ETV Bharat / bharat

ಸಿಯಾಚಿನ್​​ನಲ್ಲಿ ಹಿಮಪಾತ... 18 ಸಾವಿರ ಅಡಿ ಎತ್ತರದ ಪಹರೆಯಲ್ಲಿದ್ದ ಇಬ್ಬರು ಯೋಧರು ಹುತಾತ್ಮ!

author img

By

Published : Nov 30, 2019, 8:10 PM IST

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್​​ನಲ್ಲಿ ಪಹರೆ ನಡೆಸುತ್ತಿದ್ದ ವೇಳೆ ಏಕಾಏಕಿ ಹಿಮಪಾತವಾಗಿರುವ ಪರಿಣಾಮ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

avalanche in Siachen
ಸಿಯಾಚಿನ್​​ನಲ್ಲಿ ಹಿಮಪಾತ

ಜಮ್ಮು: ಸರಿಸುಮಾರು 18 ಸಾವಿರ ಅಡಿ ಎತ್ತರದ ಸಿಯಾಚಿನ್​​ ಹಿಮಶ್ರೇಣಿಯಲ್ಲಿ ಪಹರೆ ನಡೆಸುತ್ತಿದ್ದ ವೇಳೆ ಹಿಮಪಾತ ಉಂಟಾಗಿರುವ ಪರಿಣಾಮ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದೀಗ ಮತ್ತೆ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಹಿಮಪಾತವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಪಡೆ, ಕೆಲ ಯೋಧರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದೆ. ಘಟನೆಯಲ್ಲಿ ಇಬ್ಬರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಯುದ್ಧ ಪ್ರದೇಶವಾಗಿರುವ ಸಿಯಾಚಿಯನ್​ನಲ್ಲಿ ಮೇಲಿಂದ ಮೇಲೆ ಹಿಮಕುಸಿತವಾಗುತ್ತಿದ್ದು, ಭಾರತೀಯ ವೀರ ಯೋಧರು ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಘಟನೆಗಳು ನಡೆಯುತ್ತಿರುತ್ತವೆ.

2016ರಲ್ಲಿ ಸಿಯಾಚಿನ್​​ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 10 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು. 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಕರ್ನಾಟಕದ ಧೀರ ಯೋಧ ಹನುಮಂತಪ್ಪ ಕೊಪ್ಪದ್​​ 6 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು.

Intro:Body:

ಸಿಯಾಚಿನ್​​ನಲ್ಲಿ ಹಿಮಪಾತ... 18 ಸಾವಿರ ಅಡಿ ಎತ್ತರದ ಪಹರೆಯಲ್ಲಿದ್ದ ಇಬ್ಬರು ಯೋಧರು ಹುತಾತ್ಮ! 

 ಜಮ್ಮು: ಸರಿಸುಮಾರು 18 ಸಾವಿರ ಅಡಿ ಎತ್ತರದ ಸಿಯಾಚಿನ್​​ ಹಿಮಶ್ರೇಣಿಯಲ್ಲಿ ಪಹರೆ ನಡೆಸುತ್ತಿದ್ದ ವೇಳೆ ಹಿಮಪಾತ ಉಂಟಾಗಿರುವ ಪರಿಣಾಮ ಇಬ್ಬರು ವೀರ ಯೋಧರು ಹುತಾತ್ಮರಾಗಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದೀಗ ಮತ್ತೆ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಹಿಮಪಾತವಾಗುತ್ತಿದ್ದಂತೆ ಸ್ಥಳಕ್ಕೆ ದಾವಿಸಿರುವ ರಕ್ಷಣಾ ಪಡೆ ಕೆಲ ಯೋಧರ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಘಟನೆಯಲ್ಲಿ ಇಬ್ಬರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 

ವಿಶ್ವದ ಅತ್ಯಂತ ಎತ್ತರದ ಯುದ್ಧ ಪ್ರದೇಶವಾಗಿರುವ ಸಿಯಾಚಿಯನ್​ನಲ್ಲಿ ಮೇಲಿಂದ ಮೇಲೆ ಹಿಮಕುಸಿತವಾಗುತ್ತಿದ್ದು, ಭಾರತೀಯ ವೀರ ಯೋಧರು ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಘಟನೆ ನಡೆಯುತ್ತಿರುತ್ತವೆ. 

2016ರಲ್ಲಿ ಸಿಯಾಚಿನ್​​ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 10 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು. 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಕರ್ನಾಟಕದ ಧೀರ ಯೋಧ ಹನುಮಂತಪ್ಪ ಕೊಪ್ಪದ 6 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.