ನವದೆಹಲಿ: ಇಂದು ಮಧ್ಯಾಹ್ನದವರೆಗೆ ಭಾರತದಲ್ಲಿ ಒಟ್ಟು 223 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗೆ ಒಟ್ಟು 4 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಎಲ್ಲಾ ರಾಜ್ಯಗಳ ಕೊರೊನಾ ಅಂಕಿ ಅಂಶಗಳನ್ನೊಳಗೊಂಡ ಪಟ್ಟಿಯೊಂದನ್ನು ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ 32 ವಿದೇಶಿಗರು ಸೇರಿ ದೇಶದಲ್ಲಿ 223 ಪ್ರಕರಣಗಳು ದಾಖಲಾಗಿವೆ. ದೆಹಲಿ, ಕರ್ನಾಟಕ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದೊಂದು ಸಾವು ಸಂಭವಿಸಿರುವುದಾಗಿ ಉಲ್ಲೇಖಿಸಿದೆ. ಈ ಪಟ್ಟಿ ಕೇವಲ ಇಂದು ಮಧ್ಯಾಹ್ನದವರೆಗಿನ ಅಂಕಿ ಅಂಶ ಮಾತ್ರವಾಗಿದ್ದು, ಸಂಜೆ ವೇಳೆಗೆ ಕೇರಳ, ಮಹಾರಾಷ್ಟ್ರ, ಗುಜರಾತ್ ಹಾಗೂ ಹರಿಯಾಣದಲ್ಲಿ ಇನ್ನಷ್ಟು ಪ್ರಕರಣಗಳು ವರದಿಯಾಗಿವೆ.
ಕ್ರ.ಸಂ | ರಾಜ್ಯ | ದೃಢಪಟ್ಟ ಪ್ರಕರಣಗಳು (ಭಾರತೀಯರು) | ದೃಢಪಟ್ಟ ಪ್ರಕರಣಗಳು (ವಿದೇಶಿಗರು) | ಗುಣಮುಖರಾದವರು | ಸಾವು |
1 | ಆಂಧ್ರ ಪ್ರದೇಶ | 3 | 0 | 0 | 0 |
2 | ಛತ್ತೀಸ್ಗಡ್ | 1 | 0 | 0 | 0 |
3 | ದೆಹಲಿ | 16 | 1 | 5 | 1 |
4 | ಗುಜರಾತ್ | 5 | 0 | 0 | 0 |
5 | ಹರಿಯಾಣ | 3 | 14 | 0 | 0 |
6 | ಕರ್ನಾಟಕ | 15 | 0 | 1 | 1 |
7 | ಕೇರಳ | 26 | 2 | 3 | 0 |
8 | ಮಹಾರಾಷ್ಟ್ರ | 49 | 3 | 0 | 1 |
9 | ಒಡಿಶಾ | 2 | 0 | 0 | 0 |
10 | ಪುದುಚೇರಿ | 1 | 0 | 0 | 0 |
11 | ಪಂಜಾಬ್ | 2 | 0 | 0 | 1 |
12 | ರಾಜಸ್ಥಾನ | 15 | 2 | 3 | 0 |
13 | ತಮಿಳುನಾಡು | 3 | 0 | 1 | 0 |
14 | ತೆಲಂಗಾಣ | 8 | 9 | 1 | 0 |
15 | ಕೇಂ.ಪ್ರ. ಚಂಢೀಗಡ | 1 | 0 | 0 | 0 |
16 | ಜಮ್ಮು-ಕಾಶ್ಮೀರ | 4 | 0 | 0 | 0 |
17 | ಕೇಂ.ಪ್ರ. ಲಡಾಖ್ | 10 | 0 | 0 | 0 |
18 | ಉತ್ತರ ಪ್ರದೇಶ | 22 | 1 | 9 | 0 |
19 | ಉತ್ತರಾಖಂಡ | 3 | 0 | 0 | 0 |
20 | ಪಶ್ಚಿಮ ಬಂಗಾಳ | 2 | 0 | 0 | 0 |
ಭಾರತದಲ್ಲಿ ಒಟ್ಟು ಪ್ರಕರಣಗಳು | 191 | 32 | 23 | 4 |