ETV Bharat / bharat

ನನ್ನ ಮಕ್ಕಳು ನೀರು ಕುಡಿಯುತ್ತಿದ್ದಾರೆ ಹತ್ತಿರ ಬಂದರೆ ಹುಷಾರ್! ತಾಯಿ-ಮಕ್ಕಳ ಅಪರೂಪದ ಚಿತ್ರ - ಐಎಫ್​ಎಸ್ ಪ್ರವೀಣ್​ ಕಾಸ್ವಾನ್ ಸುದ್ದಿ

ಸರೋವರದಲ್ಲಿ ನಾಲ್ಕು ಮುದ್ದಾದ ಹುಲಿ ಮರಿಗಳು ದಾಹ ತೀರಿಸಿಕೊಳ್ಳುತ್ತಿವೆ. ತಾಯಿ ಸ್ವಲ್ಪ ದೂರದಲ್ಲಿ ನಿಂತು, ನನ್ನ ಮಕ್ಕಳು ನೀರು ಕುಡೀತಿದ್ದಾರೆ. ಯಾರೂ ಇತ್ತ ಕಡೆ ಬರಬೇಡಿ.. ಎನ್ನುವಂತೆ ದಿಟ್ಟಿಸಿ ನೋಡುತ್ತಿದೆ. ಅಪರೂಪದ ಮತ್ತು ಅತ್ಯಂತ ಅರ್ಥಗರ್ಭಿತ ಫೋಟೊವನ್ನು ಕೆಲ ವರ್ಷಗಳ ಹಿಂದೆ ವನ್ಯಜೀವಿ ಪ್ರೇಮಿ ವಿನೋದ್ ಗೋಯಲ್ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.

Tigress Keeps Watch As Cubs Drink Water, Tigress Keeps Watch As Cubs Drink Water news, IFS Parveen Kaswan, IFS Parveen Kaswan news, ಹುಲಿ ಮರಿಗಳು ನೀರು ಕುಡಿಯುತ್ತಿರುವ ಚಿತ್ರ, ನೀರು ಕುಡಿಯುತ್ತಿರುವ ಹುಲಿ ಮರಿಗಳಿಗೆ ತಾಯಿ ಅಭಯ, ಐಎಫ್​ಎಸ್ ಪ್ರವೀಣ್​ ಕಾಸ್ವಾನ್​, ಐಎಫ್​ಎಸ್ ಪ್ರವೀಣ್​ ಕಾಸ್ವಾನ್ ಸುದ್ದಿ,
ಕೃಪೆ: Twitter
author img

By

Published : Feb 29, 2020, 10:37 AM IST

Updated : Feb 29, 2020, 12:51 PM IST

ಐದು ವರ್ಷಗಳ ಹಿಂದೆ ಅಂದ್ರೆ 28 ಫೆಬ್ರವರಿ 2015ರಲ್ಲಿ ಮಹಾರಾಷ್ಟ್ರದ ತಡೋಬಾ ಅಂಧೇರಿ ಹುಲಿಗಳ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ತನ್ನ ನಾಲ್ಕು ಮಕ್ಕಳೊಂದಿಗೆ ನೀರು ಕುಡಿಯಲು ಸಣ್ಣದೊಂದು ಕೊಳದ ಹತ್ತಿರ ತೆರಳಿತ್ತು. ಈ ವೇಳೆ ನಾಲ್ಕು ಮರಿಗಳು ನೀರು ಕುಡಿಯುತ್ತಿದ್ದಾಗ ತಾಯಿ ತನ್ನ ಮರಿಗಳಿಗೆ ಸನಿಹದಲ್ಲೇ ನಿಂತು ರಕ್ಷಣೆಯ ಅಭಯ ನೀಡಿತ್ತು. ಅತ್ಯಂತ ಆಕರ್ಷಕವಾಗಿರುವ ಈ ಫೋಟೊ ವನ್ಯಜೀವಿ ಪ್ರೇಮಿ ವಿನೋದ್ ಗೋಯಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಈ ಫೋಟೊೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹವಾ ಕ್ರಿಯೇಟ್​ ಮಾಡುತ್ತಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪ್ರವೀಣ್​ ಕಾಸ್ವಾನ್​ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.

2018ರಲ್ಲಿ ವಿನೋದ್​ ಗೋಯಲ್​ ಈ ಚಿತ್ರವನ್ನು ಫೇಸ್ಬುಕ್​ನಲ್ಲಿ ಹರಿಬಿಟ್ಟಿದ್ದರು. ಆಗಲೂ ಈ ಚಿತ್ರ ನೆಟ್ಟಿಗರ ಅಪಾರ ಮೆಚ್ಚುಗೆ ಗಳಿಸಿತ್ತು. ನಿನ್ನೆ(ಶುಕ್ರವಾರ) ಈ ಅಪರೂಪದ ಫೋಟೊ ತೆಗೆದ ದಿನವಾದ್ದರಿಂದ ಪ್ರವೀಣ್​ ಕಾಸ್ವಾನ್ ಈ ಫೋಟೊ ಹಂಚಿಕೊಂಡಿದ್ದಾರೆ.​

Last Updated : Feb 29, 2020, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.