ETV Bharat / bharat

ತಿರುಪತಿ ದೇವಸ್ಥಾನದ ಸಿಬ್ಬಂದಿಗೆ ಕೊರೊನಾ... ಗೋವಿಂದರಾಜ ಸ್ವಾಮಿ ದೇಗುಲ 2 ದಿನ ಬಂದ್​!

ಕಳೆದ ಸೋಮವಾರದಿಂದ ತಿರುಪತಿ ದೇವಸ್ಥಾನ ಭಕ್ತರ ದರ್ಶನಕ್ಕಾಗಿ ಓಪನ್​ ಆಗಿದ್ದು, ಇದರ ಬೆನ್ನಲ್ಲೇ ಟಿಟಿಡಿ ಸಿಬ್ಬಂದಿಯೋರ್ವನಲ್ಲಿ ಕೋವಿಡ್​​-19 ಕಾಣಿಸಿಕೊಂಡಿದೆ.

Tirupati employee tests positive
Tirupati employee tests positive
author img

By

Published : Jun 12, 2020, 7:05 PM IST

Updated : Jun 12, 2020, 7:13 PM IST

ತಿರುಪತಿ(ಆಂಧ್ರ ಪ್ರದೇಶ): ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಸಿಬ್ಬಂದಿಯೋರ್ವನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಕಾರಣಕ್ಕಾಗಿ ಎರಡು ದಿನಗಳ ಕಾಲ ಗೋವಿಂದರಾಜ ಸ್ವಾಮಿ ದೇಗುಲ ಬಂದ್​ ಮಾಡಲಾಗಿದೆ.

ಟಿಟಿಡಿ ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿರುವ ಮೊದಲ ಕೋವಿಡ್​ ಪ್ರಕರಣ ಇದಾಗಿದ್ದು, ಮುಂದಿನ ಎರಡು ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಆಡಳಿತ ಮಂಡಳಿ ಈಗಾಗಲೇ ಮಾಹಿತಿ ನೀಡಿದೆ.

ಮುಂದಿನ ಎರಡು ದಿನಗಳ ಕಾಲ ಅಂದರೆ ಜೂನ್​ 13 ಹಾಗೂ 14ರಂದು ದೇವಾಲಯಕ್ಕೆ ಸಂಪೂರ್ಣವಾಗಿ ಸ್ಯಾನಿಟೈಸ್​ ಮಾಡುವ ಕೆಲಸ ನಡೆಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೊನಾ ಕಾಣಿಸಿಕೊಂಡಿರುವ ದೇವಸ್ಥಾನದ ಸಿಬ್ಬಂದಿಯನ್ನ ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದ ಕುಟುಂಬಸ್ಥರು, ದೇಗುಲದ ಕೆಲ ಸಿಬ್ಬಂದಿಯನ್ನೂ ಕ್ವಾರಂಟೈನ್​ ಮಾಡಲಾಗಿದೆ.

ಸುಮಾರು 80 ದಿನಗಳ ಕಾಲ ಬಂದ್​ ಆಗಿದ್ದ ತಿರುಪತಿ ದೇವಸ್ಥಾನ ಕಳೆದ ಸೋಮವಾರದಿಂದ ಭಕ್ತರಿಗಾಗಿ ಓಪನ್​ ಆಗಿದೆ. ಗೋವಿಂದರಾಜ ಸ್ವಾಮಿ ದೇಗುಲ ಲಾರ್ಡ್​ ತಿರುಪತಿ ದೇವಸ್ಥಾನದ ಪಕ್ಕದಲ್ಲೇ ಇರುವುದು ಇದೀಗ ಮತ್ತಷ್ಟು ಆತಂಕ ಮೂಡಿಸಿದೆ. ದೇವಸ್ಥಾನದಲ್ಲಿ ಒಟ್ಟು 7 ಸಾವಿರ ಸಿಬ್ಬಂದಿ ಇದ್ದು, 12,000 ಹೊರ ಗುತ್ತಿಗೆ ಸಿಬ್ಬಂದಿ ಇದ್ದಾರೆ.

Last Updated : Jun 12, 2020, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.