ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ಸೂತ್ರಧಾರ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಶಿವಾಜಿ ಪಾರ್ಕ್ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪ್ರತಿಜ್ಞಾವಿಧಿ ಬೋಧಿಸಿದರು.
ಎನ್ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ 19ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಶಿವಸೇನೆಗೆ ಒಲಿದು ಬಂದಿರುವ ಮೊದಲ ಮುಖ್ಯಮಂತ್ರಿ ಪದವಿ ಇದಾಗಿದೆ. ಚುನಾವಣೆ ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ತದನಂತರ ಸೀಟು ಹಂಚಿಕೆ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಬಿಜೆಪಿ ತೊರೆದು ಎನ್ಸಿಪಿ+ಕಾಂಗ್ರೆಸ್ ಜತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ.
-
Mumbai: The oath-taking ceremony of Chief Minister Uddhav Thackeray & others concludes. #Maharashtra pic.twitter.com/ShtgPL1OS7
— ANI (@ANI) November 28, 2019 " class="align-text-top noRightClick twitterSection" data="
">Mumbai: The oath-taking ceremony of Chief Minister Uddhav Thackeray & others concludes. #Maharashtra pic.twitter.com/ShtgPL1OS7
— ANI (@ANI) November 28, 2019Mumbai: The oath-taking ceremony of Chief Minister Uddhav Thackeray & others concludes. #Maharashtra pic.twitter.com/ShtgPL1OS7
— ANI (@ANI) November 28, 2019
ಇವರ ಜತೆಗೆ ಶಿವಸೇನೆಯ ಏಕನಾಥ್ ಸಂಬಾಜಿ ಶಿಂಧೆ, ಸುಭಾಶ್ ದೇಸಾಯಿ, ಎನ್ಸಿಪಿಯಿಂದ ಜಯಂತ್ ಪಾಟೀಲ್, ಚಗುಣ್ ಬುಜ್ಬಲ್, ಕಾಂಗ್ರೆಸ್ನಿಂದ ಬಾಳಾ ಸಾಹೇಬ್ ತೋರಾಟ್ ಹಾಗೂ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
-
#Maharashtra: Congress leaders Balasaheb Thorat and Nitin Raut take oath as Ministers. pic.twitter.com/exY9bMoOTN
— ANI (@ANI) November 28, 2019 " class="align-text-top noRightClick twitterSection" data="
">#Maharashtra: Congress leaders Balasaheb Thorat and Nitin Raut take oath as Ministers. pic.twitter.com/exY9bMoOTN
— ANI (@ANI) November 28, 2019#Maharashtra: Congress leaders Balasaheb Thorat and Nitin Raut take oath as Ministers. pic.twitter.com/exY9bMoOTN
— ANI (@ANI) November 28, 2019
ಅದ್ಧೂರಿ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಸೇರಿದಂತೆ ಪ್ರಮುಖರು ಹಾಜರಿದ್ದರು.