ETV Bharat / bharat

ಬೆಟ್ಟದಷ್ಟು ಭರವಸೆಯಿತ್ತು, ಎಲ್ಲವೂ ನುಚ್ಚು ನೂರಾಯಿತು: ಜಮ್ಮು ಜನರ ಅಸಮಾಧಾನ!

author img

By

Published : Aug 5, 2020, 9:58 AM IST

ಆ ಸಮಯದಲ್ಲಿ ಸರ್ಕಾರವು ಭರವಸೆ ನೀಡಿದಂತೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಏರಿಕೆಯಾಗುವ ಬದಲು, ಇಳಿಕೆಯಾಗಿದೆ. ಮತ್ತೊಂದೆಡೆ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮರು ಸಂಘಟನೆಯು ಸಾಮಾನ್ಯ ಜನರಿಗೆ ದುಃಖವನ್ನು ಹೆಚ್ಚಿಸಿದ್ದು, ಆ ಮೊದಲು ಇದಕ್ಕಿಂತ ಹೆಚ್ಚು ನೆಮ್ಮದಿಯಿಂದ ಇದ್ದೆವು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಸ್ಥಳೀಯ ರಾಜಕೀಯ ಪಕ್ಷಗಳು, ನಾಯಕರು ಮತ್ತು ಅವರ ಕಾರ್ಯಕರ್ತರು ಕೂಡಾ ರಾಜ್ಯದ ಸ್ಥಿತಿಯ ಬದಲಾವಣೆಯ ಪರಿಣಾಮ ಮತ್ತು ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಎಡವಿದ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Jammu and Kashmir
ಜಮ್ಮು ಜನರ ಅಸಮಾಧಾನ

ಜಮ್ಮು (ಜಮ್ಮು ಮತ್ತು ಕಾಶ್ಮೀರ): ಒಂದು ಕಾಲದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಬೆಂಬಲಿಸಿದವರು ಕೂಡಾ ಈಗ ಹತಾಶೆಯ ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

2019 ರ ಆಗಸ್ಟ್ 5 ರಂದು ರಾಜ್ಯತ್ವವನ್ನು ತೆಗೆದುಹಾಕಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವಾಗ, ಈ ಕ್ರಮವು ಈ ಪ್ರದೇಶದ ಪ್ರಚಂಡ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಎನ್‌ಡಿಎ ಸರ್ಕಾರ ಹೇಳಿಕೊಂಡಿತ್ತು. ಇದಾಗಿ ಒಂದು ವರ್ಷದ ನಂತರ, 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವ ಕೇಂದ್ರದ ಕ್ರಮವನ್ನು ಬೆಂಬಲಿಸಿದವರು ಸೇರಿದಂತೆ ಇಲ್ಲಿನ ಭಾಗಶಃ ಎಲ್ಲ ಜನರು ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಧಿಗಳು ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ - ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಅಂದು ಮೋದಿ ಸರ್ಕಾರ ವಾದಿಸಿತ್ತು. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು. ತನ್ನ ಕ್ರಮವನ್ನು ಸಮರ್ಥಿಸಿದ ಸರ್ಕಾರ, ಹಿಂಸಾಚಾರ ಪೀಡಿತ ಕಣಿವೆ ನಾಡಿನಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಈ ಕ್ರಮವು ಸಹಾಯ ಮಾಡುತ್ತದೆ ಎಂದು ಅದು ಹೇಳಿತ್ತು.

ಹೊಸದಾಗಿ ರಚಿಲಾಸಲಾದ ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಹಂಚಿಕೆ ಅಂಕಿ - ಅಂಶಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ. ಮೋದಿ ಸರ್ಕಾರ 2020 - 21ರ ಬಜೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 30,757 ಕೋಟಿ ಮತ್ತು ಲಡಾಖ್‌ಗೆ 5,958 ಕೋಟಿ ರೂ. ಹಂಚಿಕೆ ಮಾಡಿದೆ. ಇದು ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಅತ್ಯಲ್ಪ ಮೊತ್ತ ಎಂದು ಹೆಚ್ಚಿನ ವಿಶ್ಲೇಷಕರು ಹೇಳುತ್ತಾರೆ. ಹೀಗಾಗಿ ಈ ಪ್ರದೇಶಗಳ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಭರವಸೆಯನ್ನು ಈಡೇರಿಸುವಲ್ಲಿ ಕೇಂದ್ರವು ಗಂಭೀರವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಜಮ್ಮು ಪ್ರದೇಶದ ಜನರ ಒಟ್ಟಾರೆ ಅನಿಸಿಕೆ ಏನೆಂದರೆ, ಆ ಸಮಯದಲ್ಲಿ ಸರ್ಕಾರವು ಭರವಸೆ ನೀಡಿದಂತೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಏರಿಕೆಯಾಗುವ ಬದಲು, ಇಳಿಕೆಯಾಗಿದೆ. ಮತ್ತೊಂದೆಡೆ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮರುಸಂಘಟನೆಯು ಸಾಮಾನ್ಯ ಜನರಿಗೆ ದುಃಖವನ್ನು ಹೆಚ್ಚಿಸಿದ್ದು, ಆ ಮೊದಲು ಇದಕ್ಕಿಂತ ಹೆಚ್ಚು ನೆಮ್ಮದಿಯಿಂದ ಇದ್ದೆವು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

ಆರ್ಟಿಕಲ್ 370 ಮತ್ತು 35 ಎ ರದ್ದುಗೊಳಿಸುವಿಕೆಯು ಈ ಸ್ಥಳಕ್ಕೆ ಆರ್ಥಿಕ ಸಂಕಷ್ಟವನ್ನು ತಂದಿಟ್ಟಿದೆ. ಈ ಕ್ರಮವು ಇಲ್ಲಿನ ಜನರ ಜೀವನಕ್ಕೆ ಸಮೃದ್ಧಿಯನ್ನು ತರುತ್ತದೆ ಎಂದು ಬಿಜೆಪಿ ಸರ್ಕಾರ ಜಮ್ಮು ಜನರಿಗೆ ಭರವಸೆ ನೀಡಿತ್ತು. ಆದರೆ ಈಗ ನಮ್ಮ ಕೆಟ್ಟ ಪರಿಸ್ಥಿತಿಯನ್ನು ನಾವು ನೋಡಬಹುದು. ಅಂದಿನಿಂದ ಇಂದಿನವರೆಗೂ ನಿರುದ್ಯೋಗ ಪ್ರಮಾಣ ಅಗಾಧವಾಗಿ ಏರಿದೆ. ಉಜ್ವಲ ಭವಿಷ್ಯದ ಕನಸುಗಳು ಹೊತ್ತಿದ್ದ ನಾವು ಕೇವಲ ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಸರ್ಕಾರವು ಹೊರಗಿನವರಿಗೆ ನಿವಾಸದ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಅವರನ್ನು ಸಂತೋಷಪಡಿಸುತ್ತದೆ. ಆದರೆ ಜಮ್ಮುವಿನ ಮೂಲ ನಿವಾಸಿಗಳಿಗೆ ಸಂಬಂಧಪಟ್ಟಂತೆ ಸರ್ಕಾರ ಏನೂ ಮಾಡಿಲ್ಲ. ಇಲ್ಲಿನ ಜನ ಇನ್ನೂ ಶೋಚನೀಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಇಲ್ಲಿನ ಯುವಕ ಮೋಹಿಂದರ್ ಜೀತ್ ಸಿಂಗ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸ್ಥಳೀಯ ರಾಜಕೀಯ ಪಕ್ಷಗಳು, ನಾಯಕರು ಮತ್ತು ಅವರ ಕಾರ್ಯಕರ್ತರು ಕೂಡಾ ರಾಜ್ಯದ ಸ್ಥಿತಿಯ ಬದಲಾವಣೆಯ ಪರಿಣಾಮ ಮತ್ತು ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಎಡವಿದ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಗಸ್ಟ್ 5, 2019 ರಂದು ಕೈಗೊಂಡ ಕ್ರಮದಿಂದ ಜಮ್ಮು ಮತ್ತು ಕಾಶ್ಮೀರವನ್ನು ಸರ್ಕಾರ ಹಾಳು ಮಾಡಿದೆ. ಕಳೆದ ಒಂದು ವರ್ಷದಿಂದ ಇಲ್ಲಿ ನಿರುದ್ಯೋಗ ಹೆಚ್ಚಾಗಿದೆ. ವ್ಯಾಪಾರ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇಲ್ಲಿನ ಪ್ರಜಾಪ್ರಭುತ್ವ ಪರಿಸ್ಥಿತಿಯನ್ನೂ ಅವರು ಒಡೆದು ಹಾಕಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಹಕ್ಕನ್ನು ರದ್ದುಪಡಿಸುವ ಮೂಲಕ ಮೋದಿ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಯಾವ ಸರ್ಕಾರದಿಂದಲೂ ಮಾಡಲಾಗದ ಒಂದು ದೊಡ್ಡ ಸಾಧನೆಯನ್ನು ಮಾಡಿದೆ ಎಂದು ಹೇಳುವ ಮೂಲಕ ತನ್ನ ಸಾಧನೆಯನ್ನು ತಾನೇ ಕೊಚ್ಚಿಕೊಂಡಿದೆ. ಆದರೆ, ವಾಸ್ತವ ಸಂಗತಿ ಏನೆಂದರೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನಾವು ಗಳಿಸಿದ ಹಾಗೂ ಸಾಧಿಸಿದ ಎಲ್ಲವನ್ನೂ ಕೇವಲ ಒಂದೇ ವರ್ಷದಲ್ಲೇ ಕಳೆದುಕೊಂಡಿದ್ದೇವೆ ಎಂದು ರಾಷ್ಟ್ರೀಯ ಸಮ್ಮೇಳನ ಪ್ರಾಂತೀಯ ಕಾರ್ಯದರ್ಶಿ ಶೇಖ್ ಬಶೀರ್ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ, ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ತೆಗೆದುಹಾಕಲು ಬೆಂಬಲಿಸಿದ ಅನೇಕರು ಸಹ ಈ ದಿನಗಳಲ್ಲಿ ನಿರಾಶೆ ಅನುಭವಿಸುತ್ತಿದ್ದಾರೆ ಎಂದು ತೋರುತ್ತದೆ.

ನಾವು ಕಳೆದ ವರ್ಷ ಆಗಸ್ಟ್ 5 ರಂದು ಭಾರತ ಸರ್ಕಾರದ ಈ ಕ್ರಮವನ್ನು ಸಂಭ್ರಮಿಸಿದ್ದೇವೆ. ಏಕೆಂದರೆ ಈ ತಿದ್ದುಪಡಿಯು ಕಾಶ್ಮೀರ ಕೇಂದ್ರಿತ ರಾಜಕೀಯದ ಯುಗವನ್ನು ಕೊನೆಗೊಳಿಸುತ್ತದೆ ಮತ್ತು ಜಮ್ಮು ಜನರು ತಮ್ಮ ರಾಜಕೀಯ ಮತ್ತು ಅಭಿವೃದ್ಧಿ ಹಕ್ಕುಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಇದಾಗಿ ಒಂದು ವರ್ಷಗಳಾಗಿವೆ. ಆದರೆ ಪರಿಸ್ಥಿತಿಯಲ್ಲಿ ನಾವು ಇನ್ನೂ ಯಾವುದೇ ಸುಧಾರಣೆಯನ್ನು ಕಾಣಲಿಲ್ಲ. ನಾವು ಮೋಸ ಹೋಗಿದ್ದೇವೆ ಎಂದು ಸ್ಥಳೀಯ ರಾಜಕೀಯ ಪಕ್ಷದ ಅಧ್ಯಕ್ಷ, ವಕೀಲ ಅಂಕುರ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ನಾವು ಸಮೃದ್ಧಿಯನ್ನು ನಿರೀಕ್ಷಿಸುತ್ತಿದ್ದೆವು. ಆದರೆ ಬಿಜೆಪಿ ನಮ್ಮ ಆಶಯ ಮತ್ತು ಕನಸುಗಳನ್ನು ಹಾಳು ಮಾಡಿದೆ ಎಂದು ತೋರುತ್ತದೆ. ಅಂದು ಈ ಬಗ್ಗೆ ಜಮ್ಮು ಜನರು ಸರ್ಕಾರವನ್ನು ಬೆಂಬಲಿಸಿದ್ದರು. ಅಭಿವೃದ್ಧಿ ಮತ್ತು ಸಮೃದ್ಧಿಯ ಬಗ್ಗೆ ಹಲವಾರು ಭರವಸೆಗಳನ್ನು ನಮಗೆ ನೀಡಲಾಗಿತ್ತು. ಆದ್ರೆ ಈಗ ನಾವು ಮೂರ್ಖರಾಗಿದ್ದೇವೆ ಎಂದು ತೋರುತ್ತದೆ ಎಂದು ಶಿವಸೇನಾ ನಾಯಕ ಮನೀಶ್ ಸಾಹ್ನಿ ಹೇಳಿದ್ದಾರೆ.

ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ ಸಾಹ್ನಿ, ಕೇಂದ್ರಾಡಳಿತ ಪ್ರದೇಶವನ್ನು ವಿನಾಶದ ಹಾದಿಯಿಂದ ಮರಳಿ ತರಲು ಮತ್ತು ಅದನ್ನು ಅಭಿವೃದ್ಧಿ ಹಾಗೂ ಸಮೃದ್ಧಿಯ ಹಾದಿಯಲ್ಲಿ ಇರಿಸಲು ಬಿಜೆಪಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾವು ಇನ್ನೂ ಭಾವಿಸುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.