ETV Bharat / bharat

ಕೇರಳಕ್ಕೆ ಥರ್ಮಲ್ ಮತ್ತು ಆಫ್ಟಿಕಲ್ ಇಮೇಜಿಂಗ್ ಕ್ಯಾಮೆರಾ ಖರೀದಿಸಿದ ಶಶಿ ತರೂರ್​​​ - ಎಮ್​ಪಿಎಲ್​ಎಡಿಎಸ್​ ನಿಧಿ ಸುದ್ದಿ

ಕೊರೊನಾ ಹಿನ್ನೆಲೆ ಜ್ವರದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಲು ಮತ್ತು ಸುರಕ್ಷಿತವಾಗಿ ದೂರದಿಂದ ಸ್ಕ್ಯಾನ್​ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಪವರ್​​ ಫೇಸ್ ಡಿಟೆಕ್ಷನ್ ತಂತ್ರಜ್ಞಾನ ಹೊಂದಿರುವ ಮೊದಲ ಥರ್ಮಲ್ ಮತ್ತು ಆಫ್ಟಿಕಲ್ ಇಮೇಜಿಂಗ್ ಕ್ಯಾಮರಾವನ್ನು ಕೇಂದ್ರ ಮಾಜಿ ಸಚಿವ ಶಶಿ ತರೂರ್ ಖರೀದಿಸಿದ್ದು, ತಿರುವನಂತರಪುಂದಲ್ಲಿ ಅಳವಡಿಸಲಿದ್ದಾರೆ.

thermal-camera-with-face-detection-tech-for-fever-screening-procured-in-kerala
ಶಶಿ ತರೂರ್​​​
author img

By

Published : May 2, 2020, 4:42 PM IST

Updated : May 2, 2020, 7:14 PM IST

ತಿರುವನಂತಪುರಂ : ಜ್ವರ ತಪಾಸಣೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಪವರ್​​ ಫೇಸ್ ಡಿಟೆಕ್ಷನ್ ತಂತ್ರಜ್ಞಾನ ಹೊಂದಿರುವ ಮೊದಲ ಥರ್ಮಲ್ ಮತ್ತು ಆಪ್ಟಿಕಲ್ ಇಮೇಜಿಂಗ್ ಕ್ಯಾಮೆರಾವನ್ನು ಕೇರಳದ ರಾಜಧಾನಿಗೆ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಖರೀದಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಅವರೊಂದಿಗೆ ಮಾತುಕತೆ ನಡೆಸಿರುವ ಶಶಿ ತರೂರ್​ ಅವರ ತಂಡ, ಜ್ವರದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಲು ಮತ್ತು ಸುರಕ್ಷಿತವಾಗಿ ದೂರದಿಂದ ಸ್ಕ್ಯಾನ್​ ಮಾಡಲು ಜಿಲ್ಲೆಗೆ ಯಂತ್ರದ ಅವಶ್ಯಕತೆ ಇತ್ತು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದೆ. ಯಂತ್ರದ ಖರೀದಿಗೆ ಕೇಂದ್ರ ಮಾಜಿ ಸಚಿವರು ಎಂಪಿಎಎಲ್‍ಡಿಎಸ್ ನಿಧಿಯನ್ನು ಬಳಸಿದ್ದಾರೆ.

ಥರ್ಮಲ್​ ಕ್ಯಾಮೆರಾ ಏಷ್ಯಾದಲ್ಲಿ ಲಭ್ಯವಿಲ್ಲದ ಕಾರಣ ಅಮ್ಸ್‌ಸ್ಟರ್​ಡ್ಯಾಮ್​ನಿಂದ ಖರೀದಿಸಲಾಗಿದೆ. ಲಾಕ್​ಡೌನ್​ ಹಿನ್ನೆಲೆ ಕೊಲೊನ್, ಪ್ಯಾರಿಸ್, ಲೀಪ್‌ಜಿಗ್, ಬ್ರಸೆಲ್ಸ್, ಬಹ್ರೇನ್ ಮತ್ತು ದುಬೈಗಳನ್ನು ಒಳಗೊಂಡಂತೆ ಅನೇಕ ದೇಶಗಳ ವಿಮಾನ ಸಂಪರ್ಕ ಬಳಸಿ ಭಾರತಕ್ಕೆ ತರಲಾಯಿತು. ಅಂತಿಮವಾಗಿ ಬೆಂಗಳೂರಿಗೆ ತಲುಪಿದ ಅದನ್ನು ಕೇರಳಕ್ಕೆ ರವಾನಿಸಲಾಯಿತು ಎಂದು ಶಶಿ ತರೂರ್​ ಅವರು ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಎಂಸಿಹೆಚ್​ನಲ್ಲಿ ಥರ್ಮಲ್ ಮತ್ತು ಆಫ್ಟಿಕಲ್ ಇಮೇಜಿಂಗ್ ಕ್ಯಾಮರಾವನ್ನು ಅಳವಡಿಸಲಾಗುತ್ತದೆ ಎಂದು ಶಶಿ ತರೂರ್​ ತಿಳಿಸಿದ್ದಾರೆ.

Last Updated : May 2, 2020, 7:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.