Intro:Body:
ಹೈದರಾಬಾದ್: ಹೈದರಾಬಾದ್ ಹೆಸರು ಕೇಳಿದ್ರೇ, ಇಲ್ಲವೇ ಆ ಊರಿಗೆ ಹೋದ್ರೇ ಎಲ್ಲರ ಬಾಯಲ್ಲೂ ಒಂದೇ ಮಾತು ಕೇಳಿ ಬರುತ್ತೆ. ನೀವೂ ಹೈದರಾಬಾದ್ ಬಿರಿಯಾನಿ ತಿಂದ್ರಾ ಎಂದು. ಯಾರೇ ತಿಂದ್ರೂ ತಿನ್ನದೇಯಿದ್ರೂ ಹೈದರಾಬಾದ್ ಎಂಬ ಹೆಸರಿನ ಜತೆಗೇ ಬಿರಿಯಾನಿಯೂ ಸೇರಿಕೊಳ್ಳುತ್ತೆ. ಅದೇ ಹೈದರಾಬಾದ್ ಬಿರಿಯಾನಿ ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದೆ.
ಹಾಗೇ ಹೈದರಾಬಾದ್‌ನ ಪ್ಯಾರಾಡೈಸ್ ರೆಸ್ಟೋರೆಂಟ್ ಕೂಡ ಹೈದರಾಬಾದ್ ಬಿರಿಯಾನಿಗೆ ತುಂಬಾನೇ ಫೇಮಸ್. ಅದರಲ್ಲೂ ಟೇಸ್ಟಿ-ಸ್ಪೈಸಿ ಜತೆಗೆ ಒಳ್ಳೇ ಸರ್ವೀಸ್ ನೀಡುವುದರಿಂದ ಗ್ರಾಹಕರಿಗೂ ಅಚ್ಚುಮೆಚ್ಚು. ಅದಕ್ಕಾಗಿಯೇ ಒಂದೇ ವರ್ಷದೊಳಗೆ ವಿಶ್ವದಲ್ಲಿಯೇ ಅತೀ ಹೆಚ್ಚು ಬಿರಿಯಾನಿ ಸರ್ವ್ ಮಾಡಿ ಈಗ ಇದೇ ಪ್ಯಾರಾಡೈಸ್ ರೆಸ್ಟೋರೆಂಟ್ ವರ್ಲ್ಡ್ ರೆಕಾರ್ಡ್ ಮಾಡಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್-2019ರ ಅನುಸಾರ, ಜನವರಿ 1, 2017 ಮತ್ತು ಡಿಸೆಂಬರ್ 31, 2017ರ ಮಧ್ಯೆ ಪ್ಯಾರಾಡೈಸ್ ಫುಡ್ ಕೋರ್ಟ್ 70,44,289 ಬಿರಿಯಾನಿ ಮಾರಾಟ ಮಾಡಿದೆ.
ಇದಷ್ಟೇ ಅಲ್ಲ, ಮುಂಬೈನಲ್ಲಿ ನಡೆದ ಏಷಿಯಾ ಫುಡ್ ಸಮಾವೇಶದಲ್ಲೂ ಪ್ಯಾರಾಡೈಸ್ ಫುಡ್ ರೆಸ್ಟೋರೆಂಟ್, ಬೆಸ್ಟ್ ಬಿರಿಯಾನಿ ಸರ್ವಿಂಗ್ ಅನ್ನೋ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಜತೆಗೆ ಆಹಾರ, ರೆಸ್ಟೋರೆಂಟ್ ಹಾಗೂ ಅತಿಥಿಗಳ ಉಪಚಾರ ಕ್ಷೇತ್ರದಲ್ಲಿ ಮಾಡಿರುವ ಸೇವೆಗೆ ಪ್ಯಾರಾಡೈಸ್ ಫುಡ್‌ಕೋರ್ಟ್‌ನ ಚೇರ್ಮನ್ ಅಲಿ ಹೇಮತಿಯವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿಯೂ ಲಭಿಸಿದೆಯಂತೆ. 1953ರಲ್ಲಿ ಸಣ್ಣದಾಗಿ ಈ ಫುಡ್ ಪ್ಯಾರಾಡೈಸ್ ಆರಂಭವಾಗಿತ್ತು. 100 ಸೀಟ್‌ನ ಈ ರೆಸ್ಟೋರೆಂಟ್ ಮೊದಲು ಟೀ ಮತ್ತು ಸ್ನ್ಯಾಕ್ಸ್ ಮಾತ್ರ ಸರ್ವ್ ಮಾಡ್ತಾಯಿತ್ತು. ಆದ್ರೀಗ ದಕ್ಷಿಣಭಾರತದ ಮಹಾನಗರಗಳಲ್ಲಿ 30ಕ್ಕೂ ಹೆಚ್ಚು ಬ್ರ್ಯಾಂಚ್‌ಗಳನ್ನ ತೆರೆದಿದೆ.
ಪ್ಯಾರಾಡೈಸ್ ಫುಡ್ ಕೋರ್ಟ್ ಸಿಇಒ ಗೌತಮ್ ಗುಪ್ತಾ, ದೆಹಲಿಯಲ್ಲೂ ತಮ್ಮ ಬ್ರ್ಯಾಂಚ್ ತೆರೆಯಲು ನಿರ್ಧರಿಸಿದ್ದಾರಂತೆ.