ETV Bharat / bharat

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್​​ಗಳನ್ನು ಮನೆಯಿಂದ ಹೊರ ಹಾಕಿದ ಮಾಲೀಕ - ಶುಶ್ರೂಷಕರ ಮನೆ ಖಾಲಿ ಮಾಡಿಸಿದ ಮಾಲೀಕ

ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿರುವ ಕೊರೊನಾ ಸೋಂಕಿತರನ್ನು ನೋಡಿಕೊಳ್ಳುತ್ತಿದ್ದ ಶುಶ್ರೂಷಕರನ್ನು ಮಾಲೀಕ ಮನೆಯಿಂದ ಹೊರಗೆ ಹಾಕಿದ್ದಾನೆ.

Three male nurses asked to vacate home,ಶುಶ್ರೂಷಕರ ಮನೆ ಖಾಲಿ ಮಾಡಿಸಿದ ಮಾಲೀಕ
ಶುಶ್ರೂಷಕರ ಮನೆ ಖಾಲಿ ಮಾಡಿಸಿದ ಮಾಲೀಕ
author img

By

Published : Mar 13, 2020, 7:57 PM IST

ಕೊಟ್ಟಾಯಂ(ಕೇರಳ): ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದ ಮೂವರು ನರ್ಸ್​​​ಗಗಳಿದ್ದ ಮನೆಯನ್ನು ಮಾಲೀಕ ಖಾಲಿಮಾಡಿಸಿ ಹೊರಗೆ ಕಳುಹಿಸಿದ್ದಾನೆ.

ಕೇರಳದ ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತಿದ್ದಾರೆ. ಹೀಗೆ ಸೋಂಕಿತರನ್ನು ನೋಡಿಕೊಳ್ಳುವ ಮೂವರು ನರ್ಸ್​​ಗಳು ಒಂದೇ ಮನೆಯಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದಾರೆ.

ಮೂವರು ಕೂಡ ಬೇರೆ ಬೇರೆ ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಿಷಯ ತಿಳಿದ ಮನೆ ಮಾಲೀಕರು ಶುಶ್ರೂಷಕರನ್ನು ಮನೆ ಬಿಟ್ಟು ತೆರಳುವಂತೆ ಹೇಳಿ, ಖಾಲಿ ಮಾಡಿಸಿದ್ದಾರೆ.

ವಿಷಯ ತಿಳಿದ ಕೊಟ್ಟಾಯಂ ಜಿಲ್ಲಾಧಿಕಾರಿ ಕೆ.ಸುಧೀರ್​ ಬಾಬು ಮೆಡಿಕಲ್ ಕಾಲೇಜು ವಸತಿ ನಿಲಯದಲ್ಲಿ ಮೂವರು ಶುಶ್ರೂಷಕರಿಗೆ ವಸತಿ ವ್ಯವಸ್ಥೆ ಮಾಡಿಸಿದ್ದಾರೆ. ಸದ್ಯ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೂವರು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.