ETV Bharat / bharat

ಅಕ್ರಮ ಆರೋಪ: ಯುಪಿಯಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಅಮಾನತು

ಅಕ್ರಮ ಆರೋಪದ ಮೇಲೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ಅಮಾನತು ಮಾಡಲಾಗಿದೆ.

author img

By

Published : Aug 25, 2020, 8:37 AM IST

IPS officers suspended in UP
ಯುಪಿಯಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಅಮಾನತು

ಲಕ್ನೋ: ಅಕ್ರಮ ಆರೋಪದ ಮೇಲೆ ಉತ್ತರ ಪ್ರದೇಶ ಸರ್ಕಾರ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.

ದಿನೇಶ್ ಚಂದ್ರ ದುಬೆ ಮತ್ತು ಅರವಿಂದ್ ಸೇನ್​​ ಅಮಾನತುಗೊಂಡವರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ಸರ್ಕಾರವು ಡಿಐಜಿ ದಿನೇಶ್ ಚಂದ್ರ ದುಬೆ ಮತ್ತು ಆಗ್ರಾದ ಡಿಐಜಿ ಅರವಿಂದ ಸೇನ್ ಅವರನ್ನು ಅಮಾನತುಗೊಳಿಸಿದೆ ಎಂದು ಗೃಹ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ರಾಯ್ ಬರೇಲಿ ಜಿಲ್ಲೆಯ ಶಿವಗರಂಡ್ ಬಚ್ರವಾನ್ ಮತ್ತು ಸದಾಬಾದ್​​ನಲ್ಲಿ ಕಸ್ತೂರ್ಬಾ ಹಾಸ್ಟೆಲ್​ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ದುಬೆ ಕೆಲವು ಲಾಭಕ್ಕಾಗಿ ಟೆಂಡರ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ.

ಅರವಿಂದ್ ಸೇನ್‌ಗೆ ಸಂಬಂಧಿಸಿದಂತೆ, ಪಶುಸಂಗೋಪನಾ ಇಲಾಖೆಯಲ್ಲಿ ಮೋಸ ಮತ್ತು ಖೋಟಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.