ನವದೆಹಲಿ: "ಭಾರತ ಕೋವಿಡ್-19 ವಿರುದ್ಧ ಹೋರಾಡುತ್ತಿದೆ. ಬನ್ನಿ ಎಲ್ಲರೂ ಒಗ್ಗೂಡಿ ಈ ಹೋರಾಟ ಎದುರಿಸೋಣ. ಕೊರೊನಾಗೆ ಔಷಧಿ ಅಥವಾ ಲಸಿಕೆ ಸಿಗುವವರೆಗೂ ನಿರ್ಲಕ್ಷ್ಯ ಮಾಡಬೇಡಿ. ಎಲ್ಲೆಡೆ ಕೋವಿಡ್ ನಿಯಮಗಳನ್ನು ಅನುಸರಿಸಿ ಮತ್ತು ಇತರರು ಸಹ ಅನುಸರಿಸಲು ಪ್ರೋತ್ಸಾಹಿಸಿ. ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿ ಅಂತರವಿರಲಿ. ಮಾಸ್ಕ್ ಮರೆಯದಿರಿ" ಎಂದು ಮತ್ತೆ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
-
#IndiaFightsCorona
— Ministry of Health (@MoHFW_INDIA) October 23, 2020 " class="align-text-top noRightClick twitterSection" data="
आइये, हम सब मिलकर कोविड-19 के खिलाफ जन आंदोलन में अपनी भागीदारी सुनिश्चित करें। कोविड अनुरूप व्यवहारों का हर समय, हर जगह पालन करें और दूसरों को भी इसके लिए प्रोत्साहित करें। 2 गज की दूरी, मास्क है ज़रूरी।#Unite2FightCorona pic.twitter.com/sARoWVWUxi
">#IndiaFightsCorona
— Ministry of Health (@MoHFW_INDIA) October 23, 2020
आइये, हम सब मिलकर कोविड-19 के खिलाफ जन आंदोलन में अपनी भागीदारी सुनिश्चित करें। कोविड अनुरूप व्यवहारों का हर समय, हर जगह पालन करें और दूसरों को भी इसके लिए प्रोत्साहित करें। 2 गज की दूरी, मास्क है ज़रूरी।#Unite2FightCorona pic.twitter.com/sARoWVWUxi#IndiaFightsCorona
— Ministry of Health (@MoHFW_INDIA) October 23, 2020
आइये, हम सब मिलकर कोविड-19 के खिलाफ जन आंदोलन में अपनी भागीदारी सुनिश्चित करें। कोविड अनुरूप व्यवहारों का हर समय, हर जगह पालन करें और दूसरों को भी इसके लिए प्रोत्साहित करें। 2 गज की दूरी, मास्क है ज़रूरी।#Unite2FightCorona pic.twitter.com/sARoWVWUxi
ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಕಳೆದ 24 ಗಂಟೆಗಳಲ್ಲಿ 54,366 ಸೋಂಕಿತರು ಪತ್ತೆಯಾಗಿದ್ದು, 690 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 77,61,312 ಹಾಗೂ ಮೃತರ ಸಂಖ್ಯೆ 1,17,306ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 69,48,497 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 6,95,509 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 22ರವರೆಗೆ 10,01,13,085 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 14,42,722 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.