ಲಂಡನ್ : ಬ್ರಿಟನ್ ಪ್ರಧಾನಿ ಬೋರಿ ಜಾನ್ಸನ್ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಸಾವನ್ನೇ ಗೆದ್ದು ಬಂದಿದ್ದರು. ಇದಲ್ಲದೆ ಇತ್ತೀಚಿಗೆ ಬೋರಿಸ್ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ತನ್ನ ಎರಡನೇ ಪತ್ನಿ ಮರೀನಾ ವೀಲರ್ಗೆ ವಿಚ್ಛೇದನ ನೀಡಿದ್ದು, ಪ್ರೇಯಸಿಯೊಂದಿಗೆ ವಿವಾಹವಾಗಲು ದಾರಿಮಾಡಿಕೊಂಡಿದ್ದಾರೆ ಎಂದು ಯುಕೆ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಫೆಬ್ರವರಿಯಲ್ಲಿ ವೀಲರ್ ಇಲ್ಲಿನ ಕೋರ್ಟ್ ಮುಂದೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಏಪ್ರಿಲ್ 29ರಂದು ಜಾನ್ಸನ್ ತನ್ನ ನವಜಾತ ಗಂಡು ಮಗು ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್‌ನ ಬರಮಾಡಿಕೊಂಡಿದ್ದರು ಎಂದು ಮೆಟ್ರೋ ಪತ್ರಿಕೆ ದಿ ಮಿರರ್ ವರದಿ ಮಾಡಿದೆ.
ಮಾಜಿ ದಂಪತಿ ಹಣ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಲಂಡನ್ನ ಫ್ಯಾಮಿಲಿ ಕೋರ್ಟ್ನಲ್ಲಿ ಚರ್ಚೆಯ ಬಳಿಕ ತೀರ್ಮಾನಕ್ಕೆ ಬಂದಿದ್ದಾರೆ. ಸುಮಾರು 4 ಮಿಲಿಯನ್ ಪೌಂಡ್ ನೀಡುವ ಷರತ್ತಿಗೆ ಇಬ್ಬರೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇವರಿಬ್ಬರು 1993ರಲ್ಲಿ ವಿವಾಹವಾಗಿ 4 ಮಕ್ಕಳನ್ನು ಪಡೆದಿದ್ದರು. ಬಳಿಕ 2018ರಲ್ಲಿ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು.