ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಅಪರಿಚಿತ ಉಗ್ರರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
-
#UPDATE Joint operation was launched in the early hours today on J&K Police input. 5 terrorists have been eliminated, no collateral damage. Operation still in progress: Indian Army https://t.co/BHtemmlub8
— ANI (@ANI) June 7, 2020 " class="align-text-top noRightClick twitterSection" data="
">#UPDATE Joint operation was launched in the early hours today on J&K Police input. 5 terrorists have been eliminated, no collateral damage. Operation still in progress: Indian Army https://t.co/BHtemmlub8
— ANI (@ANI) June 7, 2020#UPDATE Joint operation was launched in the early hours today on J&K Police input. 5 terrorists have been eliminated, no collateral damage. Operation still in progress: Indian Army https://t.co/BHtemmlub8
— ANI (@ANI) June 7, 2020
ದಕ್ಷಿಣ ಕಾಶ್ಮೀರದ ಶೋಪಿಯಾನ್ನ ರೆಬನ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಇಂದು ಬೆಳಗ್ಗೆ ಶೋಧ ಕಾರ್ಯ ಪ್ರಾರಂಭಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಸ್ಪರ ಗುಂಡಿನ ಕಾಳಗದಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹತರಾದ ಉಗ್ರರ ಗುರುತು ಮತ್ತು ಯಾವ ಗುಂಪಿನ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಜತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.