ಮಜುಲಿ (ಅಸ್ಸೋಂ): ಅಸ್ಸೋಂನ ಮಜುಲಿ ಜಿಲ್ಲೆಯ ವಿದ್ಯಾವತಿ ಪೆಗು (40) ಎಂಬ ಮಹಿಳೆ 2012ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಳು. ಕುಟುಂಬ ಮತ್ತು ಮೂವರು ಮಕ್ಕಳನ್ನು ಸಾಕುವ ಜವಾಬ್ದಾರಿ ಆಕೆ ಮೇಲೆ ಬಿತ್ತು. ಅದಕ್ಕೆ ಆಕೆ ಕಂಡುಕೊಂಡ ದಾರಿ ಕೃಷಿ.
ವಿದ್ಯಾವತಿ ಅವರು ಪತಿಯನ್ನು ಕಳೆದುಕೊಂಡ ಬಳಿಕ ಹಣಕಾಸಿನ ತೊಂದರೆ ಎದುರಿಸಬೇಕಾಯಿತು. ತಮ್ಮ ಕುಟುಂಬ ನಿರ್ವಹಣೆಗಾಗಿ, ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ಇವರು ಭೂಮಿಯನ್ನ ಉಳುವುದರಿಂದ ಹಿಡಿದು, ಬಿತ್ತನೆ, ಕೊಯ್ಲು ಎಲ್ಲವನ್ನೂ ಒಬ್ಬರೇ ಮಾಡುತ್ತಾರೆ. ಇದೇ ಈಗ ಇವರಿಗೆ ಮತ್ತು ಮಕ್ಕಳಿಗೆ ಆಹಾರವನ್ನು ನೀಡುತ್ತಿದೆ ಎಂದು ಅವರು ಹೇಳುತ್ತಾರೆ.
ಪೆಗು ಅವರು ಗಂಡನನ್ನು ಕಳೆದುಕೊಂಡ ಬಳಿಕ ವ್ಯವಸಾಯ ಮಾಡಲು ಆರಂಭಿಸಿದರು. ಇದರಿಂದ ಅವರು ಕುಟುಂಬವನ್ನು ಪೋಷಿಸಲು ಸಾಧ್ಯವಾಯಿತು. ಅಸ್ಸೋಂನ ಸಿಎಂ ಇವರಿಗೆ ಇನ್ನಷ್ಟು ಸಹಾಯ ಮಾಡಿದರೆ ತುಂಬಾ ಸಂತೋಷವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಪೆಗು ಅವರು 10 ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಬೊರೊ ರೈಸ್ ಮತ್ತು ಸಾಲಿ ರೈಸ್, ಸಾಸಿವೆ, ತರಕಾರಿಗಳನ್ನು ಬೆಳೆಯುತ್ತಾರೆ. ಆದರೆ ಇದ್ಯಾವ ಕೆಲಸಕ್ಕೂ ಅವರು ಕೃಷಿ ಕಾರ್ಮಿಕರನ್ನು ತೆಗೆದುಕೊಳ್ಳುವುದಿಲ್ಲ. ಅವರಿಗೆ ಕೊಡುವಷ್ಟು ಕೂಲಿ ಹಣವೂ ಇಲ್ಲ.
ಪೆಗು ಅವರ ಹಿರಿಯ ಮಗಳು ರಿಮಾ ಪದವಿ ಓದುತ್ತಿದ್ದು, ಅವಳ ಕಿರಿಯ ಮಗಳು ರಿತುಮೋನಿ ಮತ್ತು ಮಗ ಡೆಬಕುಮಾರ್ ಶಾಲೆಗೆ ಹೋಗುತ್ತಿದ್ದಾರೆ.