ಮುಂಬೈ: ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ರಸ್ತೆ ಗುಂಡಿಗಳ ಸ್ಥಿತಿ ಸದ್ಯ ಮುಂಬೈನಲ್ಲೂ ನಿರ್ಮಾಣವಾಗಿದ್ದು, ಯುವ ವೈದ್ಯೆ ದಾರುಣವಾಗಿ ಮೃತಪಟ್ಟಿದ್ದಾರೆ.
23 ವರ್ಷದ ವೈದ್ಯೆ ನೇಹಾ ಶೇಖ್ ಕ್ಲಿನಿಕ್ ಮುಗಿಸಿಕೊಂಡು ಸಹೋದರನೊಂದಿಗೆ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಕೂಟರ್ ಚಲಾವಣೆ ಮಾಡಿಕೊಂಡು ಹೋಗುತ್ತಿದ್ದಾಗ ಚಕ್ರ ಏಕಾಏಕಿಯಾಗಿ ರಸ್ತೆಯಲ್ಲಿದ್ದ ಹೊಂಡವೊಂದಕ್ಕೆ ಇಳಿದಿದೆ. ಈ ವೇಳೆ ನೇಹಾ ಆಯಾತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ವೇಗವಾಗಿ ಹಿಂದಿನಿಂದ ಬಂದಿರುವ ಟ್ರಕ್ ಆಕೆಯ ಮೇಲೆ ಹರಿದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ರು.
ಮುಂಬೈನ ಬಿವಾಡಿಯಲ್ಲಿ ಈ ಘಟನೆ ನಡೆದಿದ್ದು, ಮುಂದಿನ ತಿಂಗಳು ಈಕೆಯ ಮದುವೆ ನಡೆಯಬೇಕಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಮಾಲೀಕ ಹಾಗೂ ಡ್ರೈವರ್ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಖಂಡಿಸಿ ಮುಂಬೈನಲ್ಲಿ ಕೆಲ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.