ETV Bharat / bharat

ವಿಶೇಷ ಲೇಖನ: ಚೀನಾದ ಗಡಿಯಲ್ಲಿ ನಿಃಶ್ಶಸ್ತ್ರ ಯೋಧರು!

author img

By

Published : Jun 19, 2020, 5:56 PM IST

ಬಿಲಾಲ್‌ ಭಟ್

China border
ಚೀನಾ

ಭಾರತ-ಚೀನಾ ಗಡಿಯಲ್ಲಿ ನಡೆದ ಘಟನೆಯ ಕಾವು ಇನ್ನೂ ಇಳಿಯುವ ಮೊದಲೇ ಹಲವು ಪ್ರಶ್ನೆಗಳು ಎದ್ದಿವೆ. ಎಲ್‌ಎಸಿಯಂತಹ ಪ್ರದೇಶಕ್ಕೆ ಭಾರತೀಯ ಪಡೆಯನ್ನು ನಿಃಶ್ಶಸ್ತ್ರವಾಗಿ ಯಾಕೆ ಕಳುಹಿಸಲಾಯಿತು ಎಂಬ ಪ್ರಶ್ನೆ ಎದ್ದಿದೆ. ಕರ್ನಲ್ ಸಂತೋಷ್ ಬಾಬು ನೇತೃತ್ವದ ಭಾರತೀಯ ಸೇನೆಯ ಗಸ್ತು ಪಡೆಯು ಜೂನ್ 15-16 ರ ರಾತ್ರಿ ಹಿಂತಿರುಗುವ ಸನ್ನಾಹದಲ್ಲಿತ್ತು. ಆದರೆ, ಗಾಲ್ವಾನ್ ಕಣಿವೆಯಲ್ಲಿ ಒಂದಷ್ಟು ಟೆಂಟ್‌ಗಳನ್ನು ನಿರ್ಮಿಸಿರುವುದು ಕಂಡುಬಂತು. ಆಗ ಅದನ್ನು ತೆಗೆದುಹಾಕುವಂತೆ ಚೀನಾ ಸೇನೆಗೆ ಸೂಚಿಸಿತು. ಇದು ವಿಕೋಪಕ್ಕೆ ತಿರುಗಿ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾಗಲು ಕಾರಣವಾಯಿತು ಮತ್ತು ಈ ಘಟನೆಯಲ್ಲಿ ಹಲವು ಯೋಧರು ಗಾಯಗೊಂಡರು.

4,000 ಕಿ.ಮೀ ಉದ್ದದ ಎಲ್‌ಎಸಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಮಾಡಿವೆ. ಇದನ್ನು ಬಿಡಿಸಿಎ (ಗಡಿ ರಕ್ಷಣೆ ಸಹಕಾರ ಒಪ್ಪಂದ) 2013 ಎಂದು ಹಾಗೂ ಎಲ್‌ಎಸಿ ಕರಾರು 1996 ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸೇನಾ ಭಾಷೆಯಲ್ಲಿ ಸೇನೆಯ ತೊಡಗಿಸಿಕೊಳ್ಳುವಿಕೆ ಎಂದು ಕರೆಯುತ್ತಾರೆ. ಇದಕ್ಕೆ ಎರಡೂ ದೇಶಗಳು ಬದ್ಧವಾಗಿರಬೇಕಾಗುತ್ತದೆ. ಆದರೆ ಎಲ್‌ಎಸಿಯಲ್ಲಿ ಸೇನೆಯ ಗಸ್ತು ಪಡೆಯುವ ಶಸ್ತ್ರಾಸ್ತ್ರವನ್ನು ತೆಗೆದುಕೊಂಡು ಹೋಗಬಾರದು ಎಂದು ಎಲ್ಲೂ ಈ ಒಪ್ಪಂದದಲ್ಲಿ ಬರೆದಿಲ್ಲ. ಇನ್ನೊಂದೆಡೆ, ಚೀನಾದ ಕಡೆಯಲ್ಲಿ ಎಲ್‌ಎಸಿ ಬಳಿ ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಲಾಗಿದೆ.

ಆದರೆ ಈ ಒಪ್ಪಂದದಲ್ಲಿ ಸೇನಾ ಸಾಮರ್ಥ್ಯವನ್ನು ಪರಸ್ಪರರ ಮೇಲೆ ಬಳಸಲು ಅವಕಾಶವಿಲ್ಲ. ಅಷ್ಟೇ ಅಲ್ಲ, ಇನ್ನೊಂದು ದೇಶದ ಗಸ್ತು ವಿಧಾನವನ್ನು ಅನುಸರಿಸುವ ಕುರಿತು ವಿವರವೂ ಇಲ್ಲ. ಯಾವುದೇ ಗಡಿ ವಿಚಾರದಲ್ಲಿ ಗೊಂದಲವಿದ್ದರೆ, ಇದನ್ನು ಬಗೆಹರಿಸಿಕೊಳ್ಳುವ ಕುರಿತೂ ಒಪ್ಪಂದದಲ್ಲಿ ವಿವರಗಳಿವೆ.

ಗಡಿ ವಿಚಾರದಲ್ಲಿ ವಿವಾದ ಉಂಟಾಗಿ ಎರಡೂ ದೇಶಗಳ ಗಸ್ತು ಪಡೆಯು ಸಂಪರ್ಕಕ್ಕೆ ಬಂದರೆ ಅಥವಾ ಇನ್ನೊಂದು ದೇಶದ ಗಸ್ತು ಪಡೆಯು ಒಳನುಸುಳಿರುವುದು ಕಂಡುಬಂದರೆ, ಒಪ್ಪಂದವನ್ನು ಗೌರವಿಸಿ ಹಿನ್ನಡೆಯುವಂತೆ ಇನ್ನೊಂದು ಬದಿಗೆ ಸೂಚಿಸಲು ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಈ ಬ್ಯಾನರ್‌ಗಳು ಸಾಮಾನ್ಯವಾಗಿ ಎಲ್‌ಎಸಿಯಲ್ಲಿರುವ ಸೇನಾ ನೆಲೆಗಳಲ್ಲಿ ಲಭ್ಯವಿರುತ್ತವೆ. ಸಾಮಾನ್ಯವಾಗಿ ಇದರಲ್ಲಿ 'ನೀವು ನಮ್ಮ ಗಡಿಯೊಳಗಿದ್ದೀರಿ' ಅಥವಾ 'ದಯವಿಟ್ಟು ಹಿಂದಕ್ಕೆ ಹೋಗಿ' ಎಂದು ಬರೆದಿರುತ್ತದೆ.

ಇಡೀ ಎಲ್‌ಎಸಿಯ ಕುರಿತು ವಿವಿಧ ದೃಷ್ಟಿಕೋನಗಳಿದ್ದು, ಸ್ಪಷ್ಟವಾಗಿ ನಿಗದಿಸಿಲ್ಲ. ಹೀಗಾಗಿ ಗಡಿಯಲ್ಲಿ ಒಳನುಸುಳುವಿಕೆ ಸಹಜ ಸಂಗತಿಯಾಗಿದೆ. ಗಡಿ ಸಂಘರ್ಷವನ್ನು ನಿರ್ವಹಿಸಲು, ಒಂದೂವರೆ ವರ್ಷಗಳ ಹಿಂದೆ ಹಾಟ್‌ಲೈನ್‌ ಮೂಲಕ ಸಭೆ ಮತ್ತು ಸಂವಹನ ಪದೇ ಪದೇ ನಡೆಯುತ್ತಿತ್ತು. ವಿವಿಧ ಗಡಿ ನೆಲೆಗಳಲ್ಲಿ ಉದ್ವಿಗ್ನ ಸ್ಥಿತಿಯನ್ನು ಕಡಿಮೆ ಮಾಡಲು, ಎರಡೂ ದೇಶಗಳ ಸೇನೆಯು ಸ್ಥಳೀಯ ಮಟ್ಟದಲ್ಲಿ ಸಂವಹನ ನಡೆಸುತ್ತದೆ. ಸಾಮಾನ್ಯವಾಗಿ ದೊಡ್ಡ ತುಕಡಿಯನ್ನು ಗಡಿಯ ಬಳಿ ಕಳುಹಿಸುವಾಗ ದುಭಾಷಿಯನ್ನೂ ಕಳುಹಿಸಲಾಗುತ್ತದೆ. ಭಾರತೀಯ ಸೇನೆಯು ಎಲ್‌ಎಸಿಯಲ್ಲಿ ನಿಯೋಜಿಸಿರುವ ದುಭಾಷಿಗಳು ಚೈನೀಸ್ ಮತ್ತು ಇಂಗ್ಲಿಷ್ ಅನ್ನು ಮಾತನಾಡುತ್ತಾರೆ. ಇದೇ ರೀತಿ ಚೀನಾದ ದುಭಾಷಿಗಳು ಕೂಡ ಪಿಎಲ್ಎ ಮತ್ತು ಭಾರತೀಯ ಸೇನೆಯ ಮಧ್ಯೆ ಸಂವಹನ ನಡೆಸಲು ಹಿಂದಿ ಮತ್ತು ಇಂಗ್ಲಿಷ್ ಬಲ್ಲವರಾಗಿರುತ್ತಾರೆ.

ಕರ್ನಲ್ ಬಾಬು ಅವರ ಗಸ್ತು ಪಡೆಯು ಮಂಗಳವಾರ ನಡೆಯಬಹುದಾದ ಸಂಘರ್ಷವನ್ನು ಮೊದಲೇ ಊಹಿಸಬಹುದಿತ್ತು. ಯಾಕೆಂದರೆ ಅದಾಗಲೇ ಮೇ 5-6 ರಂದು ಬಿಡಿಸಿಎ ಉಲ್ಲಂಘಿಸಿ ಭಾರತೀಯ ಸೇನೆಯ ಗಸ್ತು ಪಡೆಯನ್ನು ಚೀನಾ ಸೇನೆಯು ಒಳ ನೂಕಲು ಪ್ರಯತ್ನಿಸಿತ್ತು.

ಪ್ರಮಾಣಿತ ಸೇನಾ ನಿಯಮಗಳ ಪ್ರಕಾರ, ಯಾವುದೇ ಕರಾರನ್ನು ಉಲ್ಲಂಘಿಸಿ ಆತ್ಮ ರಕ್ಷಣೆಗೆ ಸೇನೆಯು ಶಸ್ತ್ರಗಳನ್ನು ಬಳಸಬಹುದು. ಆದರೆ ಸೇನೆಯ ಗಸ್ತು ಪಡೆಯು ಇಂತಹ ಸನ್ನಿವೇಶದಲ್ಲಿ ಎಲ್‌ಎಸಿಯಲ್ಲಿ ಶಸ್ತ್ರವಿಲ್ಲದೇ ಹಾಜರಿತ್ತು ಎಂಬುದಕ್ಕೆ ಸರಿಯಾದ ಉತ್ತರವನ್ನು ನಾವು ನಿರೀಕ್ಷಿಸಬೇಕಾಗುತ್ತದೆ. ಯೋಧರನ್ನು ರಕ್ಷಿಸಲು ಶಸ್ತ್ರಗಳಿದ್ದರೆ, ರಾಷ್ಟ್ರೀಯ ಭದ್ರತೆಯನ್ನೂ ಅದು ರಕ್ಷಿಸುತ್ತದೆ.

ಭಾರತೀಯ ಸೇನಾ ಪಡೆಯ ತುಕಡಿಯು ಮಂಗಳವಾರ ನಿಃಶ್ಶಸ್ತ್ರವಾಗಿ ಅಲ್ಲಿ ಯಾಕಿತ್ತು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಮತ್ತು ಯಾವುದೇ ಸೂಕ್ತ ರಕ್ಷಣೆ ಇಲ್ಲದೆ ಯಾರ ಸೂಚನೆಯನ್ನು ಅನುಸರಿಸಿ ಚೀನಾ ಸೇನೆಯನ್ನು ಎದುರಿಸಿತು ಎಂಬುದನ್ನೂ ನಾವು ತಿಳಿದುಕೊಳ್ಳಬೇಕಿದೆ. ಈ ಹಿಂದೆ, ಸಂಪೂರ್ಣ ಸೇನಾ ಶಸ್ತ್ರದೊಂದಿಗೆ ಸೇನೆ ಗಸ್ತು ತಿರುಗುತ್ತಿತ್ತು ಮತ್ತು ಯಾವಾಗ ಎಲ್‌ಎಸಿಯಲ್ಲಿ ಗಸ್ತು ಮಾಡುವಾಗ ಶಸ್ತ್ರವನ್ನು ಕೈಬಿಡಲಾಯಿತು ಎಂಬುದು ತಿಳಿದುಕೊಳ್ಳಬೇಕಿರುವ ಸಂಗತಿಯಾಗಿದೆ.

ಹೇಗೆ ಈ ಅನೌಪಚಾರಿಕ ಶಿಷ್ಟಾಚಾರವನ್ನು ಎಲ್‌ಎಸಿಯಲ್ಲಿ ಪರಿಚಯಿಸಲಾಯಿತು? ಇದರಿಂದಾಗಿ ಇಷ್ಟು ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಇದು ಹಲವು ಪ್ರಶ್ನೆಗಳನ್ನೂ ನಮ್ಮ ಎದುರು ಬಿಚ್ಚಿಟ್ಟಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.