ETV Bharat / bharat

ಸಿಪಿಐಎಂ ಕಮಾಂಡರ್​ ಸೇರಿ ಮೂವರು ನಕ್ಸಲರ ಬಂಧನ - ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಕ್ಸಲರ ಬಂಧನ

ಸಿಪಿಐಎಂ ಕಮಾಂಡರ್​ ಬೋನಂಗಿ ನಾಗೇಶ್ವರ ರಾವ್ ಸೇರಿದಂತೆ ಮೂವರು ನಕ್ಸಲರನ್ನು ವಿಶಾಖಪಟ್ಟಣ ಪೊಲೀಸರು ಬಂಧಿಸಿದ್ದಾರೆ.

Three Naxals arrested in Visakhapatnam
ಕಮಾಂಡರ್​ ಸೇರಿ ಮೂವರು ನಕ್ಸಲರ ಬಂಧನ
author img

By

Published : Sep 4, 2020, 1:55 PM IST

ವಿಶಾಖಪಟ್ಟಣ (ಆಂಧ್ರಪ್ರದೇಶ): ನಕ್ಸಲ್​​ ಕಮಾಂಡರ್​ ಬೋನಂಗಿ ನಾಗೇಶ್ವರ ರಾವ್ ಮತ್ತು ಇತರ ಇಬ್ಬರು ನಕ್ಸಲರನ್ನು ಜಿಲ್ಲೆಯ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ರಾವ್ 2005 ರಿಂದ ಸಿಪಿಐ ಮಾವೋವಾದಿ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಹಲವು ಕೊಲೆ, ಲ್ಯಾಂಡ್‌ಮೈನ್ ಸ್ಫೋಟ, ಸುಲಿಗೆ ಮಾಡುವುದು ಸೇರಿದಂತೆ ಹಲವು ಅಪರಾಧಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಿ. ರಾಚಂದ್ರ ಪಾಸಲ್ ಮತ್ತು ಎಸ್ ಅಪ್ಪರಾವ್ ಎಂಬ ಇತರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಇವರು ಸರ್ಕಾರಿ ಅಧಿಕಾರಿಗಳು ಮತ್ತು ಗ್ರಾಮಸ್ಥರನ್ನು ಬೆದರಿಸುತ್ತಿದ್ದರು. ಪೊಲೀಸ್ ಮತ್ತು ಸರ್ಕಾರದ ವಿರುದ್ಧ ರ್ಯಾಲಿಗಳನ್ನು ಆಯೋಜಿಸುತ್ತಿದ್ದರು. ನಕ್ಸಲರಿಗೆ ಆಹಾರ, ಆಶ್ರಯ ನೀಡುವುದು ಮತ್ತು ನಕ್ಸಲರಿಗೆ ಸಂದೇಶವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.