ETV Bharat / bharat

ಕೊರೋನಾ ವೈರಸ್ ವಿರುದ್ಧ ಹೋರಾಡಲು ಮಸೂದೆಗೆ ಸಹಿ ಹಾಕಲಿರುವ ಟ್ರಂಪ್ - ವಾಷಿಂಗ್ಟನ್

ಕೊರೊನಾ ವೈರಸ್ ಹರಡುವಿಕೆ ನಿಭಾಯಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 8.3 ಬಿಲಿಯನ್ ಮೌಲ್ಯದ ಮಸೂದೆಗೆ ಸಹಿ ಹಾಕುವ ನಿರೀಕ್ಷೆಯಿದೆ.

trump
trump
author img

By

Published : Mar 6, 2020, 2:29 PM IST

ವಾಷಿಂಗ್ಟನ್: ಕೊರೊನಾ ವೈರಸ್ ಹರಡುವಿಕೆ ನಿಭಾಯಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 8.3 ಬಿಲಿಯನ್ ಮೌಲ್ಯದ ಮಸೂದೆಗೆ ಸಹಿ ಹಾಕುವ ನಿರೀಕ್ಷೆಯಿದೆ.

ಈ ಮಸೂದೆಯಿಂದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಲಸಿಕೆಗಳು, ತಪಾಸಣೆಗೆ ಅಗತ್ಯವಿರುವ ವಸ್ತುಗಳು ಹಾಗೂ ಚಿಕಿತ್ಸೆಯ ಹಣವನ್ನು ಸರ್ಕಾರ ಒದಗಿಸಲಿದೆ.

ಕೊರೊನಾ ವೈರಸ್ ಹರಡುವ ಭೀತಿಯಲ್ಲಿರುವ ಸಾರ್ವಜನಿಕರಿಗೆ ಧೈರ್ಯ ತುಂಬುವ ನಿಟ್ಟಿನಿಂದ ಸೆನೆಟ್​ನಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗಾಗಿ ಮಸೂದೆಯನ್ನು ಶ್ವೇತಭವನಕ್ಕೆ ಕಳುಹಿಸಲಾಗದೆ.

ಸಾರ್ವತ್ರಿಕ ಬೆಂಬಲ ಹೊಂದಿರುವ ಈ ಕ್ರಮಕ್ಕೆ ಟ್ರಂಪ್ ಸಹಿ ಹಾಕುವುದು ಖಚಿತವಾಗಿದೆ. ಅಮೆರಿಕದಲ್ಲಿ 12 ಜೀವಗಳನ್ನು ಬಲಿ ಪಡೆದ ಈ ವೈರಸ್​ನ ಕುರಿತು ಜನರ ಭಯವನ್ನು ಹೋಗಲಾಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.