ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಸತೀಶ್ ಗೋಲ್ಚಾ ಹೇಳಿದ್ದಾರೆ.
ಈ ಬಾರಿಯ ಸಂಭ್ರಮಾಚರಣೆಯಲ್ಲಿ ಕೇವಲ 25 ಸಾವಿರ ಮಂದಿ ಮಾತ್ರ ಭಾಗಿಯಾಗಲಿದ್ದಾರೆ. ಅದರಲ್ಲಿ 20,500 ಅತಿಥಿಗಳನ್ನು ಆಹ್ವಾನಿಸಲಾಗುವುದು. ಉಳಿದ ನಾಲ್ಕೂವರೆ ಸಾವಿರ ಜನ ಟಿಕೆಟ್ ಪಡೆದು ಕಾರ್ಯಕ್ರಮದಲ್ಲಿ ಹಾಜರಾಗಬಹುದು ಎಂದಿದ್ದಾರೆ.
ಇಂಡಿಯಾ ಗೇಟ್ನಿಂದ ಕೆಂಪುಕೋಟೆವರೆಗೆ ಮೆರವಣಿಗೆ
ಇಂಡಿಯಾ ಗೇಟ್ನಿಂದ ಹೊರಡಲಿರುವ ಪರೇಡ್ ಕೆಂಪು ಕೋಟೆ ತಲುಪಲಿದೆ. ಈ ಬಾರಿ, ಸೇನೆ ವತಿಯಿಂದ ಇರುತ್ತಿದ್ದ ಬೈಕ್ ಸ್ಟಂಟ್ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ಇರುವುದಿಲ್ಲ. ಕೋವಿಡ್ ನಿಯಮ ಪಾಲಿಸಿ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದರು.
ಐದು ವಲಯಗಳಲ್ಲಿ ಭದ್ರತೆ
ಈ ಬಾರಿ ಗಡಿಯಲ್ಲಿ ರೈತರ ಪ್ರತಿಭಟನೆ, ಅಂದೇ ಪ್ರತಿಭಟನಾಕಾರರ ಪರೇಡ್ ಇರುವುದರಿಂದ ಭದ್ರತೆ ಹೆಚ್ಚಿಸಲಾಗಿದೆ. ಐದು ವಲಯಗಳಲ್ಲಿ 6 ಸಾವಿರ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗುತ್ತದೆ ಎಂದರು.