗಿದೆ.
ಫಿರೋಜಾಬಾದ್ ಜಿಲ್ಲೆಯ ಶಿಕೋಬಾದ್ ವ್ಯಾಪ್ತಿಯ ಸರ್ಕಾರಿ ವೈದ್ಯನೋರ್ವ ರೋಗಿಗೆ ಸಶ್ತ್ರಚಿಕತ್ಸೆ ನೆರವೇರಿಸಿ ಮೊಬೈಲ್ ಟಾರ್ಚ್ಲೈಟ್ನ ಹೊಟ್ಟೆಯೊಳಗೆ ಇರಿಸಿ ಹೊಲಿಗೆ ಹಾಕಿದ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸುವ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್ ಟಾರ್ಚ್ಲೈಟ್ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಅದನ್ನು ಶಸ್ತ್ರ ಚಿಕಿತ್ಸೆ ನಡಿಸಿದ ಗಾಯದೊಳಗೆ ಇರಿಸಿ ಹೊಲಿಗೆ ಹಾಕಿದ್ದಾರೆ.
ರೋಗಿಯ ಪೋಷಕರಿಗೆ ಗಾಯದೊಳಗೆ ಟಾರ್ಚ್ಲೈಟ್ ಇರುವುದನ್ನು ಗಮನಿಸಿ ಆಸ್ಪತ್ರೆ ಕರೆತಂದಿದ್ದಾರೆ. 'ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವಿದ್ಯುತ್ ಇರಲಿಲ್ಲ. ಸಂಪೂರ್ಣ ಕತ್ತಲು ಆವರಿಸಿತ್ತು. ಮೊಬೈಲ್ ಟಾರ್ಚ್ಲೈಟ್ನಲ್ಲಿ ಚಿಕಿತ್ಸೆ ನೀಡಿದ್ದಾರೆ' ಎಂದು ಪೋಷಕರು ಹೇಳಿದರು.ಕರ್ತವ್ಯ ನಿರತ ವೈದ್ಯ ಅಭಿಷೇಕ್ ಮಾತನಾಡಿ, ರೋಗಿ ಈಗ ಅಸಾಯಕನಾಗಿದ್ದಾನೆ. ನಾವು ಸಾಧ್ಯವಾದಷ್ಟು ಚಿಕಿತ್ಸೆ ನೀಡುತ್ತೇವೆ. ಎಲೆಕ್ಟ್ರಿಕ್ ಪವರ್ ಇರದಿದ್ದ ಕಾರಣ ಮೊಬೈಲ್ ಟಾರ್ಚ್ಲೈಟ್ನಲ್ಲಿ ಚಿಕಿತ್ಸೆ ನೀಡಬೇಕಾಯಿತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.