ನಿಜಾಮಾಬಾದ್: ಆ ಮಂಟಪದಲ್ಲಿ ಮದುವೆ ಸಮಾರಂಭ ಜೋರಾಗಿತ್ತು. ಸಂಬಂಧಿಗಳೆಲ್ಲರೂ ಸಂತೋಷದಿಂದಲೇ ಮದುವೆ ಕಾರ್ಯ ಕೈಗೊಂಡಿದ್ದರು. ಆ ಜೋಡಿ ಹಕ್ಕಿ ಆಗತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟತ್ತು. ಆದ್ರೆ ವಿಧಿ ಅವರಿಬ್ಬರನ್ನು ಒಂದು ಮಾಡಲು ಬೀಡಲೇ ಇಲ್ಲ.
ಅದ್ದೂರಿಯಾಗಿಯೇ ಮದುವೆ ಸಮಾರಂಭ ಮುಗಿದಿತ್ತು. ವಧು - ವರರಿಬ್ಬರೂ ನೂರು ಕಾಲ ಚೆನ್ನಾಗಿರುವಂತೆ ಗುರು-ಹಿರಿಯರು ಆಶೀರ್ವದಿಸಿದ್ದರು. ಆದ್ರೆ ವಿಧಿ ಅವರ ಬಾಳಲ್ಲಿ ಆಟವಾಡಿತು. ತಾಳಿ ಕಟ್ಟಿ ಕೆಲವೇ ಕ್ಷಣಗಳಲ್ಲಿ ವರನಿಗೆ ಹೃದಾಯಾಘತವಾಗಿ ಸಾವನ್ನಪ್ಪಿರುವ ಘಟನೆ ನಿಜಾಮಾಬಾದ್ ಜಿಲ್ಲೆಯ ಬೋಧನ್ನಲ್ಲಿ ನಡೆದಿದೆ.
ಮದುವೆ ದಿನದ ರಾತ್ರಿ ಬರಾತ್ (ಮದುವೆ ಮೆರವಣಿಗೆ) ನಡೆದಿತ್ತು. ನವ ದಂಪತಿಯಿಬ್ಬರು ಹಾಡೊಂದಕ್ಕೆ ಸಖತ್ ಡ್ಯಾನ್ಸ್ ಕೂಡಾ ಮಾಡಿದ್ದರು. ಕೆಲಹೊತ್ತಿನ ಬಳಿಕ ವರ ಗಣೇಶ್ಗೆ (25) ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವೈದ್ಯರು ಆತ ಬೆಳಗ್ಗೆ ಮುಂಜಾನೇ 2 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮಗನನ್ನ ಕಳೆದುಕೊಂಡ ಕುಟುಂಬ ಮತ್ತು ಗಂಡನೊಂದಿಗೆ ಬಾಳಲು ಆಗದ ವಧುವಿನ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು.