ಕೊಯಮತ್ತೂರು (ತಮಿಳುನಾಡು): ಲಾಕ್‌ಡೌನ್ ಮಧ್ಯೆ ತಮಿಳುನಾಡು ಸರ್ಕಾರವು ಕರ್ಫ್ಯೂ ವಿಧಿಸಿದ್ದರಿಂದ ಕೊಯಮತ್ತೂರಿನ ಸಂಪತ್ ಎಂಬ ಕೈಗಾರಿಕೋದ್ಯಮಿ ತನ್ನ ಕುಟುಂಬವನ್ನು ಕೊರೊನಾ ಸೋಂಕಿನಿಂದ ದೂರವಿರಿಸಲು ಕೊಯಮತ್ತೂರಿನ ಅಲುಂಡೂರಿನಲ್ಲಿರುವ ತಮ್ಮ ತೋಟದ ಮನೆಗೆ ಸ್ಥಳಾಂತರಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರೂ ಮನೆಯಿಂದ ಹೊರ ಹೋಗಬಾರದು ಮತ್ತು ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಘೋಷಿಸಿವೆ. ಹಾಗಾಗಿ ಸಂಪತ್ ಅವರು ಕುಟುಂಬದೊಂದಿಗೆ ಟಾರ್ಪಾಲಿನ್ ಬಳಸಿ ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಅವಶ್ಯಕ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಜಮೀನಿಗೆ ತೆರಳಿದ್ದರು. ಅಲ್ಲದೇ ತಮ್ಮ ಎಲ್ಲ ಕಾರ್ಮಿಕರನ್ನು ರಜೆ ಮೇಲೆ ಕಳುಹಿಸಿದ್ದು, ಈಗ ತೋಟ ನಿರ್ವಹಣೆಯನ್ನೂ ಅವರೇ ನೋಡಿ ಕೊಳ್ಳುತ್ತಿದ್ದಾರೆ.
ಹೊಸ ಪರಿಸರದಲ್ಲಿ ತಾಜಾತನವನ್ನು ಅನುಭವಿಸುತ್ತಿರುವ ಸಂಪತ್, ಈ ಸ್ಥಳವು ನಗರ ಪ್ರದೇಶಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನಾವು ಮಾರ್ಚ್ 23 ರಿಂದ ಇಲ್ಲಿ ವಾಸಿಸುತ್ತಿದ್ದೇವೆ. ಎಲ್ಲಾ ಕಾರ್ಮಿಕರನ್ನು ರಜೆ ಮೇಲೆ ಕಳುಹಿಸಿದ್ದು, ತೋಟಗಾರಿಕೆ ಕೆಲಸವನ್ನು ನಾವೇ ಮಾಡುತ್ತಿದ್ದೇವೆ. ಪ್ರಸ್ತುತ ನಾವು ಸೆಲ್ ಫೋನ್ಗಳನ್ನು ಅತ್ಯಂತ ಅಗತ್ಯವಾದ ಕೆಲಸಗಳಿಗೆ ಮಾತ್ರ ಬಳಸುತ್ತಿದ್ದೇವೆ ಎಂದು ಖುಷಿ ಹಂಚಿಕೊಂಡಿದ್ದಾರೆ.