ಲಂಡನ್: ಇಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್‌ರವರ ಜನ್ಮ ಜಯಂತಿ. ಈ ಹಿನ್ನೆಲೆಯಲ್ಲಿ 'ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್' ವತಿಯಿಂದ ವಿಶೇಷ ಜಯಂತಿ ಆಚರಣೆ ನಡೆಯಲಿದೆ.
ಸಮಾನತಾವಾದಿ, ಕ್ರಾಂತಿಕಾರಿ ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು 'ತಾರತಮ್ಯ ವಿರೋಧ ದಿನ' [Anti- Discrimination day] ಎಂಬ ಹೆಸರಿನಿಂದ ಆಚರಣೆ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಿಟನ್‌ನಲ್ಲಿರುವ ಭಾರತದ ಹೈಕಮೀಷನರ್ ರುಚಿ ಘನಶ್ಯಾಮ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಲ್ಯಾಂಬೆತ್‌ನಲ್ಲಿ ಸ್ಥಾಪಿಸಲ್ಪಟ್ಟಿರುವ ಬಸವೇಶ್ವರ ಮೂರ್ತಿ ಬಳಿ ನಡೆಯಲಿದೆ. ಈ ಸಂಬಂಧ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಮಾಹಿತಿ ನೀಡಿದರು.