ETV Bharat / bharat

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಿಚಿತ್ರ ಸ್ಪರ್ಧೆ... ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ!

ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತದೊಂದು ಸ್ಪರ್ಧೆ ಆಯೋಜಿಸಲಾಗಿದ್ದು, ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

author img

By

Published : Sep 16, 2019, 7:06 PM IST

Updated : Sep 16, 2019, 7:52 PM IST

ಹೂಸು ಬಿಡುವ ಸ್ಪರ್ಧೆ

ಸೂರತ್‍: ಖಂಡಿತ ಇಂತಹ ಸ್ಪರ್ಧೆ ಕುರಿತಂತೆ ನೀವು ಎಲ್ಲಿಯೂ ಕೇಳಿರಲು ಸಾಧ್ಯವೇ ಇಲ್ಲ. ವಿಚಿತ್ರ ಎನಿಸುವ ಇಂತಹ ಸ್ಪರ್ಧೆಯನ್ನು ಗುಜರಾತ್ ನಲ್ಲಿ ಆಯೋಜಿಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಕೆಲವರು ಮುಜುಗರಕ್ಕೊಳಗಾಗುವಂತಹ ಧ್ವನಿ ಮತ್ತು ವಾಸನೆ ಹೊರಡಿಸುವುದನ್ನು ನೀವು ಅಲ್ಲಲ್ಲಿ ನೋಡಿರುತ್ತೀರಿ. ಹೊಟ್ಟೆ ಕೆಟ್ಟ ಸಮಯದಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸನ್ನಿವೇಶ. ಹೌದು, ನಿಮಗೆ ಅರ್ಥವಾಗಿರಬಹುದೆಂದು ಭಾವಿಸುತ್ತೇವೆ.

ಅರ್ಥ ಆಗಲಿಲ್ಲವೇ... ಇದು ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ವಿಚಿತ್ರ ಸ್ಪರ್ಧೆಯ ಸುದ್ದಿ. ಗುಜರಾತಿನ ಸೂರತ್‍ನಲ್ಲಿ ಹೂಸು ಬಿಡುವ ಸ್ಪರ್ಧೆ ಆಯೋಜಿಸಲಾಗಿದೆ ಎಂದರೇ ನೀವು ಹುಬ್ಬೇರಿಸುವುದು ಖಚಿತ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ಕೂಡ ಸಿಗುತ್ತೆ. ಈ ಸ್ಪರ್ಧೆ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

Surat news, fart competition, fart competition news, surat fart competition news,
ಹೂಸು ಬಿಡುವ ಸ್ಪರ್ಧೆ

ಹೌದು. ಮೊದಲ ಬಾರಿ ಹೂಸು ಬಿಡುವ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ದೊಡ್ಡದಾಗಿ, ಸುದೀರ್ಘವಾಗಿ ಭಾರಿ ಸದ್ದು ಮಾಡುತ್ತಾ ಬಿಡುವವರಿಗೆ ಇಲ್ಲಿ ಗೆಲ್ಲುವ ಅವಕಾಶವಿದೆ. ಸೆ.22ರ ಭಾನುವಾರದಂದು ‘ವಾಟ್ ದಿ ಫಾರ್ಟ್’ ಎಂಬ ಸ್ಪರ್ಧೆಯನ್ನು ಸೂರತ್‍ನಲ್ಲಿ ನಡೆಯಲಿದೆ.

ಸೂರತ್ ನಿವಾಸಿ ಯತೀನ್ ಸಂಗೋಯಿ ಮತ್ತು ಮೌಲ್ ಸಂಘ್ವೀ ಈ ಸ್ಪರ್ಧೆ ಏರ್ಪಡಿಸಿದ್ದಾರೆ. ‘ಹಲವು ದಿನಗಳ ಹಿಂದೆ ನಾನು ಕುಟುಂಬದವರೊಂದಿಗೆ ಸಿನಿಮಾ ನೋಡುತ್ತಾ ಕುಳಿತಿದ್ದೆ. ಆಗ ನಾನು ಒಂದು ಬಾರಿ ಹೀಗೆ ಬಿಟ್ಟಿದ್ದಕ್ಕೆ ಎಲ್ಲರೂ ನಕ್ಕರು. ತಮಾಷೆ ಸಹ ಮಾಡಿದರು. ಆಗಲೇ ಈ ಸ್ಪರ್ಧೆ ಮಾಡುವ ಯೋಚನೆ ಹೊಳೆಯಿತು ಎಂದಿದ್ದಾರೆ.

ಹೂಸು ಬಿಡುವ ಸ್ಪರ್ಧೆ

ಈ ಸ್ಪರ್ಧೆ ಮೂರು ರೀತಿಯಲ್ಲಿ ನಡೆಯಲಿದೆ. ಸುದೀರ್ಘವಾಗಿ, ದೊಡ್ಡದಾಗಿ, ಸಂಗೀತಮಯ ಹೀಗೆ ಮೂರು ರೀತಿ ಇರುತ್ತದೆ. ಇದರಲ್ಲಿ ಗೆದ್ದ ಮೂವರನ್ನು ವಿಜೇತರು ಎಂದು ಘೋಷಿಸಿ, ಬಹುಮಾನ ನೀಡಲಾಗುತ್ತದೆ. ಪ್ರತಿವೋರ್ವ ಸ್ಪರ್ಧಿಗೂ 60 ಸೆಕೆಂಡ್ ಸಮಯ ನೀಡಲಾಗುತ್ತೆ. ಈ ಸಮಯದಲ್ಲಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು.

ಸ್ಪರ್ಧೆಗೆ ಸ್ಟ್ಯಾಂಡ್ ಅಪ್ ಹಾಸ್ಯಗಾರ ದೇವಾಂಗ್ ರಾವಲ್, ಸ್ಥಳೀಯ ವೈದ್ಯರು ತೀರ್ಪುಗಾರರಾಗಿ ಬರಲಿದ್ದಾರೆ. ಗೆದ್ದವರಿಗೆ ಟ್ರೋಫಿಯೊಂದಿಗೆ 5 ಸಾವಿರ ರೂ.ಗಳಿಂದ 15 ಸಾವಿರ ರೂ.ವರೆಗೆ ನಗದು ಬಹುಮಾನ ಕೊಡಲಾಗುತ್ತದೆ. ಈವರೆಗೆ 50 ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿದ್ದಾರೆ. ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು 100 ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ.

ಇನ್ನು ಈ ಸ್ಪರ್ಧೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದ್ದು, ಪರ ಮತ್ತು ವಿರುದ್ಧ ಹೇಳಿಕೆಗಳು ಬರುತ್ತಿವೆ. ನಮ್ಮ ನಗರದಲ್ಲಿಯೂ ಬಂದು ಈ ಸ್ಪರ್ಧೆ ಕೈಗೊಳ್ಳಿ ಎಂದು ಕೋಲ್ಕತ್ತಾ, ಮುಂಬೈ, ಜೈಪುರ್​ ಸೇರಿದಂತೆ ದೇಶಾದ್ಯಂತ ಕರೆ ಬರುತ್ತಿವೆ ಎಂದು ಯತೀನ್ ಸಂಗೋಯಿ ತಿಳಿಸಿದ್ದಾರೆ.

Intro:Body:

the first ever farm competition will be held in surat 

Surat news, farm competition, farm competition news, surat farm competition news, ಹೂಸು ಬಿಡುವ ಸ್ಪರ್ಧೆ, ಹೂಸು ಬಿಡುವ ಸ್ಪರ್ಧೆ ಸುದ್ದಿ, ಸೂರತ್​ನಲ್ಲಿ ಹೂಸು ಬಿಡುವ ಸ್ಪರ್ಧೆ, ಸೂರತ್​ ಸುದ್ದಿ, 

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ‘ಹೂಸು ಬಿಡುವ ಸ್ಪರ್ಧೆ’ ಆಯೋಜನೆ... ಎಲ್ಲಿ ಗೊತ್ತಾ?!

ದೇಶದಲ್ಲಿ ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆ ಆಯೋಜಿಸಲಾಗಿದ್ದು, ಎಲ್ಲಡೆ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. 

ಸೂರತ್‍: ದೇಶದಲ್ಲಿ ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆಯನ್ನು ಗುಜರಾತಿನ ಸೂರತ್‍ನಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ಕೂಡ ಸಿಗುತ್ತೆ. ಈ ಸ್ಪರ್ಧೆ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. 

ಹೌದು. ಮೊದಲ ಬಾರಿ ಹೂಸು ಬಿಡುವ ಸ್ಪರ್ಧೆ ಭಾರತದಲ್ಲಿ ಆಯೋಜಿಸಲಾಗುತ್ತಿದೆ. ದೊಡ್ಡದಾಗಿ, ಸುದೀರ್ಘವಾಗಿ ಭಾರೀ ಸದ್ದು ಮಾಡುತ್ತಾ ಹೂಸು ಬಿಡುವವರಿಗೆ ಇಲ್ಲಿ ಗೆಲ್ಲುವ ಅವಕಾಶವಿದೆ. ಸೆ.22ರ ಭಾನುವಾರದಂದು ಹೂಸು ಬಿಡುವವರಿಗಾಗಿಯೇ ‘ವಾಟ್ ದಿ ಫಾರ್ಟ್’ ಸ್ಪರ್ಧೆಯನ್ನು ಸೂರತ್‍ನಲ್ಲಿ ನಡೆಯಲಿದೆ.

ಸೂರತ್ ನಿವಾಸಿ ಯತೀನ್ ಸಂಗೋಯಿ ಮತ್ತು ಮೌಲ್ ಸಂಘ್ವೀ ಈ ಸ್ಪರ್ಧೆ ಏರ್ಪಡಿಸಿದ್ದಾರೆ. ‘ಹಲವು ದಿನಗಳ ಹಿಂದೆ ನಾನು ಕುಟುಂಬದವರೊಂದಿಗೆ ಸಿನಿಮಾ ನೋಡುತ್ತಾ ಕುಳಿತಿದ್ದೆ. ಆಗ ನಾನು ಒಂದು ದೊಡ್ಡ ಹೂಸು ಬಿಟ್ಟಿದ್ದಕ್ಕೆ ಎಲ್ಲರೂ ನಕ್ಕರು. ತಮಾಷೆ ಸಹ ಮಾಡಿದರು. ಆಗಲೇ ಈ ಸ್ಪರ್ಧೆ ಮಾಡುವ ಯೋಚನೆ ಹೊಳೆಯಿತು ಎಂದರು.

ಈ ಸ್ಪರ್ಧೆ ಮೂರು ರೀತಿಯಲ್ಲಿ ಸ್ಪರ್ಧೆ ನಡೆಯಲಿದೆ. ಸುದೀರ್ಘವಾಗಿ, ದೊಡ್ಡದಾಗಿ, ಸಂಗೀತಮಯ ಹೀಗೆ ಮೂರು ರೀತಿ ಇರುತ್ತದೆ. ಇದರಲ್ಲಿ ಗೆದ್ದ ಮೂವರನ್ನು ವಿಜೇತರು ಎಂದು ಘೋಷಿಸಿ, ಬಹುಮಾನ ನೀಡಲಾಗುತ್ತದೆ. ಪ್ರತಿಯೊಬ್ಬ ಸ್ಪರ್ಧಿಗೂ 60 ಸೆಕೆಂಡ್ ಸಮಯ ನೀಡಲಾಗುತ್ತೆ. ಈ ಸಮಯದಲ್ಲಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು. ಇಲ್ಲಿ ಸ್ಪರ್ಧಿಗಳು ಹೂಸು ಬಿಡಲು ಸ್ವಾತಂತ್ರರು ಎಂದಿದ್ದಾರೆ.

ಸ್ಪರ್ಧೆಗೆ ಸ್ಟ್ಯಾಂಡ್ ಅಪ್ ಹಾಸ್ಯಗಾರ ದೇವಾಂಗ್ ರಾವಲ್, ಸ್ಥಳೀಯ ವೈದ್ಯರು ತೀರ್ಪುಗಾರರಾಗಿ ಬರಲಿದ್ದಾರೆ. ಗೆದ್ದವರಿಗೆ ಟ್ರೋಫಿಯೊಂದಿಗೆ 5 ಸಾವಿರ ರೂ.ಗಳಿಂದ 15 ಸಾವಿರ ರೂ.ವರೆಗೆ ನಗದು ಬಹುಮಾನ ಕೊಡಲಾಗುತ್ತದೆ. ಈವರೆಗೆ 50 ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿದ್ದಾರೆ. ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು 100 ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ. 

ಇನ್ನು ಹೂಸು ಬಿಡುವ ಸ್ಪರ್ಧೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದ್ದು, ಪರ ಮತ್ತು ವಿರುದ್ಧ ಹೇಳಿಕೆಗಳು ಬರುತ್ತಿದ್ದಾವೆ. ನಮ್ಮ ನಗರದಲ್ಲಿಯೂ ಬಂದು ಈ ಸ್ಪರ್ಧೆ ಕೈಗೊಳ್ಳಿಯೆಂದು ಕೊಲ್ಕತ್ತಾ, ಮುಂಬೈ, ಜೈಪುರ್​ ಸೇರಿದಂತೆ ದೇಶದ್ಯಾಂತ ಕರೆ ಬರುತ್ತಿದ್ದಾವೆ ಎಂದು ಯತೀನ್ ಸಂಗೋಯಿ ತಿಳಿಸಿದ್ದಾರೆ. 

Conclusion:
Last Updated : Sep 16, 2019, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.