ETV Bharat / bharat

ಸಾಮಾಜಿಕ ಅಂತರ ಪಾಲನೆಗೆ ಸಾಕಾಗದು ಈಗಿರುವ ಬಸ್​ಗಳ ಸಂಖ್ಯೆ! - ಕೆಎಸ್​ಆರ್​ಟಿಸಿ

2016-17 ರ 'ರೋಡ್ ಟ್ರಾನ್ಸಪೋರ್ಟ್​ ಇಯರ್​ ಬುಕ್' ಪ್ರಕಾರ ಭಾರತದ ವಿವಿಧ ರಾಜ್ಯಗಳ ಸರ್ಕಾರಗಳು 1,49,100 ಬಸ್​ಗಳ ಒಡೆತನ ಹೊಂದಿವೆ. ಇದು ದೇಶದಲ್ಲಿ ರಸ್ತೆಯ ಮೇಲಿರುವ ಒಟ್ಟು ಬಸ್​ಗಳ ಸಂಖ್ಯೆಯ ಶೇ 8 ರಷ್ಟು ಮಾತ್ರವಾಗಿದೆ. ಇನ್ನುಳಿದ ಶೇ 92 ರಷ್ಟು ಅಂದರೆ 17,15,200 ಬಸ್​ಗಳು ಖಾಸಗಿ ಮಾಲೀಕರು ಅಥವಾ ಕಂಪನಿಗಳ ಒಡೆತನದಲ್ಲಿವೆ.

buses
buses
author img

By

Published : Jun 18, 2020, 5:10 PM IST

ಕೊರೊನಾ ವೈರಸ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹೊಸ ಸಹಜ ಜೀವನವಾಗಿದೆ. ಇಷ್ಟು ದಿನ ಬಸ್, ರೈಲು, ವಿಮಾನ ಅಥವಾ ಸ್ಥಳೀಯ ಆಟೊಗಳಲ್ಲಿ ಪ್ರಯಾಣಿಕರು ಒಬ್ಬರ ಪಕ್ಕದಲ್ಲಿ ಇನ್ನೊಬ್ಬರು ಕುಳಿತು ಪ್ರಯಾಣಿಸುತ್ತಿದ್ದರು. ಆದರೆ ಈಗ ಆ ಸಂತಸದ ದಿನಗಳು ಉಳಿದಿಲ್ಲ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.

ಭಾರತದಲ್ಲಿರುವ ಬಸ್​ಗಳ ಅಂಕಿ ಸಂಖ್ಯೆ

2016-17 ರ 'ರೋಡ್ ಟ್ರಾನ್ಸಪೋರ್ಟ್​ ಇಯರ್​ ಬುಕ್' ಪ್ರಕಾರ ಭಾರತದ ವಿವಿಧ ರಾಜ್ಯಗಳ ಸರ್ಕಾರಗಳು 1,49,100 ಬಸ್​ಗಳ ಒಡೆತನ ಹೊಂದಿವೆ. ಇದು ದೇಶದಲ್ಲಿ ರಸ್ತೆಯ ಮೇಲಿರುವ ಒಟ್ಟು ಬಸ್​ಗಳ ಸಂಖ್ಯೆಯ ಶೇ 8 ರಷ್ಟು ಮಾತ್ರವಾಗಿದೆ. ಇನ್ನುಳಿದ ಶೇ 92 ರಷ್ಟು ಅಂದರೆ 17,15,200 ಬಸ್​ಗಳು ಖಾಸಗಿ ಮಾಲೀಕರು ಅಥವಾ ಕಂಪನಿಗಳ ಒಡೆತನದಲ್ಲಿವೆ.

ಸಾರಿಗೆ ಮತ್ತು ಅಭಿವೃದ್ಧಿ ನೀತಿ ಸಂಸ್ಥೆಯ ಪ್ರಕಾರ ದೆಹಲಿ ಹಾಗೂ ಮುಂಬೈನಂಥ ಮಹಾನಗರಗಳ ಶೇ 20 ರಷ್ಟು ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ದೆಹಲಿಯಲ್ಲಿ ಪ್ರತಿದಿನ ಪ್ರಯಾಣಿಸುವ ಸರಿಸುಮಾರು 4.3 ಮಿಲಿಯನ್ ಪ್ರಯಾಣಿಕರಿಗೆ ಕನಿಷ್ಠ 14,300 ಬಸ್​ಗಳು ಬೇಕಾಗುತ್ತವೆ. ಆದರೆ ರಾಜಧಾನಿ ದೆಹಲಿಯಲ್ಲಿ ಇರುವುದೇ 5,576 ಬಸ್​ಗಳು. ಮಹಾರಾಷ್ಟ್ರದ ಮುಂಬೈನಲ್ಲಿ ಸರಕಾರಿ ಸಾರಿಗೆ ಸಂಸ್ಥೆ ಬೆಸ್ಟ್​ 2,865 ಬಸ್​ಗಳ ಮೂಲಕ 2.2 ಮಿಲಿಯನ್​ ಪ್ರಯಾಣಿಕರನ್ನು ಸಾಗಿಸುತ್ತವೆ. ಇನ್ನು ಟಿಎಸ್​ಆರ್​ಟಿಸಿ 10,460 ಬಸ್​ಗಳನ್ನು ಹೊಂದಿದ್ದು, ಪ್ರತಿದಿನ ಕನಿಷ್ಠ 1 ಕೋಟಿ ಜನ ಇವುಗಳಲ್ಲಿ ಪ್ರಯಾಣಿಸುತ್ತಾರೆ.

ಸಾಮಾಜಿಕ ಅಂತರ ಪಾಲಿಸಲು ಇನ್ನೂ 24 ಪಟ್ಟು ಹೆಚ್ಚು ಬಸ್​ ಬೇಕು!

ಕೋವಿಡ್​ನ ಸಾಮಾಜಿಕ ಅಂತರ ಪಾಲಿಸಬೇಕಾದರೆ ಈಗಿರುವ ಬಸ್​ಗಳ ಸಂಖ್ಯೆಗಿಂತ ಇನ್ನೂ 24 ಪಟ್ಟು ಹೆಚ್ಚಿನ ಬಸ್​ಗಳು ದೇಶಕ್ಕೆ ಬೇಕಾಗುತ್ತವೆ ಎಂದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. ಒಂದು ಬಸ್​ನಲ್ಲಿ 30 ಜನ ಮಾತ್ರ ಪ್ರಯಾಣಿಸುವ ನಿಯಮ ಪಾಲಿಸಬೇಕಾದರೆ ಪ್ರತಿದಿನ ಸರಾಸರಿ 25 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲು ದೇಶಕ್ಕೆ 6,66,667 ಬಸ್​ಗಳ ಅಗತ್ಯವಿದೆ. ಆದರೆ ದೇಶದಲ್ಲಿ ಸದ್ಯ 25,000 ಬಸ್​ಗಳು ಮಾತ್ರ ಸಂಚರಿಸುತ್ತಿವೆ.

ಪ್ರಯಾಣಕ್ಕೆ ಜನರ ಹಿಂದೇಟು!

ಕೋವಿಡ್​ಗಿಂತ ಮುಂಚಿನ ಸ್ಥಿತಿಗೆ ಹೋಲಿಸಿದರೆ ಪ್ರಸ್ತುತ ಶೇ 67 ರಷ್ಟು ಟ್ರಾನ್ಪೋರ್ಟ್ ಕಂಪನಿಗಳು ಕೇವಲ ವಿಶೇಷ ಅಥವಾ ತುರ್ತು ಸೇವೆಗಳಿಗಾಗಿ ಮಾತ್ರ ಬಸ್​ ಓಡಿಸುತ್ತಿವೆ. ಮೊದಲಿಗಿಂತ ಪ್ರಯಾಣಿಕರ ಸಂಖ್ಯೆ ಶೇ 90 ರಷ್ಟು ಕಡಿಮೆಯಾಗಿದೆ. ಶೇ 81 ರಷ್ಟು ಬಸ್​ಗಳಿಗೆ ಪ್ರಯಾಣಿಕರೇ ಇಲ್ಲ. ಕೋವಿಡ್​ ಮುಂಚೆ ಸಾರಿಗೆಗೆ ಇದ್ದ ಬೇಡಿಕೆಯ ಶೇ 50 ರಷ್ಟು ಸಹ ಇನ್ನು ಮುಂದೆ ಇರಲಾರದು ಎಂಬುದು ಬಹುತೇಕ ಟ್ರಾನ್ಸಪೋರ್ಟ್ ಕಂಪನಿ ಮಾಲೀಕರ ನಂಬುಗೆಯಾಗಿದೆ.

ಸಾರ್ವಜನಿಕ ಸಾರಿಗೆಯ ಅನಿವಾರ್ಯತೆ

ಈಗಲೂ ಬಹುತೇಕ ಭಾರತೀಯರು ಸ್ವಂತ ಕಾರ್ ಕೊಳ್ಳುವಷ್ಟು ಆರ್ಥಿಕ ಸಬಲರಾಗಿಲ್ಲ. ಅಷ್ಟಕ್ಕೂ ಕೈಲಾಗುವವರು ಸ್ವಂತದ ಕಾರ ಕೊಂಡರೂ ಅದರ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲಾಗದ ಸಮಸ್ಯೆಯಾಗಲಿದೆ. ಸ್ವಂತದ ವಾಹನ ಕೊಳ್ಳುವ ಕುರಿತಂತೆ ಭಾರತೀಯ ಮನಸ್ಥಿತಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾಗುತ್ತಿದೆ. ಹೆಚ್ಚುವರಿ ಬಸ್ ಅಥವಾ ಹೆಚ್ಚುವರಿ ಖಾಸಗಿ ವಾಹನಗಳು ರಸ್ತೆಗಿಳಿದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ವಾಯುಮಾಲಿನ್ಯ ಸಮಸ್ಯೆಗಳು ಗಂಭೀರವಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.