ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 44,489 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 524 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 92,66,706 ಹಾಗೂ ಮೃತರ ಸಂಖ್ಯೆ 1,35,223ಕ್ಕೆ ಏರಿಕೆಯಾಗಿದೆ.
-
#IndiaFightsCorona#Unite2FightCorona
— Ministry of Health (@MoHFW_INDIA) November 22, 2020 " class="align-text-top noRightClick twitterSection" data="
बाहर जा रहे हैं? ध्यान रखें, आपकी लापरवाही के कारण आपका परिवार कोरोना का शिकार न बने।
सिर्फ ज़रूरी कामो के लिए ही बाहर जाएं। @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/ZMqyjFCWM4
">#IndiaFightsCorona#Unite2FightCorona
— Ministry of Health (@MoHFW_INDIA) November 22, 2020
बाहर जा रहे हैं? ध्यान रखें, आपकी लापरवाही के कारण आपका परिवार कोरोना का शिकार न बने।
सिर्फ ज़रूरी कामो के लिए ही बाहर जाएं। @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/ZMqyjFCWM4#IndiaFightsCorona#Unite2FightCorona
— Ministry of Health (@MoHFW_INDIA) November 22, 2020
बाहर जा रहे हैं? ध्यान रखें, आपकी लापरवाही के कारण आपका परिवार कोरोना का शिकार न बने।
सिर्फ ज़रूरी कामो के लिए ही बाहर जाएं। @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/ZMqyjFCWM4
ಅವಶ್ಯಕ ಕೆಲಸಗಳಿಗಾಗಿ ಮಾತ್ರ ಮನೆಯಿಂದ ಹೊರಗೆ ಹೋಗಿ. ನಿಮ್ಮ ನಿರ್ಲಕ್ಷ್ಯದಿಂದಾಗಿ ನಿಮ್ಮ ಕುಟುಂಬವು ಕೊರೊನಾಗೆ ತುತ್ತಾಗಬಾರದು ಎಂಬುದನ್ನು ನೆನಪಿನಲ್ಲಿಡಿ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿ ವಿಡಿಯೋವೊಂದನ್ನು ಶೇರ್ ಮಾಡಿದೆ.
ಒಟ್ಟು ಸೋಂಕಿತರ ಪೈಕಿ ಶೇ.93ಕ್ಕೂ ಹೆಚ್ಚು ಅಂದರೆ 86,79,138 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 4,52,344 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನವೆಂಬರ್ 25ರ ವರೆಗೆ 13 ಕೋಟಿಗೂ ಹೆಚ್ಚು (13,59,31,545) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,90,238 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.