ETV Bharat / bharat

ಜಮೀನು ವಿವಾದದಲ್ಲಿ ಮಾರಾಮಾರಿ: ಮೂವರ ಸಾವು, ನಾಲ್ವರಿಗೆ ಗಾಯ - mahasamund murder

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ.

three murdered
ಮೂವರ ಹತ್ಯೆ
author img

By

Published : Sep 11, 2020, 2:39 PM IST

ಮಹಾಸಮುಂದ್ (ಛತ್ತೀಸ್​ಗಢ): ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಛತ್ತಿಸ್​​ಗಢದ ಮಹಾಸಮುಂದ್ ಜಿಲ್ಲೆಯಲ್ಲಿ ನಡೆದಿದೆ.

ಮೂವರ ಹತ್ಯೆ

ಜೋಬಾ ಗ್ರಾಮದ ಜಾಗೃತಿ ಗಾಯಕವಾಡ್, ಟೀನಾ ಕುಮಾರಿ ಹಾಗೂ ಮನೀಷ್ ಕುಮಾರ್ ಎಂಬುವವರು ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡ ಓಶ್​ ಕುಮಾರ್, ಒಮ್ರಾನ್​, ಗೀತಾಂಜಲಿ, ಅನರ್ ಬಾಯಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ತುಮಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಪರಶುರಾಮ್ ಹಾಗೂ ಬ್ರಿಜೆನ್ಸ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಮೂರು ತಿಂಗಳ ಹಿಂದೆಯಷ್ಟೇ ಪರಶುರಾಮ್ ಕೊಲೆ ಆರೋಪದಡಿ ಜೈಲು ಸೇರಿ ಬಿಡುಗಡೆಯಾಗಿದ್ದು, ಈಗ ಮೂವರ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.