ನವದೆಹಲಿ: ಡಿಯರ್ ಇಮ್ರಾನ್ ಖಾನ್, ನಿಮ್ಮ ದೇಶದೊಳಗೇ ಮೌಲಾನಾ ಮಸೂದ್ ಅಜರ್ ಅಡಗಿದ್ದಾನೆ. ಐಎಸ್ಐ ಸಪೋರ್ಟ್‌ನಿಂದಲೇ ಪುಲ್ವಾಮಾ ದಾಳಿ ನಡೆಸಿದ್ದಾನೆ. ನಿಮಗೆ ಅವನನ್ನ ಹಿಡಿಯೋಕೆ ಆಗದಿದ್ರೇ ಹೇಳಿ, ನಾವೇ ಅಜರ್‌ನ ತಲೆ ಹಿಡಿದೆಳೆದುಕೊಂಡು ಬರ್ತೀವಿ ಅಂತ ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಪಾಕ್ ಪ್ರಧಾನಿಗೆ ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ.
#TweetOfTheDay
— Prosenjit Ghosh🇮🇳 (@sweetprosenjit) February 19, 2019 " class="align-text-top noRightClick twitterSection" data="
Clear stand against Pakistan,you have guts to say this,My sincere thanks to honorable CM of Punjab Capt. Amrinder Singh Sir.https://t.co/JLf4zs0x2h
">#TweetOfTheDay
— Prosenjit Ghosh🇮🇳 (@sweetprosenjit) February 19, 2019
Clear stand against Pakistan,you have guts to say this,My sincere thanks to honorable CM of Punjab Capt. Amrinder Singh Sir.https://t.co/JLf4zs0x2h#TweetOfTheDay
— Prosenjit Ghosh🇮🇳 (@sweetprosenjit) February 19, 2019
Clear stand against Pakistan,you have guts to say this,My sincere thanks to honorable CM of Punjab Capt. Amrinder Singh Sir.https://t.co/JLf4zs0x2h
ಪುಲ್ವಾಮಾ ದಾಳಿ ನಡೆಸಿದ ಜೈಷ್-ಏ ಮೊಹ್ಮದ್ ಉಗ್ರರ ಜತೆಗೆ ನಂಟು ಪಾಕ್ ಹೊಂದಿರುವ ಬಗ್ಗೆ ಕ್ರಮ ತೆಗೆದುಕೊಳ್ಳಲು ಸರಿಯಾದ ಸಾಕ್ಷ್ಯಾಧಾರಗಳನ್ನ ನೀಡಿದ್ರೇ, ಖಂಡಿತಾ ಪಾಕ್ ಸರ್ಕಾರ ಉಗ್ರರ ವಿರುದ್ಧ ಕ್ರಮಕೈಗೊಳ್ತೇವೆ ಅಂತ ನಿನ್ನೆಯಷ್ಟೇ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು. ಇದಾದ ಮೇಲೆ ಪಂಜಾಬ್ ಸಚಿವ ಅಮರೀಂದರ್ ಸಿಂಗ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಡಿಯರ್ ಇಮ್ರಾನ್ ಖಾನ್, ಜೈಷ್-ಏ ಮೊಹ್ಮದ್ ಚೀಫ್ ಮೌಲಾನಾ ಮಸೂದ್ ಅಜರ್ ನಿಮ್ಮದೇ ದೇಶದ ಬವಾಲಪುರದಲ್ಲೇ ಅಡಗಿದ್ದಾನೆ. ಅದೇ ಮಾಸ್ಟರ್‌ಮೈಂಡ್ ಐಎಸ್ಐ ಜತೆ ಸೇರಿ ಪುಲ್ವಾಮಾ ದಾಳಿಯನ್ನೂ ಆಪರೇಟ್ ಮಾಡಿದ್ದಾನೆ. ಅಲ್ಲಿಗೆ ಹೋಗಿ ಮಸೂದ್ ಅಜರ್‌ನ ಹಿಡಿಯಿರಿ. ನಿಮ್ಮ ಕಡೆಗೆ ಈಗ ಅದು ಸಾಧ್ಯವಿಲ್ಲ ಅಂದ್ರೇ ಹೇಳಿ, ನಾವು ಅದೇ ಅಜರ್‌ನ ತಲೆ ಹಿಡಿದೆಳೆದು ತರುತ್ತೇವೆ. 26/11 ಮುಂಬೈ ದಾಳಿಯ ಬಗ್ಗೆ ಕೊಟ್ಟ ಸಾಕ್ಷ್ಯಗಳನ್ನ ನೀವು ಏನ್ ಮಾಡಿದ್ರೀ ಅಂತ ಗೊತ್ತಿದೆ. ಈಗ ಪ್ರತಿಯೊಂದು ವಿಷ್ಯ ಮಾತನಾಡುವ ಕಾಲ ಬಂದಿದೆ.' ಅಂತ ಟ್ವಿಟರ್‌ನಲ್ಲಿ ಇಮ್ರಾನ್ ಖಾನ್‌ಗೆ ಕಪಾಳಕ್ಕೆ ಹೊಡೆದಂತೆ ಹೇಳಿದ್ದಾರೆ ಕ್ಯಾಪ್ಟನ್ ಅಮರೀಂದರ್ ಸಿಂಗ್.
Dear @ImranKhanPTI you have Jaish chief Masood Azhar sitting in Bahawalpur & masterminding the attacks with ISI help. Go pick him up from there. If you can’t let us know, we’ll do it for you. BTW what has been done about the proofs of Mumbai’s 26/11 attack. Time to walk the talk. pic.twitter.com/Zct6I7QieY
— Capt.Amarinder Singh (@capt_amarinder) February 19, 2019 " class="align-text-top noRightClick twitterSection" data="
">Dear @ImranKhanPTI you have Jaish chief Masood Azhar sitting in Bahawalpur & masterminding the attacks with ISI help. Go pick him up from there. If you can’t let us know, we’ll do it for you. BTW what has been done about the proofs of Mumbai’s 26/11 attack. Time to walk the talk. pic.twitter.com/Zct6I7QieY
— Capt.Amarinder Singh (@capt_amarinder) February 19, 2019Dear @ImranKhanPTI you have Jaish chief Masood Azhar sitting in Bahawalpur & masterminding the attacks with ISI help. Go pick him up from there. If you can’t let us know, we’ll do it for you. BTW what has been done about the proofs of Mumbai’s 26/11 attack. Time to walk the talk. pic.twitter.com/Zct6I7QieY
— Capt.Amarinder Singh (@capt_amarinder) February 19, 2019
ಪುಲ್ವಾಮಾ ದಾಳಿ ಬಳಿಕ ಇದೇ ಮೊದಲ ಬಾರಿಗೆ ನಿನ್ನೆ ಖಾಸಗಿ ಚಾನೆಲ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕ್ ಪಿಎಂ ಇಮ್ರಾನ್ ಖಾನ್, ಕಾಶ್ಮೀರದಲ್ಲಿನ ಉಗ್ರ ಸಮಸ್ಯೆಯ ಕುರಿತಂತೆ ಮಾತುಕತೆ ನಡೆಸೋದಕ್ಕೆ ಸಿದ್ಧ. ಆದ್ರೇ, ಪುಲ್ವಾಮಾ ದಾಳಿ ಬಳಿಕ ಭಾರತದ ಮಾಧ್ಯಮಗಳಲ್ಲಿ ಹಾಗೂ ರಾಜಕಾರಣಿಗಳು ಪ್ರತೀಕಾರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಒಂದು ವೇಳೆ ಭಾರತ ತಿರುಗೇಟು ನೀಡಿದ್ರೇ, ನಾವೂ ತಿರುಗೇಟು ನೀಡೋದಿಲ್ಲ ಅಂತ ತಿಳಿದುಕೊಳ್ಳಬೇಡಿ.
ಆದ್ರೇ, ಇದು ಎಲ್ಲಿಯವರೆಗೂ ತೆಗೆದುಕೊಂಡು ಹೋಗುತ್ತೋ ಗೊತ್ತಿಲ್ಲ. ಯುದ್ಧ ಆರಂಭಿಸೋದಷ್ಟೇ ಮನುಷ್ಯರ ಕೈಯಲ್ಲಿದೆ. ಆದ್ರೇ, ಅದನ್ನ ತಡೆಯೋದು ಮನುಷ್ಯರ ಕೈಯಲ್ಲಿ ಇಲ್ಲ ಅಂತ ಖಾನ್ ಹೇಳಿದ್ದರು. ಇದೇ ಹೇಳಿಕೆಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ.