ನವದೆಹಲಿ: ಇಡೀ ವಿಶ್ವದ ದೃಷ್ಟಿ ಭಾರತದ ಮೇಲಿದ್ದು, ಪ್ರಪಂಚದ ಸುಧಾರಣೆಗಾಗಿ ಭಾರತ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ಹಾಗೂ ನಿರೀಕ್ಷೆಗಳಿವೆ. ಇದನ್ನು ಪೂರೈಸುವ ಆತ್ಮವಿಶ್ವಾಸ ನಮಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪಿಎಂ ಮೋದಿ, ಭಾರತ ನಿಜಕ್ಕೂ ಅವಕಾಶಗಳ ಭೂಮಿಯಾಗಿದೆ. ಹಲವಾರು ಅವಕಾಶಗಳು ನಮ್ಮನ್ನು ಕಾಯುತ್ತಿವೆ. ಯುವ, ಉತ್ಸಾಹಭರಿತ ಈ ರಾಷ್ಟ್ರವು ಈ ಅವಕಾಶಗಳು ತಪ್ಪಿ ಹೋಗಲು ಬಿಡುವುದಿಲ್ಲ. ಕನಸುಗಳನ್ನು ಸಾಕಾರಗೊಳಿಸುವ ಸಂಕಲ್ಪ ಹಾಗೂ ಪ್ರಯತ್ನಗಳನ್ನು ಮಾಡುತ್ತಿರುವ ದೇಶ ನಮ್ಮದಾಗಿದೆ
'ಸತ್ಯ ಶಿವ ಸುಂದರಂ'
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯೆನ್ ಅವರು ವಾಕ್ ಸ್ವಾತಂತ್ರ್ಯ ಮತ್ತು ಬೆದರಿಕೆ - ಈ ಒಳ್ಳೆಯ ಪದಗಳ ಬಗ್ಗೆ ಮಾತನಾಡಿದ್ದರು. ಈ ಮಾತುಗಳನ್ನು ಕೇಳಿ ಅವರು ಪಶ್ಚಿಮ ಬಂಗಾಳದ ಬಗ್ಗೆ ಮಾತನಾಡುತ್ತಿದ್ದಾರೇ ಅಥವಾ ದೇಶದ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ರಾಷ್ಟ್ರದ ಪ್ರಜಾಪ್ರಭುತ್ವವು ಯಾವುದೇ ಪಾಶ್ಚಿಮಾತ್ಯ ಸಂಸ್ಥೆಯನ್ನು ಆಧರಿಸಿಲ್ಲ, ಬದಲಿಗೆ 'ಸತ್ಯ ಶಿವ ಸುಂದರಂ' ಎಂಬ ತತ್ವಗಳಿಂದ ಪ್ರೇರಿತವಾಗಿದೆ. ಹೀಗೆಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೇ ಹೇಳಿದ್ದಾರೆ. ಭಾರತದ ರಾಷ್ಟ್ರೀಯತೆ ಈಗ ಕಿರಿದಾಗಿಲ್ಲ,ಸ್ವಾರ್ಥಿ ಮತ್ತು ಆಕ್ರಮಣಕಾರಿ ಕೂಡ ಅಲ್ಲ ಎಂದು ಒ'ಬ್ರಿಯೆನ್ಗೆ ಮೋದಿ ಟಾಂಗ್ ನೀಡಿದರು.