ETV Bharat / bharat

ವಿಶೇಷ ಅಂಕಣ... ಉನ್ನಾವೊ ಪ್ರಕರಣ: ಅಪರಾಧಕ್ಕೆ ಬೆಲೆ ತೆತ್ತ ನ್ಯಾಯ - unnavo case

ಆದರ್ಶವಿಲ್ಲದ ರಾಜಕೀಯದಿಂದ ಬರುವ ಜನಪ್ರತಿನಿಧಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವುದರಿಂದ ಹಾಗೂ ಇನ್ನೂ ಇಂತಹ ವಿವಿಧ ಅಪರಾಧಗಳಿಂದಾಗಿ ಭಾರತ ಅದೆಷ್ಟು ಕೆಳಗೆ ಇಳಿದಿದೆ ಎಂದರೆ, ಪ್ರತಿಯೊಂದು ಪುಟವೂ ಅತ್ಯಾಚಾರದ ಪ್ರಕರಣಗಳಿಂದಾಗಿ ತುಂಬಿಹೋಗುವಂತಾಗಿದೆ.

unnavo case
ಉನ್ನಾವೊ ಪ್ರಕರಣ
author img

By

Published : Dec 30, 2019, 3:30 PM IST

Updated : Dec 30, 2019, 6:49 PM IST

ಒಂದು ವೇಳೆ ದೋಚುವಿಕೆ, ತುಳಿತ, ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆಗಳು ಇಲ್ಲದ, ನಿರ್ಭೀತ ಸಮಾಜವೊಂದು ಅಸ್ತಿತ್ವದಲ್ಲಿದ್ದರೆ...? ಎಷ್ಟು ಚೆಂದವಲ್ಲವೆ ಈ ಕನಸು? ಆದರ್ಶವಿಲ್ಲದ ರಾಜಕೀಯದಿಂದ ಬರುವ ಜನಪ್ರತಿನಿಧಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವುದರಿಂದ ಹಾಗೂ ಇನ್ನೂ ಇಂತಹ ವಿವಿಧ ಅಪರಾಧಗಳಿಂದಾಗಿ ಭಾರತ ಅದೆಷ್ಟು ಕೆಳಗೆ ಇಳಿದಿದೆ ಎಂದರೆ, ಪ್ರತಿಯೊಂದು ಪುಟವೂ ಅತ್ಯಾಚಾರದ ಪ್ರಕರಣಗಳಿಂದಾಗಿ ತುಂಬಿಹೋಗುವಂತಾಗಿದೆ.

ದುಷ್ಟತೆಯ ವಿರುದ್ಧ ಒಳ್ಳೆಯದರ ಗೆಲುವನ್ನು ಹಬ್ಬವಾಗಿ ಆಚರಿಸಲು ಹೆಸರುವಾಸಿಯಾಗಿರುವುದು ಭಾರತದ ಸಂಸ್ಕೃತಿ. ಆದರೆ, ಅತ್ಯಾಚಾರ, ದೌರ್ಜನ್ಯ, ಶೋಷಣೆ, ಹಿಂಸೆ ಮತ್ತು ಇಂತಹ ಇತರ ಕ್ರೂರ ಕೃತ್ಯಗಳಿಂದ ಸಂತ್ರಸ್ತರಾದವರ ಪಾಲಿಗೆ ನ್ಯಾಯ ಎಂಬುದು ಅಕ್ಷರಶಃ ಒಯಾಸಿಸನ್‌ನಂತಾಗಿ ಹೋಗಿದೆ. ನ್ಯಾಯವನ್ನು ಒದಗಿಸಲು ನಮ್ಮ ವ್ಯವಸ್ಥೆ ವಿಫಲವಾಗಿರುವುದರಿಂದ ಸಮಕಾಲೀನ ಸಮಾಜ ಹಾಳಾಗಿ ಹೋಗುತ್ತಿದೆ.

ನ್ಯಾಯಕ್ಕಾಗಿ ಆಗ್ರಹಿಸಿ ಹುಡುಗಿಯೊಬ್ಬಳು ಮುಖ್ಯಮಂತ್ರಿಯ ನಿವಾಸದ ಎದುರು ಆತ್ಮಹತ್ಯೆಗೆ ಪ್ರಯತ್ನಿಸದ ಹೊರತು, ನ್ಯಾಯಾಂಗ ವ್ಯವಸ್ಥೆಯಿಂದ ಆಕೆಗೆ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ ಎಂಬುದು ನಮ್ಮ ವ್ಯವಸ್ಥೆಯಲ್ಲಿರುವ ಶುದ್ಧ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಜ್ವಲಂತ ನಿದರ್ಶನ ಎನಿಸಿದೆ.

ಅಧಿಕಾರಿಗಳೆಂಬ ಸ್ವಜಾತಿ ಭಕ್ಷಕರು ಅನಾಗರಿಕವಾಗಿ ಮತ್ತು ಅದಕ್ಕಿಂತ ಹೆಚ್ಚಾಗಿ ಅಮಾನವೀಯವಾಗಿ ಆಕೆಯ ಕತ್ತನ್ನು ಸೀಳಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಸೂಕ್ತ ನಿದರ್ಶನವಾಗಿದೆ. ಪ್ರಕರಣದ ವಿಚಾರಣೆಯನ್ನು ಒಂದೂವರೆ ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶಿಸಿ ನಿರ್ದೇಶನ ನೀಡಿದ ನಂತರವಷ್ಟೇ ಅಧಿಕಾರಿಗಳೆನಿಸಿಕೊಂಡ ಇವರು ಸಕ್ರಿಯರಾಗಿದ್ದು.

ಈ ಪ್ರಕರಣದ ಪ್ರಮುಖ ಆರೋಪಿಗೆ ಕೊನೆಗೂ ಜೀವಾವಧಿ ಶಿಕ್ಷೆ ಘೋಷಿಸಲಾಯಿತು. ಭಯ ಹುಟ್ಟಿಸುವಂತಹ ಹಿಂಸಾತ್ಮಕ ಹಾಗೂ ಜೀವ ಬೆದರಿಕೆ ಇರುವ ವಾತಾವರಣದಲ್ಲಿ ಹುಡುಗಿಯೊಬ್ಬಳು ನ್ಯಾಯಕ್ಕಾಗಿ ಹೋರಾಡುತ್ತಿರುವಾಗ, ರಾಜಕೀಯ ಮತ್ತು ಜಾತಿ ನಾಯಕರು ಹೇಗೆ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಾರೆ ಹಾಗೂ ಆಡಳಿತ ವ್ಯವಸ್ಥೆಯ ಮೇಲೆ ಹೇಗೆ ಅಧಿಕಾರ ಚಲಾಯಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ.

ಪ್ರಕರಣ ನಡೆದು ಬಂದ ದಾರಿ

ಅಪರಾಧಿಗಳನ್ನು ತೊಡೆದು ಹಾಕುವ ಮೂಲಕ ಅಪರಾಧರಹಿತ ಸಮಾಜವನ್ನು ನಿರ್ಮಿಸುವ ಪ್ರಸ್ತಾವನೆಯೊಂದಕ್ಕೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರಕಾರ ಇತ್ತೀಚೆಗೆ ಅನುಮೋದನೆ ನೀಡಿತು. ನಂತರ ಈ ಪ್ರಕ್ರಿಯೆಯಡಿ, 100ಕ್ಕೂ ಹೆಚ್ಚು ಅಪರಾಧಿಗಳು ಹಾಗೂ ಸಮಾಜ ವಿರೋಧಿ ಶಕ್ತಿಗಳು ಶಿಕ್ಷೆಗೆ ಗುರಿಯಾದರು.

ರಾಜ್ಯದಲ್ಲಿ ಆದಿತ್ಯನಾಥ ಸರಕಾರ ರಚನೆಯಾದ ಮೂರು ತಿಂಗಳುಗಳ ನಂತರ, ಮಂಖಿ ಗ್ರಾಮದ 17 ವರ್ಷದ ಹುಡುಗಿಯೊಬ್ಬಳು 2017ರಿಂದ ಕಾಣೆಯಾಗಿರುವುದು ಪತ್ತೆಯಾಗುತ್ತದೆ.

ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌, ಆತನ ಸೋದರ ಅತುಪ್‌ ಸಿಂಗ್‌ ಮತ್ತು ಅವರ ಹಿಂಬಾಲಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಗಳು ಕೇಳಿಬರುತ್ತವೆ. ಮಗಳು ಕಾಣೆಯಾಗಿರುವುದಾಗಿ ಹುಡುಗಿಯ ತಂದೆ-ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರವಷ್ಟೇ, ಅಪರಾಧಿಗಳ ಉಕ್ಕಿನ ಹಿಡಿತದಿಂದ ಬಾಲಕಿ ಬಿಡುಗಡೆಯಾಗುತ್ತಾಳೆ.

ನಂತರ, ಶಾಸಕನ ವಿರುದ್ಧ ಪ್ರಕರಣ ದಾಖಲಿಸುವ ಧೈರ್ಯ ಮಾಡದ ಪೊಲೀಸರು, ಬಾಲಕಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಾರಲ್ಲದೇ, ಅಪಹರಣ ಪ್ರಕರಣವನ್ನು ದಾಖಲಿಸುತ್ತಾರೆ.

ಈ ಸಂಕಟ ಇಲ್ಲಿಗೇ ಕೊನೆಯಾಗುವುದಿಲ್ಲ. ಹುಡುಗಿಯ ತಂದೆಯನ್ನು ಥಳಿಸುವ ಶಾಸಕನ ಹಿಂಬಾಲಕರು, ಆತನ ವಿರುದ್ಧ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಹೊಂದಿರುವ ದೂರು ದಾಖಲಿಸಿ, ಆತನನ್ನು ಪೊಲೀಸ್‌ ಠಾಣೆಯ ವಶಕ್ಕೆ ನೀಡುತ್ತಾರೆ.

ಕೊಲ್ಲುವ ಬೆದರಿಕೆ ಅವರಿಂದ ಬಂದಾಗ, ಸಹಜವಾಗಿ ಬಾಲಕಿಯು ಮುಖ್ಯಮಂತ್ರಿಯ ನಿವಾಸದ ಎದುರು ತನ್ನ ಜೀವವನ್ನು ಕೊನೆಗಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಅದರ ಮರು ದಿನ, ಆಕೆಯ ತಂದೆಯ ಶವ ಪೊಲೀಸ್‌ ಠಾಣೆಯಲ್ಲಿ ಪತ್ತೆಯಾಗುತ್ತದೆ.

ಅಲಹಾಬಾದ್‌ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತವಾಗುವ ಸಿಬಿಐ, ಸದರಿ ಪ್ರಕರಣದಲ್ಲಿ ತೊಡಗಿಕೊಂಡಿರುವ ಶಾಸಕ, ಆತನ ಸೋದರ ಹಾಗೂ ಅವರ ಬೆಂಬಲಿಗರನ್ನು ಬಂಧಿಸುತ್ತದೆ.

ಕುತೂಹಲದ ಸಂಗತಿ ಎಂದರೆ, ಸಿಬಿಐ ಸಂಸ್ಥೆ ತಕ್ಷಣದ ಕ್ರಮಗಳನ್ನು ಕೈಗೊಳ್ಳದೇ ಪ್ರಕರಣವನ್ನು ಒಂದು ವರ್ಷದ ಕಾಲ ಎಳೆದಾಡುತ್ತದೆ. ಈ ಮಧ್ಯೆ, ಅಪರಾಧಿ ಶಾಸಕ ಸೋದರರು ಸಂತ್ರಸ್ತೆಯ ಸಂಬಂಧಿಕರನ್ನು ನಾನಾ ರೀತಿಯಿಂದ ಪೀಡಿಸಲು ತೊಡಗುತ್ತಾರೆ.

ಕೊಲೆ ಪ್ರಕರಣವೊಂದರಲ್ಲಿ ಸಂತ್ರಸ್ತೆಯ ಚಿಕ್ಕಪ್ಪನನ್ನು 10 ವರ್ಷದ ಶಿಕ್ಷೆಗೆ ಒಳಗಾಗುವಂತೆ ಅವರು ವ್ಯವಸ್ಥೆ ಮಾಡುತ್ತಾರೆ. ಅವರ ಮೇಲೆ ಲಾರಿ ಹರಿಸುವ ಮೂಲಕ ಸಂತ್ರಸ್ತೆಯ ಇಡೀ ಕುಟುಂಬವನ್ನು ಹೊಸಕಿ ಹಾಕುವ ವಿಫಲ ಪ್ರಯತ್ನವನ್ನು ಶಾಸಕ ಮಾಡುತ್ತಾನೆ. ಈ ಘಟನೆಯಲ್ಲಿ, ಹುಡುಗಿ ಮತ್ತು ಆಕೆಯ ವಕೀಲರು ಗಾಯಗೊಂಡು ಪಾರಾದರೂ, ಆಕೆಯ ಇಬ್ಬರು ಸಂಬಂಧಿಕರು ಮೃತರಾಗುತ್ತಾರೆ.

ಈ ಹೀನ ಅಪರಾಧ ಕೃತ್ಯ ಇಡೀ ದೇಶವನ್ನೇ ಅಲ್ಲಾಡಿಸಿ, ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ನಂತರ, ಬಿಜೆಪಿಯ ಉನ್ನತ ವಲಯ ಶಾಸಕ ಸೆಂಗರ್‌ನನ್ನು ಪಕ್ಷದಿಂದ ಉಚ್ಛಾಟಿಸುವ ಕ್ರಮವನ್ನು ತಡವಾಗಿ ಕೈಗೊಳ್ಳುತ್ತದೆ. ಆನಂತರ, ಅಪರಾಧ ಕೃತ್ಯ ಸಾಬೀತಾಗಿದ್ದರಿಂದ, ನ್ಯಾಯಾಲಯ ಸದರಿ ಶಾಸಕನಿಗೆ ಜೀವಾವಧಿ ಶಿಕ್ಷೆ ಘೋಷಿಸುತ್ತದೆ.

ತನ್ನ ಜೀವಕ್ಕೆ ಅಪಾಯವಿದೆ ಎಂದು ಕಳೆದ ವರ್ಷದ ಜುಲೈ 17ರಂದು ಆಕೆ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಳು. ಸದರಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆ ತಿಂಗಳಿನ ಕೊನೆಗೆ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರತಿ ದಿನ ವಿಚಾರಣೆ ನಡೆಸಿದ ನಂತರ ಶಾಸಕನೇ ಪ್ರಮುಖ ಅಪರಾಧಿ ಎಂದು ಕಂಡುಕೊಂಡ ನ್ಯಾಯಾಲಯ ಈ ಸೂಕ್ಷ್ಮ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹೀಗಿರುವಾಗ, ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಸಂತ್ರಸ್ತರ ಮೇಲೆ ಅನ್ಯಾಯ ಎಸಗುತ್ತಿರುವ ಹಾಗೂ ನಾಯಕರ ಉಕ್ಕಿನ ಹಿಡಿತದಲ್ಲಿ ಸಿಲುಕಿರುವ ಪೊಲೀಸರು ಮತ್ತು ತನಿಖಾ ಸಂಸ್ಥೆಗಳ ಮೇಲೆ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ?

ಈ ಸೂಕ್ಷ್ಮ ಉನ್ನಾವೊ ಪ್ರಕರಣ ಕುರಿತಂತೆ ಕಟುವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್‌, ಸಂತ್ರಸ್ತೆಗೆ ನ್ಯಾಯಾಲಯದಿಂದ ಪರಿಹಾರ ನೀಡಬೇಕೆಂಬ ಸಾಲಿಸಿಟರ್‌ ಜನರಲ್‌ ಅವರ ಮನವಿಗೆ ಕರಗಲು ನಿರಾಕರಿಸಿತು.

ಈ ದೇಶದಲ್ಲಿ ಕಾಯ್ದೆ ಮತ್ತು ಕಾನೂನಿನ ಪ್ರಕಾರ ಏನಾದರೂ ನಡೆಯುತ್ತಿದೆಯೆ ಎಂದೂ ಅದು ಪ್ರಶ್ನಿಸಿತು. ಅಪರಾಧಗಳು ಹಾಗೂ ಪ್ರಕರಣಗಳ ಕುರಿತು ಕೆಲವು ಮಹತ್ವದ ಟೀಕೆಗಳನ್ನು ಮಾಡಿರುವ ಸುಪ್ರೀಂಕೋರ್ಟ್‌, ನಿಜವಾಗಿಯೂ ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಕಳವಳವನ್ನೂ ವ್ಯಕ್ತಪಡಿಸಿದೆ.

ಈ ಮಹಾನ್‌ ಉತ್ತರ ಪ್ರದೇಶ ರಾಜ್ಯದಲ್ಲಿ, ಕಳೆದ ನವೆಂಬರ್‌ನಿಂದ ಐದು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ವರದಿಯಾಗಿವೆ.

ಎಲ್ಲಕ್ಕಿಂತ ಹೆಚ್ಚು ಆಘಾತಕಾರಿ ಘಟನೆ ಎಂದರೆ, ಗೂಂಡಾಗಳ ತಂಡವೊಂದು ನ್ಯಾಯಾಲಯದ ಸನಿಹದಲ್ಲಿಯೇ ಹೆಣ್ಣುಮಗಳೊಬ್ಬಳಿಗೆ ಬೆಂಕಿ ಹಚ್ಚಿದೆ. ಅಪರಾಧಿಗಳ ವಿರುದ್ಧ ತಾನು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ ಹಾಜರಾಗಲು ಆಕೆ ನ್ಯಾಯಾಲಯಕ್ಕೆ ಹೊರಟಿದ್ದಳು.

ಮೈತುಂಬ ಬೆಂಕಿ ಆವರಿಸಿರುವಂತೆಯೇ, ಜೀವ ಉಳಿಸಿಕೊಳ್ಳಲೆಂದು ಆಕೆ ಸುಮಾರು ಒಂದು ಕಿಮೀ ಓಡಿ ಹೋಗಿದ್ದಳು. ನಂತರ, ಆಸ್ಪತ್ರೆಯಲ್ಲಿ ಅಸು ನೀಗುವ ಮುನ್ನ, ತನ್ನ ಮೇಲೆ ದಾಳಿ ಮಾಡಿದವರನ್ನು ನೇಣು ಹಾಕಿ ಸಾಯಿಸಬೇಕೆಂದು ಆಕೆ ಮನವಿ ಮಾಡಿಕೊಂಡಿದ್ದಳು.

ಪಂಜಾಬ್‌ನಲ್ಲಿ ನಡೆದ ಇಂಥದೇ ಇನ್ನೊಂದು ಘಟನೆಯಲ್ಲಿ, ಅತ್ಯಾಚಾರದ ನಂತರದ ಅವಮಾನದ ಬೇಗುದಿ ತಾಳಲಾಗದೇ ಹುಡುಗಿಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಳು. ಆಕೆಯ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದೇ ಆಕೆ ಜೀವ ಕಳೆದುಕೊಳ್ಳಲು ಕಾರಣವಾಗಿತ್ತು.

ಅಪರಾಧಗಳನ್ನು ಎಸಗಲು ರಾಜಕೀಯ ಶಕ್ತಿಗಳೇ ಬೆಂಬಲ ಕೊಡುವ ಮಟ್ಟಕ್ಕೆ ಇಳಿದಿರುವುದರಿಂದ, ನಮ್ಮ ಆಡಳಿತ ಹಾಗೂ ಇನ್ನಿತರ ವ್ಯವಸ್ಥೆಗಳು ಗೇಲಿಯ ವಸ್ತುವಾದವು. ಸಂವಿಧಾನದ ಮೂಲಸತ್ವವೇ ತಿರಸ್ಕಾರಕ್ಕೆ ಒಳಗಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯನ್ನೇ ಕತ್ತರಿಸಿ ಹಾಕುತ್ತಿದೆ.

ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದ ಅಂದಿನ ಉಪರಾಷ್ಟ್ರಪತಿ ಕೃಷ್ಣಕಾಂತ್, ತಾವು ಎಂತಹ ಪರಿಸ್ಥಿತಿಗೆ ಒಳಗಾಗುತ್ತಿದ್ದೇವೆಂದರೆ, ನಾಚಿಕೆಯಿಂದಾಗಿ ತಲೆ ಎತ್ತಲಾಗದೇ, ಯಾರೂ ಗಮನಿಸದ ರೀತಿ ಜನರೊಂದಿಗೆ ಬೆರೆತು ಓಡಾಡುವ ಪರಿಸ್ಥಿತಿ ಬಂದಿದೆ ಎಂದಿದ್ದರು.

ಮಂಕುಗೊಳಿಸುವಂತಹ ಹಾಗೂ ಭೀತಿ ಹುಟ್ಟಿಸುವಂತಹ ವಾತಾವರಣದಲ್ಲಿ ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ ತನ್ನ ಹೊಳಪನ್ನೇ ಕಳೆದುಕೊಂಡಿದೆ. ಇಲ್ಲಿಯ ವ್ಯವಸ್ಥೆಯಲ್ಲಿ, ಗೆಲ್ಲುವ ಕುದುರೆಗಳಾದ ಅಪರಾಧಿಗಳನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳು, ಅಂಥವರನ್ನೇ ಆಯ್ಕೆ ಮಾಡಿ, ಅತೀವ ಗೌರವದಿಂದ ಅವರನ್ನು ಶಾಸನ ಸಭೆಗಳಿಗೆ ಕಳಿಸುತ್ತಿವೆ.

ನಾಲ್ಕು ಸಲ ಶಾಸಕನಾಗಿರುವ ಸೆಂಗರ್‌ನನ್ನು ಆತನ ಜಿಲ್ಲೆಯಲ್ಲಿ ಎದುರು ಹಾಕಿಕೊಳ್ಳುವ ಧೈರ್ಯ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಏಕೆಂದರೆ, ಕಾಂಗ್ರೆಸ್‌ ಪಕ್ಷದಿಂದ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿರುವ ಆತ, ಬಿಎಸ್‌ಪಿ ಟಿಕೆಟ್‌ ಮೇಲೆ ಒಮ್ಮೆ, ಎಸ್‌ಪಿ ಟಿಕೆಟ್‌ ಮೇಲೆ ಎರಡು ಸಲ ಹಾಗೂ ನಾಲ್ಕನೇ ಬಾರಿ ಕೇಸರಿ ಪಕ್ಷದಿಂದ ಶಾಸಕನಾದ ವ್ಯಕ್ತಿ ಆತ.

ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ, ಇಂತಹ ದೌರ್ಜನ್ಯಗಳು ಇತರ ಕಡೆ ಅಥವಾ ಎಲ್ಲಾ ಪ್ರದೇಶಗಳಲ್ಲಿ ನಡೆಯುವ ಸಾಧ್ಯತೆ ಕುರಿತಂತೆ ಯಾವ ಅನುಮಾನಗಳೂ ಇಲ್ಲ.
ಇಂತಹ ಅಪರಾಧಿ ರಾಜಕಾರಣಿಗಳ ನಿರ್ದೇಶನದ ಮೇರೆಗೆ ಆಡಳಿತ ವ್ಯವಸ್ಥೆ ಬದಲಾಗುವಂತಿದ್ದರೆ ಪ್ರಜಾಪ್ರಭುತ್ವದ ಪರಿಸ್ಥಿತಿ ಏನಾಗಬಹುದು.

ಶಾಸಕ ಸೆಂಗಾರ್ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರೊಬ್ಬರಿಗೂ ಇರಲಿಲ್ಲ. ಅಚ್ಚರಿಯ ಸಂಗತಿ ಎಂದರೆ, ಜಿಲ್ಲೆಯ ಎಸ್‌ಪಿ ಅವರನ್ನು ಕೊಲ್ಲಲು ಯತ್ನಿಸಿದ್ದ ಆತನ ಸೋದರನ ಕುರಿತು ಕ್ರಮ ಕೈಗೊಳ್ಳಲು ಕಾನೂನು ವಿಫಲವಾಗಿರುವುದು. ಉನ್ನಾವೊ ಪ್ರಕರಣದ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಅಂಶವನ್ನು ಉಲ್ಲೇಖಿಸಿದ್ದಾರೆ.

ಸಂವಿಧಾನ ಮತ್ತು ಕಾನೂನು ದೇಶದ ಯಾವುದೇ ವ್ಯಕ್ತಿಗಿಂತ ದೊಡ್ಡವು ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ, ಸಂವಿಧಾನದ ಧ್ಯೇಯ ಮತ್ತು ಗುರಿಗಳನ್ನು ಹಾಗೂ ಇಂತಹ ಅಪರಾಧಿ ರಾಜಕಾರಣಿಗಳನ್ನು ಹೊಸಕಿ ಹಾಕುವ ಅವಶ್ಯಕತೆಯನ್ನು ಅಕ್ಷರಶಃ ಪ್ರತಿಫಲಿಸಿದೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಇಂತಹ ಉಗ್ರ ಅಪರಾಧಿಗಳ ಸೇವೆ ಮಾಡುವ ಹಂತಕ್ಕೆ ಪರಿಸ್ಥಿತಿ ಕ್ರಮೇಣವಾಗಿ ಇಳಿಯುತ್ತಿದೆ.

ರಾಜಕೀಯ ಪಕ್ಷಗಳು ಇಂತಹ ಕೆಟ್ಟ ವ್ಯವಸ್ಥೆಯನ್ನು ಹೂತು ಹಾಕಿ ಕಾನೂನು ಮತ್ತು ನಿಯಮಗಳ ಪಾಲನೆಗೆ ಮುಂದಾಗುವಂತೆ ನೋಡಿಕೊಳ್ಳುವ ಅಥವಾ ಅಪರಾಧೀಕರಣ ರಾಜಕೀಯದ ತಮ್ಮ ʼಭಸ್ಮಾಸುರʼ ಹಸ್ತವನ್ನು ತಮ್ಮ ತಲೆಯ ಮೇಲೆ ಇಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕಾದ ಸಮಯ ಈಗ ಬಂದಿದೆ.

Intro:Body:

ಉನ್ನಾವೊ ಪ್ರಕರಣ: ಅಪರಾಧಕ್ಕೆ ಬೆಲೆ ತೆತ್ತ ನ್ಯಾಯ

ಒಂದು ವೇಳೆ ದೋಚುವಿಕೆ, ತುಳಿತ, ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆಗಳು ಇಲ್ಲದ, ನಿರ್ಭೀತ ಸಮಾಜವೊಂದು ಅಸ್ತಿತ್ವದಲ್ಲಿದ್ದರೆ –- ಎಷ್ಟು ಚೆಂದವಲ್ಲವೆ ಈ ಕನಸು?

ಆದರ್ಶವಿಲ್ಲದ ರಾಜಕೀಯದಿಂದ ಬರುವ ಜನಪ್ರತಿನಿಧಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವುದರಿಂದ ಹಾಗೂ ಇನ್ನೂ ಇಂತಹ ವಿವಿಧ ಅಪರಾಧಗಳಿಂದಾಗಿ ಭಾರತ ಅದೆಷ್ಟು ಕೆಳಗೆ ಇಳಿದಿದೆ ಎಂದರೆ, ಪ್ರತಿಯೊಂದು ಪುಟವೂ ಅತ್ಯಾಚಾರದ ಪ್ರಕರಣಗಳಿಂದಾಗಿ ತುಂಬಿಹೋಗುವಂತಾಗಿದೆ. 

ದುಷ್ಟತೆಯ ವಿರುದ್ಧ ಒಳ್ಳೆಯದರ ಗೆಲುವನ್ನು ಹಬ್ಬವಾಗಿ ಆಚರಿಸಲು ಹೆಸರುವಾಸಿಯಾಗಿರುವುದು ಭಾರತದ ಸಂಸ್ಕೃತಿ. ಆದರೆ, ಅತ್ಯಾಚಾರ, ದೌರ್ಜನ್ಯ, ಶೋಷಣೆ, ಹಿಂಸೆ ಮತ್ತು ಇಂತಹ ಇತರ ಕ್ರೂರ ಕೃತ್ಯಗಳಿಂದ ಸಂತ್ರಸ್ತರಾದವರ ಪಾಲಿಗೆ ನ್ಯಾಯ ಎಂಬುದು ಅಕ್ಷರಶಃ ಒಯಾಸಿಸನ್‌ನಂತಾಗಿ ಹೋಗಿದೆ. ನ್ಯಾಯವನ್ನು ಒದಗಿಸಲು ನ್ಯಾಯದಾನ ವ್ಯವಸ್ಥೆ ವಿಫಲವಾಗಿರುವುದರಿಂದ ಸಮಕಾಲೀನ ಸಮಾಜ ಹಾಳಾಗಿ ಹೋಗುತ್ತಿದೆ. 

ನ್ಯಾಯಕ್ಕಾಗಿ ಆಗ್ರಹಿಸಿ ಹುಡುಗಿಯೊಬ್ಬಳು ಮುಖ್ಯಮಂತ್ರಿಯ ನಿವಾಸದ ಎದುರು ಆತ್ಮಹತ್ಯೆಗೆ ಪ್ರಯತ್ನಿಸದ ಹೊರತು, ನ್ಯಾಯಾಂಗ ವ್ಯವಸ್ಥೆಯಿಂದ ಆಕೆಗೆ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ ಎಂಬುದು ನಮ್ಮ ವ್ಯವಸ್ಥೆಯಲ್ಲಿರುವ ಶುದ್ಧ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಜ್ವಲಂತ ನಿದರ್ಶನ ಎನಿಸಿದೆ. 

ಅಧಿಕಾರಿಗಳೆಂಬ ಸ್ವಜಾತಿ ಭಕ್ಷಕರು ಅನಾಗರಿಕವಾಗಿ ಮತ್ತು ಅದಕ್ಕಿಂತ ಹೆಚ್ಚಾಗಿ ಅಮಾನವೀಯವಾಗಿ ಆಕೆಯ ಕತ್ತನ್ನು ಸೀಳಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಸೂಕ್ತ ನಿದರ್ಶನವಾಗಿದೆ. ಪ್ರಕರಣದ ವಿಚಾರಣೆಯನ್ನು ಒಂದೂವರೆ ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ ನಿರ್ದೇಶನ ನೀಡಿದ ನಂತರವಷ್ಟೇ ಅಧಿಕಾರಿಗಳೆನಿಸಿಕೊಂಡ ಇವರು ಸಕ್ರಿಯರಾಗಿದ್ದು. 

ಈ ಪ್ರಕರಣದ ಪ್ರಮುಖ ಆರೋಪಿಗೆ ಕೊನೆಗೂ ಜೀವಾವಧಿ ಶಿಕ್ಷೆ ಘೋಷಿಸಲಾಯಿತು. 

ಭಯ ಹುಟ್ಟಿಸುವಂತಹ ಹಿಂಸಾತ್ಮಕ ಹಾಗೂ ಜೀವ ಬೆದರಿಕೆ ಇರುವ ವಾತಾವರಣದಲ್ಲಿ ಹುಡುಗಿಯೊಬ್ಬಳು ನ್ಯಾಯಕ್ಕಾಗಿ ಹೋರಾಡುತ್ತಿರುವಾಗ, ರಾಜಕೀಯ ಮತ್ತು ಜಾತಿ ನಾಯಕರು ಹೇಗೆ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಾರೆ ಹಾಗೂ  ನ್ಯಾಯಾಂಗ ವ್ಯವಸ್ಥೆಯ ಮೇಲೆ ಹೇಗೆ ಅಧಿಕಾರ ಚಲಾಯಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ.

ಈ ಕೆಳಗಿನದನ್ನು ಓದಿ…

ಅಪರಾಧಿಗಳನ್ನು ತೊಡೆದುಹಾಕುವ ಮೂಲಕ ಅಪರಾಧರಹಿತ ಸಮಾಜವನ್ನು ನಿರ್ಮಿಸುವ ಪ್ರಸ್ತಾವನೆಯೊಂದಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರಕಾರ ಇತ್ತೀಚೆಗೆ ಅನುಮೋದನೆ ನೀಡಿತು. 

ನಂತರ ಈ ಪ್ರಕ್ರಿಯೆಯಡಿ, ೧೦೦ಕ್ಕೂ ಹೆಚ್ಚು ಅಪರಾಧಿಗಳು ಹಾಗೂ ಸಮಾಜ ವಿರೋಧಿ ಶಕ್ತಿಗಳು ಶಿಕ್ಷೆಗೆ ಗುರಿಯಾದರು. 

ರಾಜ್ಯದಲ್ಲಿ ಆದಿತ್ಯನಾಥ ಸರಕಾರ ರಚನೆಯಾದ ಮೂರು ತಿಂಗಳುಗಳ ನಂತರ, ಮಂಖಿ ಗ್ರಾಮದ ೧೭ ವರ್ಷದ ಹುಡುಗಿಯೊಬ್ಬಳು ೨೦೧೭ರಿಂದ ಕಾಣೆಯಾಗಿರುವುದು ಪತ್ತೆಯಾಗುತ್ತದೆ. 

ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌, ಆತನ ಸೋದರ ಅತುಪ್‌ ಸಿಂಗ್‌ ಮತ್ತು ಅವರ ಹಿಂಬಾಲಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಗಳು ಕೇಳಿಬರುತ್ತವೆ. 

ಮಗಳು ಕಾಣೆಯಾಗಿರುವುದಾಗಿ ಹುಡುಗಿಯ ತಂದೆತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರವಷ್ಟೇ, ಅಪರಾಧಿಗಳ ಉಕ್ಕಿನ ಹಿಡಿತದಿಂದ ಬಾಲಕಿ ಬಿಡುಗಡೆಯಾಗುತ್ತಾಳೆ.

ನಂತರ, ಶಾಸಕನ ವಿರುದ್ಧ ಪ್ರಕರಣ ದಾಖಲಿಸುವ ಧೈರ್ಯ ಮಾಡದ ಪೊಲೀಸರು, ಬಾಲಕಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಾರಲ್ಲದೇ, ಅಪಹರಣ ಪ್ರಕರಣವನ್ನು ದಾಖಲಿಸುತ್ತಾರೆ. 

ಈ ಸಂಕಟ ಇಲ್ಲಿಗೇ ಕೊನೆಯಾಗುವುದಿಲ್ಲ. ಹುಡುಗಿಯ ತಂದೆಯನ್ನು ಥಳಿಸುವ ಶಾಸಕನ ಹಿಂಬಾಲಕರು, ಆತನ ವಿರುದ್ಧ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಹೊಂದಿರುವ ದೂರು ದಾಖಲಿಸಿ, ಆತನನ್ನು ಪೊಲೀಸ್‌ ಠಾಣೆಯ ವಶಕ್ಕೆ ನೀಡುತ್ತಾರೆ. 

ಕೊಲ್ಲುವ ಬೆದರಿಕೆ ಅವರಿಂದ ಬಂದಾಗ, ಸಹಜವಾಗಿ ಬಾಲಕಿಯು ಮುಖ್ಯಮಂತ್ರಿಯ ನಿವಾಸದ ಎದುರು ತನ್ನ ಜೀವವನ್ನು ಕೊನೆಗಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. 

ಅದರ ಮರು ದಿನ, ಆಕೆಯ ತಂದೆಯ ಶವ ಪೊಲೀಸ್‌ ಠಾಣೆಯಲ್ಲಿ ಪತ್ತೆಯಾಗುತ್ತದೆ. 

ಅಲಹಾಬಾದ್‌ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತವಾಗುವ ಸಿಬಿಐ, ಸದರಿ ಪ್ರಕರಣದಲ್ಲಿ ತೊಡಗಿಕೊಂಡಿರುವ ಶಾಸಕ, ಆತನ ಸೋದರ ಹಾಗೂ ಅವರ ಬೆಂಬಲಿಗರನ್ನು ಬಂಧಿಸುತ್ತದೆ. 

ಕುತೂಹಲದ ಸಂಗತಿ ಎಂದರೆ, ಸಿಬಿಐ ಸಂಸ್ಥೆ ತಕ್ಷಣದ ಕ್ರಮಗಳನ್ನು ಕೈಗೊಳ್ಳದೇ ಪ್ರಕರಣವನ್ನು ಒಂದು ವರ್ಷದ ಕಾಲ ಎಳೆದಾಡುತ್ತದೆ. 

ಈ ಮಧ್ಯೆ, ಅಪರಾಧಿ ಶಾಸಕ ಸೋದರರು ಸಂತ್ರಸ್ತೆಯ ಸಂಬಂಧಿಕರನ್ನು ನಾನಾ ರೀತಿಯಿಂದ ಪೀಡಿಸಲು ತೊಡಗುತ್ತಾರೆ. 

ಕೊಲೆ ಪ್ರಕರಣವೊಂದರಲ್ಲಿ ಸಂತ್ರಸ್ತೆಯ ಚಿಕ್ಕಪ್ಪನನ್ನು ೧೦ ವರ್ಷದ ಶಿಕ್ಷೆಗೆ ಒಳಗಾಗುವಂತೆ ಅವರು ವ್ಯವಸ್ಥೆ ಮಾಡುತ್ತಾರೆ. 

ಅವರ ಮೇಲೆ ಲಾರಿ ಹರಿಸುವ ಮೂಲಕ ಸಂತ್ರಸ್ತೆಯ ಇಡೀ ಕುಟುಂಬವನ್ನು ಹೊಸಕಿಹಾಕುವ ವಿಫಲ ಪ್ರಯತ್ನವನ್ನು ಶಾಸಕ ಮಾಡುತ್ತಾನೆ. 

ಈ ಘಟನೆಯಲ್ಲಿ, ಹುಡುಗಿ ಮತ್ತು ಆಕೆಯ ವಕೀಲರು ಗಾಯಗೊಂಡು ಪಾರಾದರೂ, ಆಕೆಯ ಇಬ್ಬರು ಸಂಬಂಧಿಕರು ಮೃತರಾಗುತ್ತಾರೆ. 

ಈ ಹೀನ ಅಪರಾಧ ಕೃತ್ಯ ಇಡೀ ದೇಶವನ್ನೇ ಅಲ್ಲಾಡಿಸಿ, ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ನಂತರ, ಬಿಜೆಪಿಯ ಉನ್ನತ ವಲಯ ಶಾಸಕ ಸೆಂಗರ್‌ನನ್ನು ಪಕ್ಷದಿಂದ ಉಚ್ಛಾಟಿಸುವ ಕ್ರಮವನ್ನು ತಡವಾಗಿ ಕೈಗೊಳ್ಳುತ್ತದೆ. 

ಆನಂತರ, ಅಪರಾಧ ಕೃತ್ಯ ಸಾಬೀತಾಗಿದ್ದರಿಂದ, ನ್ಯಾಯಾಲಯ ಸದರಿ ಶಾಸಕನಿಗೆ ಜೀವಾವಧಿ ಶಿಕ್ಷೆ ಘೋಷಿಸುತ್ತದೆ. 

ತನ್ನ ಜೀವಕ್ಕೆ ಅಪಾಯವಿದೆ ಎಂದು ಕಳೆದ ವರ್ಷದ ಜುಲೈ ೧೭ರಂದು ಆಕೆ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಳು. ಸದರಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆ ತಿಂಗಳಿನ ಕೊನೆಗೆ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು. 

ಪ್ರತಿ ದಿನ ವಿಚಾರಣೆ ನಡೆಸಿದ ನಂತರ ಶಾಸಕನೇ ಪ್ರಮುಖ ಅಪರಾಧಿ ಎಂದು ಕಂಡುಕೊಂಡ ನ್ಯಾಯಾಲಯ ಈ ಸೂಕ್ಷ್ಮ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 

ಹೀಗಿರುವಾಗ, ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಸಂತ್ರಸ್ತರ ಮೇಲೆ ಅನ್ಯಾಯ ಎಸಗುತ್ತಿರುವ ಹಾಗೂ ನಾಯಕರ ಉಕ್ಕಿನ ಹಿಡಿತದಲ್ಲಿ ಸಿಲುಕಿರುವ ಪೊಲೀಸರು ಮತ್ತು ತನಿಖಾ ಸಂಸ್ಥೆಗಳ ಮೇಲೆ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ?

ಈ ಸೂಕ್ಷ್ಮ ಉನ್ನಾವೊ ಪ್ರಕರಣ ಕುರಿತಂತೆ ಕಟುವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌, ಸಂತ್ರಸ್ತೆಗೆ ನ್ಯಾಯಾಲಯ ಪರಿಹಾರ ನೀಡಬೇಕೆಂಬ ಸಾಲಿಸಿಟರ್‌ ಜನರಲ್‌ ಅವರ ಮನವಿಗೆ ಕರಗಲು ನಿರಾಕರಿಸಿತು. 

ಈ ದೇಶದಲ್ಲಿ ಕಾಯ್ದೆ ಮತ್ತು ಕಾನೂನಿನ ಪ್ರಕಾರ ಏನಾದರೂ ನಡೆಯುತ್ತಿದೆಯೆ ಎಂದೂ ಅದು ಪ್ರಶ್ನಿಸಿತು. ಅಪರಾಧಗಳು ಹಾಗೂ ಪ್ರಕರಣಗಳ ಕುರಿತು ಕೆಲವು ಮಹತ್ವದ ಟೀಕೆಗಳನ್ನು ಮಾಡಿರುವ ಸುಪ್ರೀಂ ಕೋರ್ಟ್‌, ನಿಜವಾಗಿಯೂ ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಕಳವಳವನ್ನೂ ವ್ಯಕ್ತಪಡಿಸಿದೆ. 

ಈ ಮಹಾನ್‌ ಉತ್ತರ ಪ್ರದೇಶ ರಾಜ್ಯದಲ್ಲಿ, ಕಳೆದ ನವೆಂಬರ್‌ನಿಂದ ಐದು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ವರದಿಯಾಗಿವೆ. 

ಎಲ್ಲಕ್ಕಿಂತ ಹೆಚ್ಚು ಆಘಾತಕಾರಿ ಘಟನೆ ಎಂದರೆ, ಗೂಂಡಾಗಳ ತಂಡವೊಂದು ನ್ಯಾಯಾಲಯದ ಸನಿಹದಲ್ಲಿಯೇ ಹೆಣ್ಣುಮಗಳೊಬ್ಬಳಿಗೆ ಬೆಂಕಿ ಹಚ್ಚಿದೆ. ಅಪರಾಧಿಗಳ ವಿರುದ್ಧ ತಾನು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ ಹಾಜರಾಗಲು ಆಕೆ ನ್ಯಾಯಾಲಯಕ್ಕೆ ಹೊರಟಿದ್ದಳು. 

ಮೈತುಂಬ ಬೆಂಕಿ ಆವರಿಸಿರುವಂತೆಯೇ, ಜೀವ ಉಳಿಸಿಕೊಳ್ಳಲೆಂದು ಆಕೆ ಸುಮಾರು ಒಂದು ಕಿಮೀ ಓಡಿ ಹೋಗಿದ್ದಳು. ನಂತರ, ಆಸ್ಪತ್ರೆಯಲ್ಲಿ ಅಸು ನೀಗುವ ಮುನ್ನ, ತನ್ನ ಮೇಲೆ ದಾಳಿ ಮಾಡಿದವರನ್ನು ನೇಣು ಹಾಕಿ ಸಾಯಿಸಬೇಕೆಂದು ಆಕೆ ಮನವಿ ಮಾಡಿಕೊಂಡಿದ್ದಳು. 

ಪಂಜಾಬ್‌ನಲ್ಲಿ ನಡೆದ ಇಂಥದೇ ಇನ್ನೊಂದು ಘಟನೆಯಲ್ಲಿ, ಅತ್ಯಾಚಾರದ ನಂತರದ ಅವಮಾನದ ಬೇಗುದಿ ತಾಳಲಾಗದೇ ಹುಡುಗಿಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಳು. ಆಕೆಯ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದೇ ಆಕೆ ಜೀವ ಕಳೆದುಕೊಳ್ಳಲು ಕಾರಣವಾಗಿತ್ತು. 

ಅಪರಾಧಗಳನ್ನು ಎಸಗಲು ರಾಜಕೀಯ ಶಕ್ತಿಗಳೇ ಬೆಂಬಲ ಕೊಡುವ ಮಟ್ಟಕ್ಕೆ ಇಳಿದಿರುವುದರಿಂದ, ನ್ಯಾಯಾಂಗ ವ್ಯವಸ್ಥೆ ಗೇಲಿಯ ವಸ್ತುವಾಗಿದೆ. ಸಂವಿಧಾನದ ಮೂಲಸತ್ವವೇ ತಿರಸ್ಕಾರಕ್ಕೆ ಒಳಗಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯನ್ನೇ ಕತ್ತರಿಸಿ ಹಾಕುತ್ತಿದೆ. 

ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದ ಅಂದಿನ ಉಪರಾಷ್ಟ್ರಪತಿ ಕೃಷ್ಣಕಾಂತ್, ತಾವು ಎಂತಹ ಪರಿಸ್ಥಿತಿಗೆ ಒಳಗಾಗುತ್ತಿದ್ದೇವೆಂದರೆ, ನಾಚಿಕೆಯಿಂದಾಗಿ ತಲೆ ಎತ್ತಲಾಗದೇ, ಯಾರೂ ಗಮನಿಸದ ರೀತಿ ಜನರೊಂದಿಗೆ ಬೆರೆತು ಓಡಾಡುವ ಪರಿಸ್ಥಿತಿ ಬಂದಿದೆ ಎಂದಿದ್ದರು. 

ಮಂಕುಗೊಳಿಸುವಂತಹ ಹಾಗೂ ಭೀತಿ ಹುಟ್ಟಿಸುವಂತಹ ವಾತಾವರಣದಲ್ಲಿ ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ ತನ್ನ ಹೊಳಪನ್ನೇ ಕಳೆದುಕೊಂಡಿದೆ. ಇಲ್ಲಿಯ ವ್ಯವಸ್ಥೆಯಲ್ಲಿ, ಗೆಲ್ಲುವ ಕುದುರೆಗಳಾದ ಅಪರಾಧಿಗಳನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳು, ಅಂಥವರನ್ನೇ ಆಯ್ಕೆ ಮಾಡಿ, ಅತೀವ ಗೌರವದಿಂದ ಅವರನ್ನು ಶಾಸನ ಸಭೆಗಳಿಗೆ ಕಳಿಸುತ್ತಿವೆ.

ನಾಲ್ಕು ಸಲ ಶಾಸಕನಾಗಿರುವ ಸೆಂಗರ್‌ನನ್ನು ಆತನ ಜಿಲ್ಲೆಯಲ್ಲಿ ಎದುರು ಹಾಕಿಕೊಳ್ಳುವ ಧೈರ್ಯ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಏಕೆಂದರೆ, ಕಾಂಗ್ರೆಸ್‌ ಪಕ್ಷದಿಂದ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿರುವ ಆತ, ಬಿಎಸ್‌ಪಿ ಟಿಕೆಟ್‌ ಮೇಲೆ ಒಮ್ಮೆ, ಎಸ್‌ಪಿ ಟಿಕೆಟ್‌ ಮೇಲೆ ಎರಡು ಸಲ ಹಾಗೂ ನಾಲ್ಕನೇ ಬಾರಿ ಕೇಸರಿ ಪಕ್ಷದಿಂದ ಶಾಸಕನಾದ ವ್ಯಕ್ತಿ ಆತ. 

ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ, ಇಂತಹ ದೌರ್ಜನ್ಯಗಳು ಇತರ ಕಡೆ ಅಥವಾ ಎಲ್ಲಾ ಪ್ರದೇಶಗಳಲ್ಲಿ ನಡೆಯುವ ಸಾಧ್ಯತೆ ಕುರಿತಂತೆ ಯಾವ ಅನುಮಾನಗಳೂ ಇಲ್ಲ. 

ಇಂತಹ ಅಪರಾಧಿ ರಾಜಕಾರಣಿಗಳ ನಿರ್ದೇಶನದ ಮೇರೆಗೆ ಆಡಳಿತ ವ್ಯವಸ್ಥೆ ಬದಲಾಗುವಂತಿದ್ದರೆ ಪ್ರಜಾಪ್ರಭುತ್ವದ ಪರಿಸ್ಥಿತಿ ಏನಾಗಬಹುದು. 

ಶಾಸಕ ಸೆಂಗಾರ್ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರೊಬ್ಬರಿಗೂ ಇರಲಿಲ್ಲ. ಅಚ್ಚರಿಯ ಸಂಗತಿ ಎಂದರೆ, ಜಿಲ್ಲೆಯ ಎಸ್‌ಪಿ ಅವರನ್ನು ಕೊಲ್ಲಲು ಯತ್ನಿಸಿದ್ದ ಆತನ ಸೋದರನ ಕುರಿತು ಕ್ರಮ ಕೈಗೊಳ್ಳಲು ಕಾನೂನು ವಿಫಲವಾಗಿರುವುದು. ಉನ್ನಾವೊ ಪ್ರಕರಣದ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಅಂಶವನ್ನು ಉಲ್ಲೇಖಿಸಿದ್ದಾರೆ.  

ಸಂವಿಧಾನ ಮತ್ತು ಕಾನೂನು ದೇಶದ ಯಾವುದೇ ವ್ಯಕ್ತಿಗಿಂತ ದೊಡ್ಡವು ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ, ಸಂವಿಧಾನದ ಧ್ಯೇಯ ಮತ್ತು ಗುರಿಗಳನ್ನು ಹಾಗೂ ಇಂತಹ ಅಪರಾಧಿ ರಾಜಕಾರಣಿಗಳನ್ನು ಹೊಸಕಿ ಹಾಕುವ ಅವಶ್ಯಕತೆಯನ್ನು ಅಕ್ಷರಶಃ ಪ್ರತಿಫಲಿಸಿದೆ. 

ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಇಂತಹ ಉಗ್ರ ಅಪರಾಧಿಗಳ ಸೇವೆ ಮಾಡುವ ಹಂತಕ್ಕೆ ಪರಿಸ್ಥಿತಿ ಕ್ರಮೇಣವಾಗಿ ಇಳಿಯುತ್ತಿದೆ. 

ರಾಜಕೀಯ ಪಕ್ಷಗಳು ಇಂತಹ ಕೆಟ್ಟ ವ್ಯವಸ್ಥೆಯನ್ನು ಹೂತು ಹಾಕಿ ಕಾನೂನು ಮತ್ತು ನಿಯಮಗಳ ಪಾಲನೆಗೆ ಮುಂದಾಗುವಂತೆ ನೋಡಿಕೊಳ್ಳುವ ಅಥವಾ ಅಪರಾಧೀಕರಣ ರಾಜಕೀಯದ ತಮ್ಮ ʼಭಸ್ಮಾಸುರʼ ಹಸ್ತವನ್ನು ತಮ್ಮ ತಲೆಯ ಮೇಲೆ ಇಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕಾದ ಸಮಯ ಈಗ ಬಂದಿದೆ.

Conclusion:
Last Updated : Dec 30, 2019, 6:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.