ಮುಂಬೈ: ಮಹಾರಾಷ್ಟ್ರದ ಖ್ಯಾತ ಟಿವಿ ಆ್ಯಕ್ಟರ್ ಹಾಗೂ ಬಿಗ್ಬಾಸ್ 11 ರಿಯಾಲಿಟಿ ಶೋ ವಿನ್ನರ್ ಶಿಲ್ಪಾ ಶಿಂಧೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಹಾಗೂ ಪಕ್ಷದ ಮುಖಂಡ ಚರಣ್ ಸಿಂಗ್ ಸಪ್ರಾ ನೇತೃತ್ವದಲ್ಲಿ ಶಿಲ್ಪಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇವಳು ಭಾಬಿ ಜಿ ಘರ್ ಪೇ ಹೈ ಎಂಬ ಧಾರಾವಾಹಿಯಲ್ಲಿ ಅಘೋರಿ ಬಾಬಿ ಎಂಬ ಹೆಸರಿನೊಂದಿಗೆ ಈಕೆ ಎಲ್ಲರ ಮನೆಮಾತಾಗಿ ಫೇಮಸ್ ಆಗಿದ್ದಾಳೆ.
Mumbai: TV actress Shilpa Shinde joins Congress in presence of Sanjay Nirupam, President of Mumbai Congress Committee and party leader Charan Singh Sapra. pic.twitter.com/cBO5q6fTl6
— ANI (@ANI) February 5, 2019 " class="align-text-top noRightClick twitterSection" data="
">Mumbai: TV actress Shilpa Shinde joins Congress in presence of Sanjay Nirupam, President of Mumbai Congress Committee and party leader Charan Singh Sapra. pic.twitter.com/cBO5q6fTl6
— ANI (@ANI) February 5, 2019Mumbai: TV actress Shilpa Shinde joins Congress in presence of Sanjay Nirupam, President of Mumbai Congress Committee and party leader Charan Singh Sapra. pic.twitter.com/cBO5q6fTl6
— ANI (@ANI) February 5, 2019
ಇದೀಗ ಸುನಿಲ್ ಗ್ರೋವರ್ ಅವರ ಕ್ರಿಕೆಟ್ ಸಂಬಂಧಿತ ವೆಬ್ ಸಿರೀಸ್ನಲ್ಲಿ ಜಿಯೋ ಧನ್ ಧನಾ ಧನ್ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೆಲಸ ಮಾಡುತ್ತಿದ್ದಳು. 1977ರ ಆಗಸ್ಟ್ 28ರಂದು ಸಾಮಾನ್ಯ ಕುಟುಂಬದಲ್ಲಿ ಜನಸಿರುವ ಶಿಲ್ಪಾ ತಂದೆ ಡಾ. ಸತ್ಯದೇವ್ ಶಿಂದೆ ಹೈಕೋರ್ಟ್ ಜಡ್ಜ್ ಆಗಿ ಸೇವೆ ಸಲ್ಲಿಸಿದ್ದಾರೆ.
- " class="align-text-top noRightClick twitterSection" data="
">
ಕಳೆದ ಕೆಲ ದಿನಗಳ ಹಿಂದೆ ಜ.27ರಂದು ಬಾಲಿವುಡ್ ಆ್ಯಕ್ಟರ್ ಇಶಾ ಕೊಪ್ಪಿಕರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಶಿಲ್ಪಾ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ಟಾರ್ ಕ್ಯಾಂಪೆನರ್ ಬೇಕು ಎಂಬ ಉದ್ದೇಶದಿಂದ ಈ ನಟಿಯರನ್ನ ಪಕ್ಷ ಸೆಳೆದುಕೊಂಡಿದೆ ಎಂದು ತಿಳಿದು ಬಂದಿದೆ.