ಹೈದರಾಬಾದ್(ತೆಲಂಗಾಣ): ಕೊರೊನಾ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಮಂಡಳಿಯು ತಿರುಮಲ ಶ್ರೀವಾರಿ ಅರ್ಜಿತ ಸೇವೆಯನ್ನು ಮೇ 31ರವರೆಗೆ ರದ್ದುಗೊಳಿಸಿದೆ.
ಲಾಕ್ಡೌನ್ ಹಿನ್ನೆಲೆ ಮೇ 3ರವರೆಗೆ ಸ್ವಾಮಿಯ ದರ್ಶನವನ್ನುರದ್ದುಗೊಳಿಸಲಾಗಿದೆ. ಜೊತೆಗೆ ಆನ್‌ಲೈನ್ ಬುಕಿಂಗ್ ಮೂಲಕ 300 ರೂಪಾಯಿಯ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳು, ಅರ್ಜಿತ ಸೇವಾ ಟಿಕೆಟ್‌ಗಳು ಮತ್ತು ವಸತಿ ಸೌಲಭ್ಯದ ಹಣವನ್ನು ಮರುಪಾವತಿ ಮಾಡುವ ಆಯ್ಕೆಯನ್ನು ದೇವಳ ನೀಡಿದೆ.
ಈ ನಿಟ್ಟಿನಲ್ಲಿ ಟಿಟಿಡಿ ಈಗ ಭಕ್ತರಿಗೆ ತಮ್ಮ ಟಿಕೆಟ್‌ಗಳ ವಿವರಗಳನ್ನು, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ಗಳನ್ನು ಗೊತ್ತುಪಡಿಸಿರುವ ಇ-ಮೇಲ್-ವಿಳಾಸ helpdesk@tirumala.org ಗೆ ಕಳಿಸುವಂತೆ ತಿಳಿಸಿದೆ. ಆನಂತರ ಮಂಡಳಿಯು ವಿವರಗಳನ್ನು ಪರಿಶೀಲಿಸಿ ನಂತರ ರದ್ದತಿ ಮೊತ್ತವನ್ನು ಆಯಾ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಟಿಟಿಡಿ ಹೇಳಿಕೊಂಡಿದೆ.