ಕಾನ್ಪುರ(ಉತ್ತರ ಪ್ರದೇಶ): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕಾನ್ಪುರದ ವಿಶೇಷ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲು ಅಲ್ಲಿನ ಬಿಜೆಪಿ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಫೆ.24 ರಂದು ಅಹಮದಾಬಾದ್ನ ಮೊಟೆರಾ ಕ್ರೀಡಾಂಗಣದಲ್ಲಿ ಟ್ರಂಪ್ ಭಾಷಣ ಮಾಡಲಿದ್ದು, ಅಂದು ಕಾನ್ಪುರ ಬಿಜೆಪಿ ಕಾರ್ಯಕರ್ತರು ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಕಾನ್ಪುರದ ರೈಲ್ ಬಜಾರ್ನ ಶಾಂತಿ ಸ್ವೀಟ್ ಹೌಸ್ಗೆ ಬಿಜೆಪಿ ಕಾರ್ಯಕರ್ತರು ಸಿಹಿತಿಂಡಿಗಾಗಿ ಆರ್ಡರ್ ನೀಡಿದ್ದು, ಅಂಗಡಿ ಮಾಲೀಕ ಅಜಯ್ ಗುಪ್ತಾ (ರಾಜು) ಇದು ಹೆಮ್ಮೆಯ ವಿಷಯವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಹಿತಿಂಡಿಗಳ ಅಂಗಡಿ ಮಾಲೀಕ ಅಜಯ್ ಗುಪ್ತಾ, ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲು ಬಿಜೆಪಿ ಕಾರ್ಯಕರ್ತರಿಂದ ಆರ್ಡರ್ ಪಡೆದಿದ್ದೇವೆ. ಹಾಗಾಗಿ ನಾವೀಗ ಕಾನ್ಪುರದ ವಿಶೇಷ ಸಿಹಿತಿಂಡಿಗಳನ್ನು ತಯಾರಿಸುತ್ತಿದ್ದು, ಇದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು, ಇನ್ನೂ ''ನಮಸ್ತೆ ಟ್ರಂಪ್'' ಎಂಬ ಘೋಷಣೆಯನ್ನು ಸಿಹಿತಿಂಡಿಗಳ ಬಾಕ್ಸ್ ಮೇಲೆ ಹಾಕಲಾಗಿದೆಯೆಂದು ತಿಳಿಸಿದರು.
ಸ್ಥಳೀಯ ಬಿಜೆಪಿ ಕಾರ್ಯಕರ್ತ '' ನಾನು ಮೊಟೆರಾ ಕ್ರೀಡಾಂಗಣಕ್ಕೆ ಹೋಗಿ ಡೊನಾಲ್ಡ್ ಟ್ರಂಪ್ಗೆ ಕಾನ್ಪುರದ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲು ಪ್ರಯತ್ನಿಸುತ್ತೇನೆ ಎಂದು'' ತಿಳಿಸಿದರು.