ಇಂದೋರ್: ಆರ್ಥಿಕ ಹಿಂಜರಿತ , ಕೊರೊನಾ ಬಿಕ್ಕಟ್ಟಿನ ನಂತರ ಇದೀಗ ಮದುವೆಗಳ ಮೇಲೆ ಗ್ರಹಗಳ ಕರಿಛಾಯೆ ಬಿದ್ದಿದೆ. ಇಂದಿನಿಂದ 2021 ಏಪ್ರಿಲ್ 23 ರವರೆಗೆ ಕೇವಲ ಐದು ಶುಭ ದಿನಗಳು ಮಾತ್ರ ಇವೆ. ಹೀಗಾಗಿ ಮದುವೆಯಾಗುವ ಯುವಕ - ಯುವತಿಯರು ವಿವಾಹವಾಗಲು ಬಹಳ ಸಮಯ ಕಾಯಬೇಕಾಗಿದೆ.
ಪಂಚಾಂಗವನ್ನು ತೆಗೆದು ನೋಡಿದರೆ 23 ಏಪ್ರಿಲ್ 2021 ರವರೆಗೆ ಕೇವಲ ಐದು ಶುಭದಿನಗಳನ್ನು ಕಾಣಬಹುದು , ಅದರಲ್ಲಿ 2020 ರ ನವೆಂಬರ್‌ನಲ್ಲಿ 25 ಮತ್ತು 30 ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 7, 9 ಮತ್ತು 11 ಡಿಸೆಂಬರ್ ರವರೆಗೆ. ನಂತರ ಹೊಸ ವರ್ಷದಲ್ಲಿ ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 23ರವರೆಗೆ ವಿವಾಹವಾಗಲು ಒಂದೇ ಒಂದು ಒಳ್ಳೆಯ ಮಹೂರ್ತವಿಲ್ಲ .
ಮುಂದಿನ ಐದು ತಿಂಗಳುಗಳವರೆಗೆ, ಗುರು ಮತ್ತು ಶುಕ್ರ ವಿವಾಹದಂತಹ ಶುಭ ಕಾರ್ಯಗಳಿಗೆ ಶುಭ ನೀಡುವುದಿಲ್ಲ. ಹೀಗಾಗಿ ನಿಗದಿತ ದಿನಾಂಕಗಳನ್ನು ಹೊರತುಪಡಿಸಿ ಮದುವೆ ಮಾಡುವವರು ಏಪ್ರಿಲ್ 2021 ರವರೆಗೆ ಕಾಯಬೇಕಾಗುತ್ತದೆ.