ETV Bharat / bharat

ಭೀಕರ ರಸ್ತೆ ಅಪಘಾತ: ಇಬ್ಬರು ವಲಸಿಗರು ದುರ್ಮರಣ, 14 ಮಂದಿಗೆ ಗಂಭೀರ ಗಾಯ

ಸುಮಾರು 50 ಮಂದಿ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

author img

By

Published : May 15, 2020, 10:09 AM IST

Uttar Pradesh Road Accident
ರಸ್ತೆ ಅಪಘಾತ

ಜಲಾನ್​(ಉತ್ತರ ಪ್ರದೇಶ): ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಲಾನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅಪಘಾತಕ್ಕೊಳಗಾಗಿರುವ ಟ್ರಕ್ ಮಹಾರಾಷ್ಟ್ರದಿಂದ ಬಂದಿದ್ದು, ಇದರಲ್ಲಿ ಸುಮಾರು 50 ಮಂದಿ ವಲಸೆ ಕಾರ್ಮಿಕರಿದ್ದರು. ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿ ಬಳಿ ವೇಗವಾಗಿ ಬಂದ ವಾಹನವೊಂದು ಟ್ರಕ್​ಗೆ ಗುದ್ದಿದ್ದು, ನಿಯಂತ್ರಣ ಕಳೆದುಕೊಂಡ ಟ್ರಕ್ ಪಲ್ಟಿ ಹೊಡೆದಿದೆ.

ಸ್ಥಳಕ್ಕೆ ಧಾವಿಸಿರುವ ಸ್ಥಳೀಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.