ETV Bharat / bharat

ಕೇಂದ್ರ ಸರ್ಕಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಿತಿ ಸಡಿಲಿಕೆ: ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ? - ಕೋವಿಡ್ ಮಾರ್ಗಸೂಚಿ ಬಿಡುಗಡೆ

Union Home Ministry
ಕೇಂದ್ರ ಸರ್ಕಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಿತಿಗೆ ಸಡಿಲಿಕೆ
author img

By

Published : Jan 27, 2021, 7:04 PM IST

Updated : Jan 27, 2021, 8:59 PM IST

18:59 January 27

ಕೇಂದ್ರ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆ

  • Union Home Ministry issues an order to enforce guidelines for surveillance, containment & caution which will be effective from Feb 1 to Feb 28; states/UTs mandated to continue to enforce containment measures & SOPs on various activities & COVID appropriate behaviour. pic.twitter.com/owHbYZVgmt

    — ANI (@ANI) January 27, 2021 " class="align-text-top noRightClick twitterSection" data=" ">

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೆಲವು ತಿಂಗಳುಗಳಿಂದ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕಂಟೇನ್​ಮೆಂಟ್ ಝೋನ್​ಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಫೆಬ್ರವರಿ 1ರಿಂದ ಮಾರ್ಗಸೂಚಿಗಳು ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸಿನಿಮಾ ಹಾಲ್​ಗಳು ಮತ್ತು ಥಿಯೇಟರ್​ಗಳಲ್ಲಿ ಈವರೆಗೆ ಶೇ.50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಹೊಸ ಮಾರ್ಗಸೂಚಿಯಂತೆ ಹೆಚ್ಚುವರಿ ಆಸನಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ.

ಸದ್ಯಕ್ಕೆ ಕ್ರೀಡಾಪಟುಗಳಿಗೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದ್ದ ಈಜುಕೊಳಗಳಲ್ಲಿ ಹೊಸ ಮಾರ್ಗಸೂಚಿಯ ಪ್ರಕಾರ ಸಾರ್ವಜನಿಕರಿಗೂ ಅವಕಾಶ ಒದಗಿಸಲಾಗಿದೆ. 

ಮಾರ್ಗಸೂಚಿಯಲ್ಲಿನ ಅಂಶಗಳು ಇಂತಿವೆ:

  • ಮಾರ್ಗಸೂಚಿ ಅನ್ವಯ ಜನರ ಮಿತಿಯಿಲ್ಲದೆ ಸಭೆ, ಸಮಾರಂಭಕ್ಕೆ ಅವಕಾಶ
  • ಅಂತಾರಾಷ್ಟ್ರೀಯ ಪ್ರಯಾಣಿಕರ ನಿರ್ಬಂಧದಲ್ಲಿ ಮತ್ತಷ್ಟು ಸಡಿಲಿಕೆ
  • ಅಂತಾರಾಜ್ಯ ಪ್ರಯಾಣ, ಸರಕು ಸಾಗಣೆಗೆ ಯಾವುದೇ ಅನುಮತಿ ಅವಶ್ಯಕತೆಯಿಲ್ಲ.
  • ವಸ್ತು ಪ್ರದರ್ಶನಾಲಯಗಳಿಗೆ ಈ ಮೊದಲಿದ್ದ ನಿಯಮಗಳಲ್ಲಿ ಸಡಿಲಿಕೆ
  • ಶಾಲೆ, ಕಾಲೇಜು, ಹೋಟೆಲ್​ಗಳನ್ನು ಮಾರ್ಗಸೂಚಿಯನ್ವಯ ನಡೆಸಲು ಅವಕಾಶ
  • ವೃದ್ಧರು, ರೋಗಿಗಳು, ಮಕ್ಕಳು, ಗರ್ಭಿಣಿಯರಿಗೆ ಮುನ್ನೆಚ್ಚರಿಕೆಗೆ ಸೂಚನೆ

Last Updated : Jan 27, 2021, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.