ನವದೆಹಲಿ: ಡಿಸೆಂಬರ್ 16ರಂದು ಉನ್ನಾವೋ ಪ್ರಕರಣದಲ್ಲಿ ದೆಹಲಿ ಹೈ ಕೋರ್ಟ್ ನೀಡಿದ್ದ ಮಹತ್ವದ ತೀರ್ಪನ್ನು ಆರೋಪಿ ಕುಲ್ದೀಪ್ ಸಿಂಗ್ ಸೆಂಗರ್ ಪ್ರಶ್ನಿಸಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಮೇಲೆದ್ದ ಅತ್ಯಾಚಾರ ಆರೋಪ ಸಾಬೀತಾದ ಹಿನ್ನಲೆ ಡಿಸೆಂಬರ್ 16ರಂದು ದೆಹಲಿ ಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿತ್ತು. ನ್ಯಾಯಾಲಯದ ಈ ಮಹತ್ವದ ತೀರ್ಪು ದೇಶದ ಜನತೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಉನ್ನಾವೋ ಪ್ರಕರಣದ ಕೋರ್ಟ್ ವಿಚಾರಣೆ ಪ್ರಕ್ರಿಯೆ ಹಂತಹಂತವಾಗಿ ಸಾಗಿ, ಎಲ್ಲಾ ಒಂದು ಹಂತಕ್ಕೆ ಬಂದು ವಿಚಾರಣೆಗೆ ಪೂರ್ಣ ಬಿಂದು ಬಿದ್ದಿತ್ತು. ಆದರೆ, ಮತ್ತೆ ಅಪರಾಧಿ ಕುಲ್ದೀಪ್ ಸಿಂಗ್ ಸೆಂಗರ್ ತನಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆ ತೀರ್ಪನ್ನು ಪ್ರಶ್ನಿಸಿದ್ದಾನೆ.
2017ರಲ್ಲಿ ಅಪರಾಧಿ ಕುಲ್ದೀಪ್ ಸಿಂಗ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ, ಅನಂತರ ಕೆಲವು ದಿನಗಳ ಬಳಿಕ ಮತ್ತೆ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಳು. ಈ ಪ್ರಕರಣದ ಬೆನ್ನಲ್ಲೇ ಕುಲ್ದೀಪ್ಅನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು.