ETV Bharat / bharat

ಮೂರು ವರ್ಷದ ಮಗುವಿನ ಮೇಲೆ ಹರಿದ ಕಾರು... ಎದೆ ಝಲ್​ ಎನ್ನುವ ವಿಡಿಯೋ!

author img

By

Published : Sep 17, 2020, 4:22 AM IST

Updated : Sep 17, 2020, 6:30 AM IST

ಮೂರು ವರ್ಷದ ಮಗುವಿನ ಮೇಲೆ ಕಾರೊಂದು ಹರಿದು ಹೋಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

car ran over a 3-year-old child
car ran over a 3-year-old child

ಮುಂಬೈ: ಮನೆ ಬಾಗಿಲಿನಲ್ಲಿ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಕಾರೊಂದು ಹರಿದು ಹೋಗಿದ್ದು, ಅದೃಷ್ಟವಶಾತ್​ ರೀತಿಯಲ್ಲಿ ಆ ಮಗು ಬದುಕುಳಿದಿರುವ ಘಟನೆ ನಡೆದಿದೆ.

ಮೂರು ವರ್ಷದ ಮಗುವಿನ ಮೇಲೆ ಹರಿದ ಕಾರು

ಮಹಾರಾಷ್ಟ್ರದ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯ ಹೊರಗಡೆ ಮೂರು ವರ್ಷದ ಮಗು ಆಟವಾಡುತ್ತಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಮಗುವಿನ ಮೇಲೆ ಕಾರಿನ ಎರಡು ಚಕ್ರಗಳು ಹಾಯ್ದು ಹೋಗಿವೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್​ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಸೆಪ್ಟೆಂಬರ್​​ 11ರಂದು ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದೆ. ಚಿಕಿತ್ಸೆ ಪಡೆದುಕೊಂಡಿರುವ ಮಗು ಈಗಾಗಲೇ ಡಿಸ್ಚಾರ್ಜ್​​ ಆಗಿದೆ. ಕಾರು ಚಾಲಕನ ವಿರುದ್ಧ ಪೊಲೀಸ್​ ಪ್ರಕರಣ ದಾಖಲಾಗಿದೆ.

Last Updated : Sep 17, 2020, 6:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.