ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ಬಳಿಕ ಟರ್ಕಿ ಪಾಕ್ಗೆ ಬೆಂಬಲಕ್ಕೆ ನಿಂತಿದೆ. ಭಾರತದ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿದೆ. ಇದೀಗ ಜೂನ್ 11ರಂದು 3.15 ನಿಮಿಷಗಳ ಜಮ್ಮು ಮತ್ತು ಕಾಶ್ಮೀರದ ವಿಡಿಯೋವೊಂದನ್ನು ತನ್ನ ಯ್ಯೂಟೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದೆ. ಇದು ಭಾರತ- ಟರ್ಕಿ ನಡುವಣ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಿದೆ.
ಟರ್ಕಿಯ ಭಾರತ ವಿರೋಧಿ ಹೇಳಿಕೆಗಳು:
ಆರ್ಟಿಕಲ್ 370 ರದ್ಧತಿ ಬಳಿಕ: 2019ರ ಆಗಸ್ಟ್ 6 ರಂದು ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಾಕಿತ್ತು. ಹೀಗೆ ಮಾಡಿದ ಮರುದಿನವೇ ಟರ್ಕಿಶ್ ವಿದೇಶಾಂಗ ಸಚಿವಾಲಯವು "370 ನೇ ವಿಧಿಯನ್ನು ರದ್ದುಪಡಿಸುವುದು ಕಳವಳಕಾರಿ ಎಂದು ಹೇಳುವ ಮೂಲಕ ತನ್ನ ಅಸಮಾಧಾನವನ್ನ ಹೊರ ಹಾಕಿತ್ತು.
ಟರ್ಕಿ ಅಧ್ಯಕ್ಷ ಎರ್ಡೊಜೆನ್ ಭಾಷಣ: ಸೆಪ್ಟೆಂಬರ್ 24, 2019ರಂದು, ಕಾಶ್ಮೀರ ಸಂಘರ್ಷದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಗಮನ ಹರಿಸಲುವಲ್ಲಿ ವಿಫಲವಾಗಿದೆ. 72 ವರ್ಷಗಳಿಂದ ಗಡಿ ವಿಚಾರ ಪರಿಹಾರಕ್ಕಾಗಿ ಕಾಯುತ್ತಿದೆ. ಈ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ ಎಂದು ಎಂದು ಟರ್ಕಿಯ ಅಧ್ಯಕ್ಷ ಎರ್ಡೊಜೆನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು.
ಪಾಕಿಸ್ತಾನ ಪ್ರವಾಸ: 2020ರ ಫೆಬ್ರವರಿಯಲ್ಲಿ ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಜೆನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಕಾಶ್ಮೀರದ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದ್ದರು. ಈ ಹೇಳಿಕೆಯಿಂದ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು.
ಪಾಕಿಸ್ತಾನವನ್ನು ಬೆಂಬಲಿಸಲು ಟರ್ಕಿಯ ಕಾರಣಗಳು: ಕಾಶ್ಮೀರದ ಮೇಲೆ ಪಾಕಿಸ್ತಾನಕ್ಕೆ ಟರ್ಕಿಯ ಬೆಂಬಲ ಭಾಗಶಃ ಸೌದಿ ಅರೇಬಿಯಾವನ್ನು ಎದುರಿಸುವ ಪ್ರಯತ್ನವಾಗಿದೆ. ಸೌದಿ ಅರೇಬಿಯಾ ಮತ್ತು ಟರ್ಕಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ರಾಷ್ಟ್ರಗಳು. ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ, ಸೌದಿ ಅರೇಬಿಯಾವನ್ನು ದೂರ ಮಾಡುವ ಉಪಾಯ ಟರ್ಕಿಯದ್ದು.(ಟರ್ಕಿಯ ರಾಜಧಾನಿ ಅಂಕಾರ ಮತ್ತು ಪಾಕ್ನ ರಾಜಧಾನಿ ಇಸ್ಲಾಮಾಬಾದ್ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ತಂತ್ರ ಎಂದೂ ಹೇಳಲಾಗುತ್ತದೆ)
ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಕೆಲವೇ ದೇಶಗಳಲ್ಲಿ (ಮಲೇಷ್ಯಾ ಮತ್ತು ಚೀನಾದೊಂದಿಗೆ) ಟರ್ಕಿ ಕೂಡ ಒಂದು.
ಭಾರತ ಪ್ರತಿಕ್ರಿಯೆಗಳು :
ಅಕ್ಟೋಬರ್ 2019ರಲ್ಲಿ ಮೋದಿ ತಮ್ಮ ಟರ್ಕಿ ಭೇಟಿಯನ್ನು ರದ್ದುಗೊಳಿಸಿದರು. ಟರ್ಕಿ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ರಕ್ಷಣಾ ಸಂಬಂಧಗಳ ದೃಷ್ಟಿಯಿಂದ, ಭಾರತವು ಟರ್ಕಿಗೆ ತನ್ನ ರಕ್ಷಣಾ ರಫ್ತು ಕಡಿತಗೊಳಿಸಿತಲ್ಲದೇ ಆಮದನ್ನು ಕಡಿಮೆ ಮಾಡಿತು. ಭಾರತ ಅರ್ಮೇನಿಯಾದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಂಡಿತು. ಅರ್ಮೇನಿಯಾದೊಂದಿಗೆ ಭಾರತವು 40 ಮಿಲಿಯನ್ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತು. ಒಪ್ಪಂದದ ಪ್ರಕಾರ, ಭಾರತವು ಅರ್ಮೇನಿಯಾಗೆ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡುವ ನಾಲ್ಕು ರಡಾರ್‌ಗಳನ್ನು ಪೂರೈಸಲಿದೆ.
ತುರ್ಕರು ನಡೆಸಿದ ಹತ್ಯಾಕಾಂಡಗಳ ಇತಿಹಾಸ:
ಒಟ್ಟೋಮನ್ ಸಾಮ್ರಾಜ್ಯದ ಅರ್ಮೇನಿಯನ್ ನರಮೇಧ: ಅರ್ಮೇನಿಯನ್ ನರಮೇಧ ಎಂದರೆ ಒಟ್ಟೋಮನ್ ಸಾಮ್ರಾಜ್ಯದ ತುರ್ಕರು ಅರ್ಮೇನಿಯನ್ನರನ್ನು ವ್ಯವಸ್ಥಿತವಾಗಿ ಕೊಲ್ಲುವುದು ಮತ್ತು ಗಡಿಪಾರು ಮಾಡುವುದು. 1915ರಲ್ಲಿ, ಮೊದಲನೇ ಮಹಾಯುದ್ಧದ ಸಮಯದಲ್ಲಿ, ಟರ್ಕಿಶ್ ಸರ್ಕಾರದ ನಾಯಕರು ಅರ್ಮೇನಿಯನ್ನರನ್ನು ಗಡಿಪಾರು ಮತ್ತು ಹತ್ಯಾಕಾಂಡ ಮಾಡುವ ಯೋಜನೆಯನ್ನು ರೂಪಿಸಿದರು. 1920ರ ದಶಕದ ಆರಂಭದ ವೇಳೆಗೆ, ಹತ್ಯಾಕಾಂಡಗಳು ಮತ್ತು ಗಡಿಪಾರುಗಳು ಅಂತಿಮವಾಗಿ ಕೊನೆಗೊಂಡಾಗ, 6,00,000 ಮತ್ತು 1.5 ಮಿಲಿಯನ್ ಅರ್ಮೇನಿಯನ್ನರು ಸತ್ತರು. ಇನ್ನೂ ಅನೇಕರನ್ನು ದೇಶದಿಂದ ಬಲವಂತವಾಗಿ ಗಡಿಪಾರು ಮಾಡಲಾಯಿತು.
ಕುರ್ದ್ಗಳ ವಿರುದ್ಧದ ಹತ್ಯಾಕಾಂಡ:
ಕುರ್ದ್ ಅಂದರೆ ಟರ್ಕಿಯ ಅತಿದೊಡ್ಡ ಟರ್ಕಿಶ್ ಅಲ್ಲದ ಜನಾಂಗೀಯ ಗುಂಪು. ಅವರು ಟರ್ಕಿಯ ಜನಸಂಖ್ಯೆಯ ಶೇಕಡಾ 20ರಷ್ಟಿದ್ದಾರೆ. ಕುರ್ದ್ ಜನಾಂಗದವರು ಅನೇಕ ತಲೆಮಾರುಗಳಿಂದ ಟರ್ಕಿಶ್ ಅಧಿಕಾರಿಗಳಿಂದ ಕಠಿಣ ಶಿಕ್ಷೆಗಳನ್ನು ಒಳಪಟ್ಟಿದ್ದರು. 1920 ಮತ್ತು 1930ರ ದಶಕಗಳಲ್ಲಿನ ದಂಗೆಗಳಿಗೆ ಪ್ರತಿಯಾಗಿ, ಅನೇಕ ಕುರ್ದ್ಗಳ ಕುರ್ದಿಷ್ ಹೆಸರುಗಳು ಮತ್ತು ವೇಷಭೂಷಣಗಳನ್ನು ನಿಷೇಧಿಸಲಾಯಿತು. ಕುರ್ದಿಷ್ ಭಾಷೆಯ ಬಳಕೆಯನ್ನು ನಿರ್ಬಂಧಿಸಲಾಯಿತು ಮತ್ತು ಕುರ್ದಿಷ್ ಜನಾಂಗೀಯ ಗುರುತಾದ "ಮೌಂಟೇನ್ ಟರ್ಕ್ಸ್" ಅಸ್ತಿತ್ವವನ್ನು ಸಹ ಅಳಿಸಿಹಾಕಲಾಯಿತು.
1923ರಲ್ಲಿ ಟರ್ಕಿ ಗಣರಾಜ್ಯವನ್ನು ಸ್ಥಾಪಿಸಿದಾಗಿನಿಂದ ಕುರ್ದಿಗಳ ವಿರುದ್ಧ ಹತ್ಯಾಕಾಂಡಗಳು ನಡೆಯುತ್ತಲೇ ಇತ್ತು.
ಜಿಲಾನ್ ಹತ್ಯಾಕಾಂಡ: 1930ರಲ್ಲಿ ಜಿಲಾನ್ ಹತ್ಯಾಕಾಂಡದಲ್ಲಿ ಸುಮಾರು 15,000 ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟರು. ಹಲವರನ್ನು ಮಷಿನ್ ಗನ್ ಮೂಲಕ ಹತ್ಯೆ ಮಾಡಲಾಯಿತು. ಬಳಿಕ ಮೃತದೇಹಗಳನ್ನು ನದಿಗೆ ಎಸೆಯಲಾಯಿತು.
ಡೆರ್ಸಿಮ್ ಹತ್ಯಾಕಾಂಡ 1938: 1938ರಲ್ಲಿ ನಡೆದ ಡೆರ್ಸಿಮ್ ಹತ್ಯಾಕಾಂಡದಲ್ಲಿ ಪೂರ್ವ ಟರ್ಕಿಯಲ್ಲಿ 70,000 ಜನರನ್ನು ಕೊಲ್ಲಲಾಯಿತು. 1937-38ರಲ್ಲಿ, ತುರ್ಕರು ಸುಮಾರು 10,000-15,000 ಅಲೆವಿಸ್ ಮತ್ತು ಕುರ್ದ್ಗಳನ್ನು ಹತ್ಯೆ ಮಾಡಿದರು.
1970ರ ದಶಕದಲ್ಲಿ, ಪ್ರತ್ಯೇಕತಾವಾದಿ ಚಳವಳಿ ಕುರ್ದಿಷ್ - ಟರ್ಕಿಶ್ ಸಂಘರ್ಷಕ್ಕೆ ಕಾರಣವಾಯಿತು. 1984-1999ರಲ್ಲಿ ಟರ್ಕಿಶ್ ಮಿಲಿಟರಿ ಪಡೆಯು ಪಿಕೆಕೆ (ಪಾರ್ಟಿಯಾ ಕಾರ್ಕೇನ್ ಕುರ್ದಿಸ್ತಾನೆ) ಜೊತೆ ಸಂಘರ್ಷದಲ್ಲಿ ಸಿಲುಕಿಕೊಂಡಿತು. 1990ರ ದಶಕದ ಮಧ್ಯಭಾಗದ ಹೊತ್ತಿಗೆ, 3,000ಕ್ಕೂ ಹೆಚ್ಚು ಹಳ್ಳಿಗಳನ್ನು ನಕ್ಷೆಯಿಂದ ಅಳಿಸಿಹಾಕಲಾಯಿತು ಮತ್ತು ಅಧಿಕೃತ ಅಂಕಿ- ಅಂಶಗಳ ಪ್ರಕಾರ, 378,335 ಕುರ್ದಿಶ್ ಗ್ರಾಮಸ್ಥರನ್ನು ಸ್ಥಳಾಂತರಿಸಲಾಯಿತು.