ETV Bharat / bharat

ವಿಶೇಷ ಲೇಖನ: 2ನೇ ಅವಧಿಗೆ ಟ್ರಂಪ್ ಸ್ಪರ್ಧೆ:  ಅವರ ಪ್ರಣಾಳಿಕೆಯಲ್ಲಿ ಏನೇನೆಲ್ಲಾ ಇದೆ ಗೊತ್ತೆ ? - ಅಮೆರಿಕ ಅಧ್ಯಕ್ಷೀಯ ಚುನಾವಣೆ

ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಟ್ರಂಪ್ ಅವರು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಆದ್ಯತೆಗಳನ್ನು ಅವರ ಚುನಾವಣಾ ಪ್ರಚಾರಾಂದೋಲನ ಕಚೇರಿ ಎಂಟು ವಿಶಾಲ ವಿಭಾಗಗಳ ಅಡಿ ಪಟ್ಟಿ ಮಾಡಿದೆ.

ffd
ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಟ್ರಂಪ್ ಪ್ರನಾಳಿಕೆಯಲ್ಲಿ ಏನೇನೆಲ್ಲಾ ಇದೆ ಗೊತ್ತೆ ?
author img

By

Published : Aug 26, 2020, 11:42 AM IST

ನವದೆಹಲಿ: ರಿಪಬ್ಲಿಕನ್ ಪಕ್ಷದಿಂದ ಎರಡನೇ ಅವಧಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶದ ಜನರನ್ನು ಅಕ್ಷರಶಃ ಚಂದ್ರನಲ್ಲಿಗೇ ಕೊಂಡೊಯ್ಯುವಂತಹ ಭರವಸೆಗಳನ್ನು ಬಿತ್ತಿದ್ದಾರೆ, ‘ನಿಮಗಾಗಿ ನಡೆಸುತ್ತಿರುವ ಹೋರಾಟ’ ಎಂಬುದು ಶ್ವೇತಭವನಕ್ಕೆ ಮರು ಆಯ್ಕೆ ಬಯಸುತ್ತಿರುವ ಅವರ ಈ ಬಾರಿಯ ಘೋಷವಾಕ್ಯ. 10 ತಿಂಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ ಮತ್ತು ಈ ವರ್ಷದೊಳಗೆ ಕೋವಿಡ್ - 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬಲ್ಲ ಲಸಿಕೆ ಬಿಡುಗಡೆ ಮಾಡುವುದು ಅವರು ನೀಡಿರುವ ಭರವಸೆಗಳಲ್ಲಿ ಮುಖ್ಯವಾದವುಗಳಾಗಿವೆ.

ಮಂಗಳವಾರ ನೀಡಿದ ಹೇಳಿಕೆಯಲ್ಲಿ, ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ( ಆರ್‌ ಎನ್‌ ಸಿ ) ಏಷ್ಯಾ ಪೆಸಿಫಿಕ್ ಮಾಧ್ಯಮ ವಿಭಾಗದ ನಿರ್ದೇಶಕಿ ಮರೀನಾ ತ್ಸೆ, ಅವರು, ಬಹುದೊಡ್ಡ ಪರಂಪರೆ ಇರುವ ಪಕ್ಷವು “ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮೃದ್ಧಿ, ಶಾಂತಿ, ನ್ಯಾಯ, ಸದೃಢ ರಾಷ್ಟ್ರ ಮತ್ತು ಸಮುದಾಯ ಸುರಕ್ಷತೆಯ ಮೌಲ್ಯಗಳ ಪರವಾಗಿ ನಿಂತಿದೆ ” ಎಂದು ಹೇಳಿದ್ದಾರೆ. .

" ನಮ್ಮ ಉದಾತ್ತ ಅಮೆರಿಕದ ಪ್ರಯೋಗಗಳಿಗೆ ಕೊಡುಗೆ ನೀಡಲು ಮತ್ತು ಉತ್ತಮ, ಸುಂದರ ಜೀವನ ರೂಪಿಸಿಕೊಳ್ಳಲು ಬಯಸುವ ಅಮೆರಿಕನ್ನರಿಗೆ ಮತ್ತು ಕಾನೂನು ಮಾರ್ಗಗಳ ಮೂಲಕ ಅಮೆರಿಕಕ್ಕೆ ಬರುವ ಎಲ್ಲರಿಗೆ ಅಧ್ಯಕ್ಷ ಟ್ರಂಪ್ ಅವರ ನೀತಿಗಳು ಅವಕಾಶ ಮಾಡಿಕೊಡುತ್ತವೆ " ಎಂದು ತ್ಸೆ ತಿಳಿಸಿದ್ದಾರೆ.

ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಟ್ರಂಪ್ ಅವರು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಆದ್ಯತೆಗಳನ್ನು ಅವರ ಚುನಾವಣಾ ಪ್ರಚಾರಾಂದೋಲನ ಕಚೇರಿ ಎಂಟು ವಿಶಾಲ ವಿಭಾಗಗಳ ಅಡಿ ಪಟ್ಟಿ ಮಾಡಿದೆ. ಅದನ್ನು ತ್ಸೆ ಹೀಗೆ ವಿವರಿಸಿದ್ದಾರೆ: ಉದ್ಯೋಗ, ಕೋವಿಡ್ - 19 ನಿರ್ಮೂಲನೆ, ಶಿಕ್ಷಣ, ಕೆಡುಕಿನ ಮೂಲೋತ್ಪಾಟನೆ, ನಮ್ಮ ಪೊಲೀಸರಿಗೆ ಭದ್ರತೆ, ಅಕ್ರಮ ವಲಸೆಗೆ ಅಂತ್ಯ ಮತ್ತು ಅಮೆರಿಕದ ಕಾರ್ಮಿಕರ ರಕ್ಷಣೆ, ಭವಿಷ್ಯಕ್ಕಾಗಿ ಹೊಸತನದ ಹುಡುಕಾಟ ಹಾಗೂ ಅಮೆರಿಕ ಮೊದಲು ಎಂಬ ಮೊದಲ ವಿದೇಶಾಂಗ ನೀತಿ.

ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ, ಅಕ್ರಮ ವಲಸೆ ತಡೆ ಮತ್ತು ಚೀನಾದಲ್ಲಿ ತಯಾರಿಸಿದ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಹೇರುವುದು ಎಂಬ ಪ್ರಸ್ತುತ ಭರವಸೆಗಳು ಟ್ರಂಪ್‌ ಅವರು 2016 ರ ಚುನಾವಣಾ ಪ್ರಣಾಳಿಕೆಗಳ ಪ್ರಧಾನ ಅಂಶಗಳನ್ನೇ ನೆನಪಿಸುತ್ತಿವೆ. ಕೋವಿಡ್ -19 ವೈರಸ್ ವಿರುದ್ಧ ಲಸಿಕೆ ಕಂಡು ಹಿಡಿಯುವುದು ಮತ್ತು ಚಂದ್ರನ ಮೇಲೆ ಶಾಶ್ವತ ಮಾನವ ಸಹಿತ ಉಪಸ್ಥಿತಿ ಮತ್ತು ಬಾಹ್ಯಾಕಾಶ ಪಡೆ ರಚಿಸುವುದು ಈ ಬಾರಿಯ ಪ್ರಣಾಳಿಕೆಯಲ್ಲಿರುವ ಹೊಸ ಆದ್ಯತೆಗಳು ಎನಿಸಿಕೊಂಡಿವೆ

ಉದ್ಯೋಗ ವಿಭಾಗದ ಅಡಿ, 10 ತಿಂಗಳಲ್ಲಿ 1 ಕೋಟಿ ಹೊಸ ಉದ್ಯೋಗ ಸೃಷ್ಟಿಸುವುದಾಗಿ ಮತ್ತು ಹತ್ತು ಲಕ್ಷದಷ್ಟು ಹೊಸ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಬಳದ ನಿವ್ವಳ ಪ್ರಮಾಣ ಏರಿಸುವ ಮತ್ತು ಅಮೆರಿಕದಲ್ಲಿ ಉದ್ಯೋಗ ಉಳಿಸಿಕೊಳ್ಳುವುದಕ್ಕಾಗಿ ತೆರಿಗೆ ಕಡಿತಗೊಳಿಸುವ ಪ್ರಸ್ತಾಪ ಕೂಡ ಇದರಲ್ಲಿ ಇದೆ. ಅಮೆರಿಕದ ಉದ್ಯೋಗಗಳನ್ನು ರಕ್ಷಿಸುವ ನ್ಯಾಯಸಮ್ಮತ - ವ್ಯಾಪಾರ ಒಪ್ಪಂದಗಳು, " ಮೇಡ್ ಇನ್ ಅಮೆರಿಕ " ತೆರಿಗೆ ಸೌಲಭ್ಯಗಳು, ಅವಕಾಶ ವಲಯಗಳ ವಿಸ್ತರಣೆ ಹಾಗೂ ಇಂಧನ ಸ್ವಾತಂತ್ರ್ಯಕ್ಕಾಗಿ ನಿಯಂತ್ರಣ ರಹಿತ ನೀತಿಯ ಮುಂದುವರಿಕೆ ಸಹ ಉದ್ಯೋಗ ಪ್ರಣಾಳಿಕೆಯಲ್ಲಿ ಬಿಂಬಿತವಾಗಿದೆ.

ಅಮೆರಿಕದಲ್ಲಿ ಕೋವಿಡ್ - 19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿ ಕುರಿತು ನಿರಂತರ ಟೀಕೆಗಳನ್ನು ಎದುರಿಸುತ್ತಿರುವ ಟ್ರಂಪ್, ಈ ವರ್ಷದ ಅಂತ್ಯದ ವೇಳೆಗೆ ವೈರಸ್ ವಿರುದ್ಧ ಹೋರಾಡಲು ಲಸಿಕೆ ಅಭಿವೃದ್ಧಿಪಡಿಸುವುದಾಗಿ ಮತ್ತು ಅಮೆರಿಕವನ್ನು 2021 ರ ವೇಳೆಗೆ ಸಾಮಾನ್ಯ ಸ್ಥಿತಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಅಮೆರಿಕದಲ್ಲಿನ ಆರೋಗ್ಯ ಕಾರ್ಯಕರ್ತರಿಗಾಗಿ ಎಲ್ಲ ಬಗೆಯ ನಿರ್ಣಾಯಕ ಔಷಧ ಮತ್ತು ಪೂರಕ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಸರಬರಾಜು ದಾಸ್ತಾನುಗಳನ್ನು ಭರ್ತಿಯಾಗಿರುವಂತೆ ನೋಡಿಕೊಳ್ಳುವುದು ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಸಿದ್ಧತೆ ನಡೆಸುವುದು ಕೂಡ ಪ್ರಣಾಳಿಕೆಯಲ್ಲಿ ಕಂಡು ಬಂದಿರುವ ಪ್ರಮುಖ ಸಂಗತಿಗಳು.

ಟ್ರಂಪ್ ಆಡಳಿತ ತನ್ನ ಮೊದಲ ಆಡಳಿತಾವಧಿಯುದ್ದಕ್ಕೂ ‘ ಒಬಾಮಾ ಕೇರ್ ‘ ಎಂದು ಜನಪ್ರಿಯವಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಕೈಗೆಟುಕುವ ವೈದ್ಯಕೀಯ ಸೌಲಭ್ಯ ಕಾಯ್ದೆಯನ್ನು ರದ್ದುಗೊಳಿಸಲು ಪ್ರಯತ್ನಿಸಿತ್ತು. ಆದರೆ, ಈ ಬಾರಿಯ ಆರೋಗ್ಯ ಸಂರಕ್ಷಣೆ ಪ್ರಣಾಳಿಕೆಯಲ್ಲಿ ವೈದ್ಯರು ಸೂಚಿಸುವ ಔಷಧಗಳ ಬೆಲೆ ಕಡಿತಗೊಳಿಸುವುದು, ರೋಗಿಗಳು ಮತ್ತು ವೈದ್ಯರಿಗೆ ದೇಶದ ಆರೋಗ್ಯ ವ್ಯವಸ್ಥೆಯ ಉಸ್ತುವಾರಿ ವಹಿಸುವುದು , ಆರೋಗ್ಯ ವಿಮಾ ಕಂತುಗಳನ್ನು ಕಡಿಮೆ ಮಾಡುವುದು, ಆಸ್ಪತ್ರೆಗಳು ನೀಡುವ ಆಘಾತಕಾರಿ ಬಿಲ್ಲುಗಳಿಗೆ ಇತಿಶ್ರೀ ಹಾಡುವುದು, ಮೊದಲೇ ರೂಪಿಸಲಾದ ಎಲ್ಲ ಷರತ್ತುಗಳಿಗೆ ಬದ್ಧವಾಗಿರುವಂತೆ ನೋಡಿಕೊಳ್ಳುವುದು, ಸಾಮಾಜಿಕ ಭದ್ರತೆ, ಮೆಡಿಕೇರ್ ಹಾಗೂ ಆರೋಗ್ಯ ಯೋಧರ ರಕ್ಷಣೆ ಮಾಡುವುದು ಮತ್ತು ವಿಶ್ವ ದರ್ಜೆಯ ಆರೋಗ್ಯ ರಕ್ಷಣೆ ಮತ್ತು ಸೇವೆಗಳನ್ನು ಒದಗಿಸುವುದು ಪ್ರಣಾಳಿಕೆಯಲ್ಲಿ ಸೇರಿವೆ.

ಅಮೆರಿಕದಲ್ಲಿರುವ ಪ್ರತಿ ಮಗು ಶಾಲೆಗೆ ತೆರಳಬೇಕೆನ್ನುವ ಸಂಕಲ್ಪ ಶಿಕ್ಷಣ ಪ್ರನಾಳಿಕೆಯಲ್ಲಿ ಇದ್ದು ಅಮೆರಿಕನ್ನರಿಗೆ ಅಸಾಧಾರಣವಾದವನ್ನು ಕಲಿಸುತ್ತದೆ" ಎಂಬ ಭರವಸೆಯನ್ನು ಅದು ನೀಡುತ್ತದೆ.

" ಕೆಡುಕಿನ ಮೂಲೋತ್ಪಾಟನೆ " ಎಂಬ ವಿಭಾಗದಡಿ ಟ್ರಂಪ್ ಪ್ರಚಾರ ಕಚೇರಿ "ಅಮೆರಿಕದ ನಾಗರಿಕರು ಮತ್ತು ಸಣ್ಣ ಉದ್ಯಮಗಳಿಗೆ ಬೆದರಿಕೆ ಒಡ್ಡುವ ಅಧಿಕಾರಶಾಹಿ ಮಟ್ಟ ಹಾಕಲು. ಆಡಳಿತ ಗಳಿಸುವ ಹಣದ ಮಾರ್ಗಗಳನ್ನು ಬಹಿರಂಗಪಡಿಸಲು ಹಾಗೂ ಜನರಿಗೆ ಮತ್ತು ರಾಜ್ಯಗಳಿಗೆ ಅಧಿಕಾರ ಮರಳಿಸಲು ಬದ್ಧವಾಗಿರುವುದಾಗಿ ತಿಳಿಸುತ್ತದೆ.

ಬಹುರಾಷ್ಟ್ರೀಯ ನೆಲೆಯಲ್ಲಿ ಜಗತ್ತು ಬೆಳೆಯುತ್ತಿರುವಾಗ ಏಕರಾಷ್ಟೀಯತೆಗೆ ಮಹತ್ವ ನೀಡಿದ ಟ್ರಂಪ್ ಅವರ ಪ್ರಯತ್ನದ ಧ್ಯೋತಕವಾಗಿ “ ಅಮೆರಿಕನ್ ನಾಗರಿಕರನ್ನು ನೋಯಿಸುವ ಅಂತಾರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಹೋರಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕೂಡ ಕೆಡುಕಿನ ನಿರ್ಮೂಲನೆ ಮಾಡಲಾಗುವುದು ” ಎಂಬ ಆಶಯವನ್ನು ಅಡಕಗೊಳಿಸಲಾಗಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಗಮನಾರ್ಹ ರೀತಿಯ ವಿದೇಶಾಂಗ ನೀತಿಗಳನ್ನು ಅನುಸರಿಸಿದ್ದರು. ಅವುಗಳೆಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ದೇಶಗಳಾದ ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಬ್ರಿಟನ್ ಜೊತೆ ಇರಾನ್ ಮಾಡಿಕೊಂಡಿದ್ದ ಸಮಗ್ರ ಜಂಟಿ ಕ್ರಿಯಾಯೋಜನೆಯಿಂದ ಅಮೆರಿಕ ಹೊರಗೆ ಉಳಿದದ್ದು. ಅಲ್ಲದೇ ಇರಾನ್ ಪರಮಾಣು ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ಅದರ ಮೇಲೆ ಅಮೆರಿಕ ಮತ್ತು ಜರ್ಮನಿ ಮತ್ತೆ ನಿರ್ಬಂಧಗಳನ್ನು ಹೇರಿದ್ದು. ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸುವ ಉದ್ದೇಶ ಹೊತ್ತಿದ್ದ 2015 ರ ಪ್ಯಾರಿಸ್ ಒಪ್ಪಂದದಿಂದ ಟ್ರಂಪ್ ಅವರು ಹೊರಗುಳಿದದ್ದು ಕೂಡ ಟ್ರಂಪ್ ಅವರ ಪ್ರಮುಖ ನಿರ್ಣಯಗಳಲ್ಲಿ ಒಂದು. ಈ ಒಪ್ಪಂದ ಅಮೆರಿಕದ ಆರ್ಥಿಕತೆಯನ್ನು ಹಾಳುಮಾಡುತ್ತದೆ ಮತ್ತು ತಮ್ಮ ದೇಶವನ್ನು " ಶಾಶ್ವತವಾಗಿ ಪ್ರತಿಕೂಲ ಸ್ಥಿತಿಗೆ " ತಳುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.

ನಾಗರಿಕರ ವಿರುದ್ಧ ಪೊಲೀಸರ ಮಿತಿಮೀರಿದ ವರ್ತನೆ ಮತ್ತು ವರ್ಣಭೇದ ನೀತಿ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವಾಗ, ಟ್ರಂಪ್ ‘ ನಮ್ಮ ಪೊಲೀಸರನ್ನು ರಕ್ಷಿಸಿ ’ ಎಂಬ ಘೋಷಣೆ ಮೊಳಗಿಸಿದ್ದಾರೆ. ಅದರಂತೆ ಪೊಲೀಸ್ ಇಲಾಖೆಗೆ ಸಂಪೂರ್ಣ ಧನಸಹಾಯ ಮಾಡುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಕಾನೂನು ಜಾರಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಕಾನೂನು ಜಾರಿ ಅಧಿಕಾರಿಗಳ ಮೇಲಿನ ಹಲ್ಲೆಗಾಗಿ ಕ್ರಿಮಿನಲ್ ದಂಡದ ಪ್ರಮಾಣ ಹೆಚ್ಚಿಸುವುದಾಗಿ ತಿಳಿಸಿದ್ದಾರೆ, ಗುಂಡಿನ ದಾಳಿಯಂತಹ ಸ್ಥಳೀಯ ಭಯೋತ್ಪಾದನಾ ಕೃತ್ಯಗಳು ಮತ್ತು ಹಿಂಸಾಚಾರ ಪರವಾದ ತೀವ್ರಗಾಮಿಗಳಿರುವ ‘ ಆಂಟಿಫಾ ‘ ರೀತಿಯ ಫ್ಯಾಸಿಸ್ಟ್ ವಿರೋಧಿ ರಾಜಕೀಯ ಆಂದೋಲನವನ್ನು ಬಗ್ಗುಬಡಿಯಲು, ಹಣರಹಿತ ಜಾಮೀನು ರದ್ದುಗೊಳಸಿ ಅಪಾಯಕಾರಿ ದುಷ್ಕೃತ್ಯ ಎಸಗುವವರನ್ನು ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಮುಂದಾಗುವುದಾಗಿ ಪ್ರನಾಳಿಕೆ ತಿಳಿಸುತ್ತದೆ.

ಅಕ್ರಮ ವಲಸೆಯ ತಡೆಗಟ್ಟುವ ಸಲುವಾಗಿ 2016 ರ ಚುನಾವಣಾ ಅಭಿಯಾನದಲ್ಲಿ ಮೆಕ್ಸಿಕೊದ ಗಡಿಯಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಈಗಿನ ಅಧ್ಯಕ್ಷರು ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. “ಅಕ್ರಮ ವಲಸೆ ಕೊನೆಗೊಳಿಸಿ ಮತ್ತು ಅಮೆರಿಕದ ಕಾರ್ಮಿಕರನ್ನು ರಕ್ಷಿಸಿ” ಎಂಬ ಘೋಷಣೆಯಡಿ, ಅಕ್ರಮ ವಲಸಿಗರಿಗೆ ತೆರಿಗೆದಾರರ ಅನುದಾನಿತ ಕಲ್ಯಾಣ, ಆರೋಗ್ಯ ರಕ್ಷಣೆ ಮತ್ತು ಉಚಿತ ಕಾಲೇಜು ಬೋಧನೆ ಸೌಲಭ್ಯ ನಿರ್ಬಂಧಿಸುವುದಾಗಿ ತಿಳಿಸಿದ್ದಾರೆ. “ನಮ್ಮ ನೆರೆಹೊರೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಕುಟುಂಬ ರಕ್ಷಗೆ” ಎಂಬ ಘೋಷವಾಕ್ಯದಡಿ 2020 ರ ಪ್ರಣಾಳಿಕೆಯಲ್ಲಿ ದುಷ್ಕೃತ್ಯ ಎಸಗುವ ಗುಂಪುಗಳ ಸದಸ್ಯರ ಕಡ್ಡಾಯ ಗಡೀಪಾರು, ಮಾನವ ಕಳ್ಳಸಾಗಣೆ ಜಾಲಗಳ ನಿರ್ಮೂಲನೆ, ವಲಸೆ ಕಾನೂನನ್ನು ಜಾರಿಗೊಳಿಸುವ ಒಕ್ಕೂಟ ಸರ್ಕಾರದ ಪ್ರಯತ್ನದೊಂದಿಗೆ ಕೈ ಜೋಡಿಸಿದೆ ಅಕ್ರಮ ವಲಸಿಗರಿಗೆ ಅಭಯ ನೀಡುವ ಪಟ್ಟಣ ಆಡಳಿತಗಳಿಗೆ ಮೂಗುದಾರ ಹಾಕುವುದಾಗಿ ಹೇಳಲಾಗಿದೆ. ಅಮೆರಿಕನ್ ಕಂಪನಿಗಳು ತನ್ನ ದೇಶದ ನಾಗರಿಕರ ಬದಲಿಗೆ ಕಡಿಮೆ ವೆಚ್ಚದ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುವದಕ್ಕೆ ನಿಷೇಧ ಹೇರುವುದು ಮತ್ತು ತಮ್ಮ ಆರ್ಥಿಕ ಅನುಕೂಲಕ್ಕಾಗಿ ಹೊಸ ವಲಸಿಗರಿಗೆ ಬೆಂಬಲ ನೀಡುವುದನ್ನು ತಡೆಯುವುದಾಗಿ ಪ್ರಣಾಳಿಕೆ ಉಲ್ಲೇಖಿಸಿದೆ.

"ಭವಿಷ್ಯಕ್ಕಾಗಿ ಹೊಸತನ" ಪ್ರಣಾಳಿಕೆಯಡಿ, ರಿಪಬ್ಲಿಕನ್ ಪಕ್ಷ ಬಾಹ್ಯಾಕಾಶ ಪಡೆ ಪ್ರಾರಂಭಿಸುವುದಾಗಿ, ಚಂದ್ರನ ಮೇಲೆ ಶಾಶ್ವತ ಮಾನವ ಉಪಸ್ಥಿತಿ ಇರುವಂತೆ ನೋಡಿಕೊಳ್ಳುವುದಾಗಿ ಮತ್ತು ಮಂಗಳ ಗ್ರಹಕ್ಕೆ ಮೊದಲ ಮಾನವಸಹಿತ ನೌಕೆ ಕಳುಹಿಸುವುದಾಗಿ ಭರವಸೆ ನೀಡಿದೆ.

“ವಿಶ್ವದಲ್ಲಿಯೇ ಶ್ರೇಷ್ಠ ಮೂಲಸೌಕರ್ಯ ವ್ಯವಸ್ಥೆ ರೂಪಿಸುವ ಉದ್ದೇಶದಿಂದ, 5 ಜಿ ಪೈಪೋಟಿ ಗೆಲ್ಲಲು ಮತ್ತು ರಾಷ್ಟ್ರಮಟ್ಟದಲ್ಲಿ ಅತಿವೇಗದ ನಿಸ್ತಂತು ಅಂತರ್ಜಾಲ ನೆಟ್‌ವರ್ಕ್ ಸ್ಥಾಪಿಸಲು ಮುಂದಾಗುವುದಾಗಿ ಹಾಗೂ ಸ್ವಚ್ಛ ಕುಡಿಯುವ ನೀರು ಮತ್ತು ಸ್ವಚ್ಛ ಗಾಳಿಯ ಲಭಿಸುವ ರೀತಿಯಲ್ಲಿ ಜಗತ್ತನ್ನು ಮುನ್ನಡೆಸಲು ಮತ್ತು ಸಾಗರ ನೈರ್ಮಲ್ಯಕ್ಕಾಗಿ ಇತರ ದೇಶಗಳೊಂದಿಗೆ ಹೆಜ್ಜೆ ಇರಿಸಲು ಬದ್ಧವಾಗಿರುವುದಾಗಿ ಪಕ್ಷ ಹೇಳಿಕೊಂಡಿದೆ.

‘ ಅಮೆರಿಕದ ಮೊದಲ ವಿದೇಶಾಂಗ ನೀತಿ ‘ ಯ ಅಡಿ ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯವನ್ನು ಕರೆಸಿಕೊಳ್ಳಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಸಾಕಷ್ಟು ಶಾಂತಿ ಮಾತುಕತೆಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲಿ ಟ್ರಂಪ್​ " ಅಂತ್ಯವಿಲ್ಲದ ಯುದ್ಧಗಳಿಗೆ ಕೊನೆಹಾಡಿ ನಮ್ಮ ಸೈನಿಕರನ್ನು ಮನೆಗೆ ಕರೆತರುವ " ಭರವಸೆ ನೀಡಿದ್ದಾರೆ. ಇದಕ್ಕಾಗಿ ಮಿತ್ರರಾಷ್ಟ್ರಗಳು ತಮ್ಮ ಜವಾಬ್ದಾರಿಯನ್ನು ನ್ಯಾಯೋಚಿತವಾಗಿ ಹಂಚಿಕೊಳ್ಳಬೇಕು ಅಮೆರಿಕದ “ಅಪ್ರತಿಮ ಸೇನಾ ಶಕ್ತಿಯನ್ನು” ಕಾಪಾಡಿಕೊಳ್ಳಲು ಮತ್ತು ವಿಸ್ತರಿಸಲು ನೆರವಾಗಬೇಕು ಎಂದು ಕರೆನೀಡಿದ್ದಾರೆ. ಅಮೆರಿಕನ್ನರಿಗೆ ಹಾನಿ ಮಾಡುವ, ಬೆದರಿಕೆ ಹಾಕುವ ಜಾಗತಿಕ ಭಯೋತ್ಪಾದಕರನ್ನು ತೊಡೆದುಹಾಕುವ ಮತ್ತು ಉತ್ತಮ ಸೈಬರ್ ಸುರಕ್ಷತಾ ರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆ ನಿರ್ಮಿಸುವ ಇಂಗಿತ ಕೂಡ ಪ್ರಣಾಳಿಕೆಯಲ್ಲಿ ಇದೆ.

ವಾಷಿಂಗ್ಟನ್ ಮತ್ತು ಬೀಜಿಂಗ್ ವಾಣಿಜ್ಯ ಸಮರದಲ್ಲಿ ತೊಡಗಿದ್ದು, ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯ ಬಗ್ಗೆ ಆರೋಗ್ಯಕರವಲ್ಲದ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಚಾರಾಂದೋಲನ ಕಚೇರಿ ಪ್ರತ್ಯೇಕ ಹೇಳಿಕೆ ನೀಡಿದೆ. ಅದರಲ್ಲಿ ಟ್ರಂಪ್ ತಮ್ಮ ನಾಮಪತ್ರ ಸಲ್ಲಿಕೆ ಭಾಷಣದ ವೇಳೆ ಚೀನಾದ ಮೇಲಿನ ಅವಲಂಬನೆಯಿಂದ ಅಮೆರಿಕ ಸಂಪೂರ್ಣ ಹೊರಬರುವ ಇಂಗಿತ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಲಾಗಿದೆ.

ಚೀನಾದಿಂದ ಹತ್ತು ಲಕ್ಷ ಉತ್ಪಾದನೆ ಸಂಬಂಧಿ ಉದ್ಯೋಗಗಳನ್ನು ಮರಳಿ ತರುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಚೀನಾದಿಂದ ಉದ್ಯೋಗಗಳನ್ನು ಮರಳಿ ತರುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಲು, ಅಗತ್ಯ ಕೈಗಾರಿಕೆಗಳಿಗೆ ಶೇಕಡಾ 100 ರಷ್ಟು ವೆಚ್ಚ ಕಡಿತಗೊಳಿಸಲು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಚೀನಾಕ್ಕೆ ಹೊರಗುತ್ತಿಗೆ ನೀಡುವ ಕಂಪನಿಗಳಿಗೆ ಮತ್ತು ರಾಜ್ಯಗಳಿಗೆ ಒಕ್ಕೂಟ ಒಪ್ಪಂದಗಳ ಸೌಲಭ್ಯ ಲಭಿಸುವುದಿಲ್ಲ.

ಕೋವಿಡ್ -19 ವೈರಸ್ ಪ್ರಪಂಚದಾದ್ಯಂತ ಹರಡಲು ಇಂಬು ನೀಡಿದ್ದಕ್ಕಾಗಿ ಟ್ರಂಪ್ ಚೀನಾವನ್ನು ಸಂಪೂರ್ಣ ಹೊಣೆಗಾರನನ್ನಾಗಿ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.