ಬಂದಾ (ಉತ್ತರ ಪ್ರದೇಶ): ಇಬ್ಬರು ಅಪ್ರಾಪ್ತೆಯರ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಗಡಿ ಜಿಲ್ಲೆ ಚಿತ್ರಕೂಟ್ನ ಗ್ರಾಮವೊಂದರಲ್ಲಿ ನಡೆದಿದೆ.
ಏಳು ಮತ್ತು ಎಂಟು ವರ್ಷದ ಬಾಲಕಿಯರಿಬ್ಬರು ಮನೆಯ ಹೊರಗಡೆ ಬುಧವಾರ ಮಧ್ಯಾಹ್ನ ಆಟವಾಡುತ್ತಿರುವ ವೇಳೆ ಆ ಮಕ್ಕಳ ಸೋದರ ಸಂಬಂಧಿಯಾಗಿರುವ ಬಲವೀರ್ ಸಿಂಗ್ (32) ಎಂಬಾತ ಏಕಾಂತ ಸ್ಥಳಕ್ಕೆ ಅವರನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಕ್ಕಳು ಅಳುವ ಶಬ್ದ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ.
ಸಂತ್ರಸ್ತ ಬಾಲಕಿಯರ ಕುಟುಂಬಸ್ಥರು ನೀಡಿರುವ ದೂರಿಗೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಹುಡುಕಲಾಗುತ್ತಿದೆ. ಅಪ್ರಾಪ್ತೆಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜಾಪುರ ಪೊಲೀಸ್ ಠಾಣೆಯ ಎಸ್ಹೆಚ್ಒ ಗುಲಾಬ್ ಚಂದ್ರ ತ್ರಿಪಾಟಿ ತಿಳಿಸಿದ್ದಾರೆ.
ಇನ್ನು ನಿನ್ನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿ, ಇತರ ನಾಲ್ವರು ಈ ದುಷ್ಕೃತ್ಯವನ್ನು ವಿಡಿಯೋ ಮಾಡಿರುವ ಘಟನೆ ನಡೆದಿತ್ತು.