ದೆಹಲಿ: ಕೊರೊನಾ ವೈರಸ್ನಿಂದಾಗಿ ಸುಮಾರು 600 ಜನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಉಬರ್ ಇಂಡಿಯಾ ಮಂಗಳವಾರ ತಿಳಿಸಿದೆ.
ಕೆಲವೊಂದು ಸಂದರ್ಭದಲ್ಲಿ ನೌಕರರು, ಚಾಲಕ ಮತ್ತು ಸವಾರರ ಜೊತೆ ಸಂಪರ್ಕ ಹೊಂದಿರುತ್ತಾರೆ ಎಂದು ಉಬರ್‌ನ ಭಾರತ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊವಿಡ್-19 ರ ಪರಿಣಾಮದಿಂದಾಗಿ ಉಬರ್ ಇಂಡಿಯಾ ತನ್ನ ಉದ್ಯೋಗಿಗಳ ಗಾತ್ರವನ್ನು ಕಡಿಮೆ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ. ಚಾಲಕ, ಸವಾರರ ಬೆಂಬಲ ಮತ್ತು ಇತರೆ ಕಾರ್ಯಗಳಿಂದಾಗಿ ಸುಮಾರು 600 ನೌಕರರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಇದು ತಿಂಗಳ ಹಿಂದೆ ಘೋಷಿಸಲಾದ ಜಾಗತಿಕ ಉದ್ಯೋಗ ಕಡಿತದ ಭಾಗವಾಗಿದೆ ಎಂದು ಪರಮೇಶ್ವರನ್ ತಿಳಿಸಿದ್ದಾರೆ.