ETV Bharat / bharat

ನಿಜಾಮುದ್ದೀನ್​ ಮರ್ಕಜ್​ ಮುಖ್ಯಸ್ಥನಿಗೆ 2ನೇ ನೋಟಿಸ್ ನೀಡಲು ಸಿದ್ಧತೆ

author img

By

Published : Apr 6, 2020, 7:06 PM IST

ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ತಿಳಿಸಿರುವ ದೆಹಲಿ ಕ್ರೈಂ ಬ್ರಾಂಚ್​ ಪೊಲೀಸರು ಸಾದ್​ಗೆ ಮತ್ತೊಂದು ನೋಟಿಸ್​ ನೀಡಲು ನಿರ್ಧರಿಸಿದ್ದಾರೆ. ಸೂಕ್ತ ದಾಖಲಾತಿಗಳೊಂದಿಗೆ ವಿವರಣಾತ್ಮಕ ಉತ್ತರ ನೀಡುವಂತೆ ಮತ್ತೊಮ್ಮೆ ನೋಟಿಸ್​ ನೀಡಲಾಗುವುದು ಎಂದು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್​ ಮೂಲಗಳು ಈಟಿವಿ ಭಾರತ್​ಗೆ ತಿಳಿಸಿವೆ.

Delhi Police to issue second notice to Nizamuddin Markaz chief

ಹೊಸದಿಲ್ಲಿ: ಮೊದಲ ನೋಟಿಸಿಗೆ 'ಅತೃಪ್ತಿಕರ ಉತ್ತರ' ಉತ್ತರ ಬಂದ ಹಿನ್ನೆಲೆಯಲ್ಲಿ ನಿಜಾಮುದ್ದೀನ್​ ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಕಂಧಲಾವಿಗೆ ಎರಡನೇ ನೋಟಿಸ್ ಜಾರಿ ಮಾಡಲು ದೆಹಲಿ ಪೊಲೀಸರು ಸೋಮವಾರ ನಿರ್ಧರಿಸಿದ್ದಾರೆ.

"ಮೊದಲ ನೋಟಿಸಿಗೆ ಮೌಲಾನಾ ಸಾದ್ ನೀಡಿರುವ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 91ರ ಅಡಿ, ಸೂಕ್ತ ದಾಖಲಾತಿಗಳೊಂದಿಗೆ ವಿವರಣಾತ್ಮಕ ಉತ್ತರ ನೀಡುವಂತೆ ಮತ್ತೊಮ್ಮೆ ನೋಟಿಸ್​ ನೀಡಲಾಗುವುದು." ಎಂದು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್​ ಮೂಲಗಳು ಈಟಿವಿ ಭಾರತ್​ಗೆ ತಿಳಿಸಿವೆ.

ತಾನು ಸ್ವಯಂ ಕ್ವಾರಂಟೈನ್​ನಲ್ಲಿದ್ದು, ಸದ್ಯಕ್ಕೆ ಪೊಲೀಸರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮರ್ಕಜ್​​ಗೆ ಬೀಗ ಹಾಕಿರುವುದರಿಂದ ಅಗತ್ಯ ದಾಖಲೆಗಳನ್ನು ಹೊಂದಿಸಲಾಗುತ್ತಿಲ್ಲ ಎಂದು ಮೌಲಾನಾ ಸಾದ್​ ದೆಹಲಿ ಪೊಲೀಸರ ನೋಟಿಸಿಗೆ ಶನಿವಾರ ಉತ್ತರ ನೀಡಿದ್ದ.

ತಬ್ಲೀಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ ಇಂಡೋನೇಶಿಯಾ, ಬಾಂಗ್ಲಾದೇಶ ಮತ್ತು ಇತರ ದೇಶಗಳ ಸುಮಾರು 2,000 ಜನರ ಪೈಕಿ ಇನ್ನೂ ಅನೇಕರು ಪತ್ತೆಯಾಗಿಲ್ಲ. ಜಮಾತ್ ಮುಖ್ಯಸ್ಥ ಮೌಲಾನಾ ಸಾದ್​ಗೆ ಇವರೆಲ್ಲರೂ ಇರುವ ಸ್ಥಳದ ನಿಖರ ಮಾಹಿತಿ ಇರಬಹುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಲಾಕ್​ಡೌನ್​ ಆದೇಶಗಳನ್ನು ಉಲ್ಲಂಘಿಸಿ ಧಾರ್ಮಿಕ ಸಮಾವೇಶ ನಡೆಸಿದ್ದಕ್ಕಾಗಿ ಮೌಲಾನಾ ಸಾದ್ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿಯಡಿ ದೆಹಲಿ ಪೊಲೀಸರು ಮಂಗಳವಾರ ಎಫ್​ಐಆರ್​ ದಾಖಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.