ಮುಂಬೈ: ರೈಲು ಸಾಗುತ್ತಿದ್ದ ವೇಳೆ ಹಳಿ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದ್ದು, ಸಿಸಿಟಿವಿ ನಿರ್ವಹಣಾ ಸಿಬ್ಬಂದಿ ಸಕಾಲದಲ್ಲಿ ಎಚ್ಚರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.
ಮುಂಬೈ-ಪುಣೆ ಮಾರ್ಗದ ಘಾಟ್ ಸೆಕ್ಷನ್ನ ಲೊನವಲ ಎಂಬಲ್ಲಿ ಹಳಿ ಮೇಲೆ ನಿನ್ನೆ ರಾತ್ರಿ 8:15 ರ ಸುಮಾರಿಗೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದೆ. ಇದೇ ಸಮಯಕ್ಕೆ ಆ ಮಾರ್ಗದಲ್ಲಿ ಮುಂಬೈ-ಕೊಲ್ಲಾಪುರ ಸಹ್ಯಾದ್ರಿ ಎಕ್ಸ್ಪ್ರೆಸ್ ರೈಲು ಸಾಗುತ್ತಿತ್ತು. ಸಿಸಿಟಿವಿ ಸಿಬ್ಬಂದಿ ಎಚ್ಚರಿಸದೇ ಇದ್ದರೆ ರೈಲು ಬಂಡೆಗೆ ಗುದ್ದಿ ದೊಡ್ಡ ಅನಾಹುತವೇ ಸಂಭವಿಸುತಿತ್ತು.
-
#WATCH Maharashtra: A boulder fell on the railway tracks near Lonavala, around 8 pm on 13 June. Mumbai-Kolhapur 11023 Sahyadri Express was delayed for around 2 hours due to the boulder. All lines were made operational by 11 pm. (Video source: Central Railway CPRO) pic.twitter.com/Jbq3iOSyRe
— ANI (@ANI) June 13, 2019 " class="align-text-top noRightClick twitterSection" data="
">#WATCH Maharashtra: A boulder fell on the railway tracks near Lonavala, around 8 pm on 13 June. Mumbai-Kolhapur 11023 Sahyadri Express was delayed for around 2 hours due to the boulder. All lines were made operational by 11 pm. (Video source: Central Railway CPRO) pic.twitter.com/Jbq3iOSyRe
— ANI (@ANI) June 13, 2019#WATCH Maharashtra: A boulder fell on the railway tracks near Lonavala, around 8 pm on 13 June. Mumbai-Kolhapur 11023 Sahyadri Express was delayed for around 2 hours due to the boulder. All lines were made operational by 11 pm. (Video source: Central Railway CPRO) pic.twitter.com/Jbq3iOSyRe
— ANI (@ANI) June 13, 2019
ಆದರೆ ಅದೇ ಸ್ಥಳದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬಂಡೆ ಉರುಳಿದ ದೃಶ್ಯವನ್ನು ನಿರ್ವಹಣಾ ಸಿಬ್ಬಂದಿ ಗಮನಿಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ವಿಚ್ ಆಫ್ ಆಗಿದ್ದ ಓವರ್ಹೆಡ್ ಸಾಧನಕ್ಕೆ ತಕ್ಷಣ ವಿದ್ಯುತ್ ಪೂರೈಸಿ, ಈ ಮಾರ್ಗವಾಗಿ ಬರುತ್ತಿದ್ದ ಇತರೆ ರೈಲುಗಳಿಗೂ ಅಪಾಯದ ಮುನ್ಸೂಚನೆ ನೀಡಿದ್ದಾರೆ ಎಂದು ಕೇಂದ್ರೀಯ ರೈಲ್ವೆ ಮುಖ್ಯ ವಕ್ತಾರ ಸುನಿಲ್ ಉದಾಸಿ ಹೇಳಿದರು.
ಬಂಡೆ ಉರುಳಿದ ಸ್ಥಳದಿಂದ ದೂರದಲ್ಲಿ ನಿಂತಿದ್ದ ರೈಲು ಎರಡು ಗಂಟೆಗಳ ತರುವಾಯ ಅಲ್ಲಿಂದ ತಕುರ್ವಾಡಿಗೆ ತೆರಳಿತು. ರಾತ್ರಿ 10:30ಕ್ಕೆ ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿತು. ಪ್ರಯಾಣಿಕರಿಗೆ ತೊಂದರೆಯಾಗದಂತೆ, ನೀರು, ತಿಂಡಿ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಬೃಹತ್ ಬಂಡೆಯು 2.3 ಮೀಟರ್ ಉದ್ದ, 1.6 ಮೀಟರ್ ಎತ್ತರ ಹಾಗೂ 2.2 ವಿಸ್ತೀರ್ಣವಿತ್ತು ಎಂದೂ ತಿಳಿಸಿದರು.