ETV Bharat / bharat

ಮೋಟಾರು ವಾಹನ ಕಾಯ್ದೆಗೆ ವಿರೋಧ: ಇಂದು ರಾಷ್ಟ್ರ ರಾಜಧಾನಿ ಸ್ತಬ್ಧ!

ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್​ಪೋರ್ಟ್​ ಅಸೋಸಿಯೇಷನ್ ನೂತನ ಮೋಟಾರು ವಾಹನ ಕಾಯ್ದೆ ವಿರೋಧಿಸಿ ನವದೆಹಲಿಯಲ್ಲಿ ಬಂದ್​ಗೆ ಕರೆ ನೀಡಿದೆ.

ರಾಷ್ಟ್ರ ರಾಜಧಾನಿ ಸ್ತಬ್ಧ
author img

By

Published : Sep 19, 2019, 9:13 AM IST

ನವದೆಹಲಿ: ನೂತನ ಮೋಟಾರು ವಾಹನ ಕಾಯ್ದೆ ಜಾರಿ ವಿರೋಧಿಸಿ ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್​ಪೋರ್ಟ್​ ಅಸೋಸಿಯೇಷನ್ ಬಂದ್​ಗೆ ಕರೆ ನೀಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.

ಆಟೋ, ಬಸ್​, ಶಾಲಾ ವಾಹನ, ಟೂರಿಸ್ಟ್​ ಬಸ್​, ಓಲಾ ಊಬರ್ ಸೇರಿದಂತೆ ಎಲ್ಲಾ ವಾಹನಗಳ ಚಾಲಕರು ಮತ್ತು ಮಾಲೀಕರು ಬಂದ್​ಗೆ ಬೆಂಬಲ ಸೂಚಿಸಿದ್ದು, ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಾಹನ ಸಂಚಾರ ಇರುವುದಿಲ್ಲ. ಇನ್ನು ವಾಹನ ಸಂಚಾರ ಬಂದ್​ ಆಗಿರುವ ಕಾರಣ ಶಾಲಾ-ಕಾಲೇಜುಗಳು ಕೂಡ ಬಂದ್​ ಆಗಿವೆ. ಸರ್ಕಾರ ಯಾವುದೇ ಸಲಹೆ ಅಥವಾ ಆದೇಶ ಹೊರಡಿಸಿಲ್ಲವಾದರೂ ಬಸ್‌ಗಳು ಲಭ್ಯವಿಲ್ಲದ ಕಾರಣ ಕೆಲ ಶಾಲೆಗಳು ರಜೆ ಘೋಷಣೆ ಮಾಡಿವೆ.

ಕಳೆದ 15 ದಿನಗಳಿಂದ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಹೊಸ ಮೋಟಾರು​ ವಾಹನ ಕಾಯ್ದೆಗೆ ಸಂಬಂಧಿಸಿದಂತೆ ನಮ್ಮ ಕುಂದುಕೊರತೆಗಳನ್ನು ಪರಿಹರಿಸುವಂತೆ ಕೇಳಿಕೊಂಡಿದ್ದೇವೆ. ಆದರೆ ಯಾವುದೇ ಪರಿಹಾರ ಸಿಗದ ಕಾರಣ ಒಂದು ದಿನದ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್​ಪೋರ್ಟ್​ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ಯಾಮ್​ಲಾಲ್ ಗೋಲಾ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.