ಅಮರಾವತಿ (ಮಹಾರಾಷ್ಟ್ರ): ರಸ್ತೆ ಅಪಘಾತಕ್ಕೊಳಗಾಗಿ ಅಮರಾವತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.
ಪರಾರಿಯಾದ ರೋಗಿಯನ್ನು ಶರದ್ ಕಟಾಡೆ ಎಂದು ಗುರುತಿಸಲಾಗಿದ್ದು, ಪ್ಲಾಸ್ಟರ್ ಆಗಿರುವ ಕೈಯಲ್ಲೇ ಆ್ಯಂಬುಲೆನ್ಸ್ ಚಾಲನೆ ಮಾಡಿದ್ದಾನೆ. ಈ ವೇಳೆ ಮೂರು ಫ್ಲೈಓವರ್‌ಗಳನ್ನು ದಾಟಿ ಬದ್ನೆರಾ ವರಗೂ ಹೋಗಿದ್ದಾನೆ. ಆದರೆ, ಬದ್ನೆರಾರದಲ್ಲಿ ಕಾರ್ಪೋರೇಟರ್ ಪ್ರಕಾಶ್ ಬನ್ಸೋಡ್ ಎಂಬವರು ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಾಗ ಕೈಯಲ್ಲಿ ಪ್ಲಾಸ್ಟರ್ ಇರುವ ಚಾಲಕ ವೇಗವಾಗಿ ಆ್ಯಂಬುಲೆನ್ಸ್ ಚಲಾಯಿಸುತ್ತಿರುವುದನ್ನು ಗಮನಿದ್ದಾರೆ. ಕಾರ್ಮಿಕರ ಸಹಾಯದಿಂದ ಆ್ಯಂಬುಲೆನ್ಸ್ ಅಡ್ಡಗಟ್ಟಿ ತಡೆದಿದ್ದು, ಬದ್ನೆರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಶರದ್ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.